ಮಸ್ಕಿಯಲ್ಲಿ ಶೀಘ್ರ ಸಂಚಾರಿ ನ್ಯಾಯಪೀಠ ಆರಂಭ

e-ಸುದ್ದಿ ಮಸ್ಕಿ:

ಪಟ್ಟಣದಲ್ಲಿ ಸಂಚಾರಿ ಪೀಠ ಆರಂಭಕ್ಕೆ ಹೈಕೋರ್ಟ್ ಹಸಿರು ನಿಶಾನೆ ತೋರಿಸಿದ್ದು ಶೀಘ್ರದಲ್ಲಿಯೇ ವಾರದಲ್ಲಿ ಮೂರು ದಿನ ಸಂಚಾರಿ ಪೀಠ ಆರಂಭವಾಗಲಿದೆ ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಮಾರುತಿ ಬಗಾಡೆ ತಿಳಿಸಿದರು.

ನ್ಯಾಯಪೀಠ ಸ್ಥಾಪನೆಗೆ ಹೈಕೋರ್ಟ್ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಕಟ್ಟಡ ಪರಿಶೀಲನೆ ನಡೆಸಿದ್ದು ಈ ಕೃಷಿ ಉತ್ಪನ್ನ ಮಾರುಕಟ್ಟೆಕಟ್ಟಡ ಸೂಕ್ತವಾಗಿದೆ, ಈ ಬಗ್ಗೆ ಹೈಕೋರ್ಟ್ ಗೆ ವರದಿ ಸಲ್ಲಿಸಲಾಗುವುದು ಎಂದರು.

ಮಸ್ಕಿ ಕೃಷಿ ಉತ್ಪನ್ನ ಮಾರುಕಟ್ಟೆ ಕಟ್ಟಡವನ್ನು ನ್ಯಾಯಾಲಯ ಕಟ್ಟಡವನ್ನಾಗಿ ಪರಿವರ್ತಿಸಲು $ 30 ಲಕ್ಷ ಕ್ಕೂ ಹೆಚ್ಚು ಹಣ ಬೇಕಾಗುತ್ತಿದೆ. ಸರ್ಕಾರದಿಂದ ಹಣ ಬಂದು ಕಾಮಗಾರಿ ಆರಂಭಿಸಲು ವಿಳಂಭವಾಗುತ್ತಿದೆ. ನಾವೇ ಹಣ ಸಂಗ್ರಹ ಮಾಡಿ ಕಾಮಗಾರಿ ಆರಂಭಿಸುತ್ತೇವೆ ಎಂದು ಸ್ಥಳೀಯ ವಕೀಲರು ಜಿಲ್ಲಾ ನ್ಯಾಯಾಧೀಶ ಮಾರುತಿ ಬಗಾಡೆ ಅವರಿಗೆ ತಿಳಿಸಿದರು. ಇದಕ್ಕೆ ಸಮ್ಮತಿ ಸೂಚಿಸಿದರು. ಎಷ್ಟು ಬೇಗ ಕಟ್ಟಡ ಪೂರ್ಣಗೊಳಿಸುತ್ತೀರಿ ಅಷ್ಟುಬೇಗ ನ್ಯಾಯಪೀಠ ಬರಲಿದೆ ನ್ಯಾಯಧೀಶರು ವಕೀಲರಿಗೆ ತಿಳಿಸಿದರು.

ಇದಕ್ಕೂ ಮುಂಚೆ ಜಿಲ್ಲಾ ನ್ಯಾಯಧೀಶ ಮಾರುತಿ ಬಗಾಡೆ ಅವರು ಪಟ್ಟಣದ ಮಲ್ಲಿಕಾರ್ಜುನ ಬೆಟ್ಟಕ್ಕೆ ತೆರಳಿ ಮಲ್ಲಿಕಾರ್ಜುನನ ದರ್ಶನ ಪಡೆದುಕೊಂಡರು.

ಜಿಲ್ಲಾ ಕಾನೂನು ಸೇವಾ ಸೇವೆಗಳ ಪ್ರಾಧಿಕಾರದಿಂದ ನ. 12 ರಂದು ಇ-ಲೋಕ ಅದಾಲತ್-ಮೇಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿದೆ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧೀಶ ಮಾರುತಿ ಬಗಾಡೆ ತಿಳಿಸಿದರು.

ಸಂಚಾರಿ ಪೀಠ ಆರಂಭಕ್ಕೆ ಗುರುತಿಸಿದ ಕೃಷಿ ಮಾರುಕಟ್ಟೆಯ ಕಟ್ಟಡವನ್ನು ಭಾನುವಾರ ಪರಿಶೀಲಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿ ಕಳೆದ ಭಾರಿ 25 ಸಾವಿರ ಪ್ರಕರಣಗಳನ್ನು ಲೋಕ್ ಅದಲಾತ್ ನಲ್ಲಿ ಇತ್ಯಾರ್ಥ ಪಡಿಸಲಾಗಿತ್ತು. ಈ ಭಾರಿ 50 ಸಾವಿರ ಪ್ರಕರಣಗಳನ್ನು ಇತ್ಯಾರ್ಥ ಪಡಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.

ಅದಾಲತ್ ನಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ಹೊರತು ಪಡಿಸಿ ರಾಜಿಯಾಗಬಲ್ಲ ವ್ಯಾಜ್ಯವನ್ನು ಇಬ್ಬರು ಕಕ್ಷಿದಾರರ ಸಮ್ಮುಖದಲ್ಲಿ ಇತ್ಯಾರ್ಥ ಪಡಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲೆಯ ಸಾರ್ವಜನಿಕರು ಕ್ರಿಮಿನಲ್ ಪ್ರಕರಣಗಳು ಹೊರತು ಪಡಿಸಿ ಸಿವಿಲ್ ಸೇರಿದಂತೆ ಎಲ್ಲಾ ಪ್ರಕರಣಗಳನ್ನು ಇ-ಲೋಕ್ ಅದಾಲತ್ ನಲ್ಲಿ ಬಗೆಹರಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ದಯಾನಂದ ಎಂ. ಬೆಲೂರು, ನ್ಯಾಯಾಧೀಶ ಚಂದ್ರಶೇಖರ ದಿಡ್ಡಿ, ನ್ಯಾಯಧೀಶರಾದ ವಿನಾಯಕ ಮಾಯಣ್ಣನವರ, ಶಿವಕುಮಾರ ದೇಶಮುಖ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ತಹಶೀಲ್ದಾರ್ ಕವಿತಾ ಆರ್. ಸರ್ಕಲ್ ಇನ್ ಸ್ಪೆಕ್ಟರ್ ಸಂಜೀವ ಬಳಿಗಾರ, ಸಬ್ ಇನ್ ಸ್ಪೆಕ್ಟರ್ ಸಿದ್ದರಾಮ ಬಿದರಾಣಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ ಸಂದೀಪ್, ಪುರಸಭೆ ವ್ಯವಸ್ಥಾಪಕ ಸತ್ಯನಾರಾಯಣ, ತಾಲ್ಲೂಕಿನ ನ್ಯಾಯವಾದಿಗಳು ಇದ್ದರು.

Don`t copy text!