ದಸರಾ
ಕನ್ನಡ ನಾಡ ಹಬ್ಬ
ಕನ್ನಡಿಗರ ಹೆಮ್ಮೆಯ ಹಬ್ಬ
ನಾಡದೇವಿಯ ಪೂಜಿಸುವ ಹಬ್ಬ
ತಾಯಿ ಭುವನೇಶ್ವರಿಯ
ಆರಾಧಿಸುವ ಸಂಭ್ರಮದ ಹಬ್ಬ
ನವವಿಧ ರೂಪದಲ್ಲಿ
ನವವಿಧ ಭಕ್ತಿಯಲಿ
ನವ ವಿಕಾರಕಳೆ ಎಂದು ನವ ದುರ್ಗಿಯರನ್ನು ಬೇಡುವ ಹಬ್ಬ
ಶೈಲಪುತ್ರಿಯನ್ನು ನೆನೆದು
ಆತ್ಮ ಜ್ಞಾನವಬೇಡುವ
ಬ್ರಹ್ಮಚಾರಿಣಿಯ ಭಜಿಸಿ
ಬ್ರಹ್ಮ ರೂಪವಾಗುವಂತೆ
ಹರಸೆಂದು ವರಬೇಡುವ ಹಬ್ಬ
ಚಂದ್ರನಂತೆ ತಂಪನಿವ
ಚಂದ್ರಘಂಟಾಳ ಮಡಿಲಲಿ
ದಯೆ ಮಮತೆ ವಾತ್ಸಲ್ಯ ಪಡೆದು
ಕೂಷ್ಮಂಡ ದೇವಿಯಲಿ
ತ್ರಿವಿಧ ತಾಪಗಳ ಕಳೆಯಂದು
ಪ್ರೀತಿಯಿಂದ ಬೇಡುವ ಹಬ್ಬ
ಸ್ಕಂದಮಾತೆಯನ್ನು ಭಜಿಸಿ
ಏಳು ಲೋಕಗಳಿಂದ ಪಾರುಮಾಡಿ ಎನ್ನ ಪಾವನಗೊಳಿಸೆಂದು
ಕಾತ್ಯಾಯನೀಯ ಪೂಜಿಸಿ
ತೇಜುಮಯ ಶಕ್ತಿ ದಯಪಾಲಿಸೆಂದು
ಭಕ್ತಿಯಿಂದ ಬೇಡುವ ಹಬ್ಬ
ಕಾಳರಾತ್ರಿಯನ್ನು ನೆನೆದು
ಕಾಳ ಕಷ್ಟಗಳ ಪರಿಹರಿಸೆಂದು
ಇಷ್ಟದಿಂದ ಪೂಜಿಸುವ
ಮಹಾಗೌರಿಯನ್ನು ನೆನೆದು
ತಪವ ಮಾಡುವ ತಾಳ್ಮೆನೀಡೆಂದು
ಬೇಡುವ ಹಬ್ಬ
ಸಿದ್ಧಿದಾತ್ರಿ ನಿನ್ನ ಅಭಯ ಹಸ್ತ
ನನ್ನ ಮೇಲಿಟ್ಟು ಸಕಲ ಸಿದ್ಧಿಯನು
ನೀಡೆಂದು ಭಕ್ತಿ ಭಾವದಿ
ಭಜಿಸುವ ನವರಾತ್ರಿ ಹಬ್ಬ
ದಸ ದಿಕ್ಕುಗಳ ಮೇಲೆ
ವಿಜಯ ಸಾಧಿಸಿದವಳ
ವಿಜಯಮಾಲೆಯ ತೊಟ್ಟು
ನವವಿಕಾರಗಳ ಸಂಹರಿಸುವವಳ ಪೂಜಿಸುವ ಹಬ್ಬ ದಸಹರಹಬ್ಬ
ವಿಜಯ ದಶಮಿಯ ಹಬ್ಬ
–ಡಾ. ನಿರ್ಮಲ ಬಟ್ಟಲ, ಬೆಳಗಾವಿ