ಹೊಸ ದಿಶೆಗೆ…

ಹೊಸ ದಿಶೆಗೆ…

ವರ್ತಮಾನದ ಗಳಿಗೆಗಳಲಿ
ಸಾಗಬೇಕಿದೆ ಜೊತೆಯಾಗಿ
ನಡೆದು ಬಂದ ಅನುಭವವು
ಹೊಸ ಚಿಗುರಿನ ದಿಶೆಗೆ…

ಸುಭದ್ರ ದೃಢ ಕರಗಳಲಿ
ಎಳೆಯ ಬೆರಳುಗಳು ಬೆಸೆದು
ನಿಶ್ಚಿಂತೆಯ ಭರವಸೆಯ
ಭಾವ ತುಂಬಿದೆ ಇಂದು…

ಪುಟ್ಟ ಹೆಜ್ಜೆಗಳನಿಡುತ
ದಿಟ್ಟ ನಡೆಯ ಕಲಿಯುತ
ಸೀಳಿ ನಡೆದು ಸಾಗಬೇಕು
ಮಂಜು ಮುಸುಕು ಸರಿಸುತ…

ಬಾಳ ಪಯಣ ಸವೆಸಲು
ಇದುವೆ ಪಾಠ ಮಗುವೆ
ಬೇಡ ನಿನಗೆ ಜಗದ ಭೀತಿ
ಇರಲು ನೀತಿ ಪ್ರೀತಿ…!!

ರಚನೆ: ಹಮೀದಾ ಬೇಗಂ ದೇಸಾಯಿ ಸಂಕೇಶ್ವರ 

Don`t copy text!