ನೇತ್ರ_ತಜ್ಞ_ಡಾಕ್ಟರ್_ಎಂ_ಸಿ_ಮೋದಿಯವರ ಜನ್ಮದಿನ
ಇಂದಿನ ಬಾಗಲಕೋಟೆ ಜಿಲ್ಲೆಯ ಬೀಳಗಿ ಇವರು ಜನಿಸಿದ ಊರು.ಪೂರ್ಣ ಹೆಸರು:ಮುರುಗಪ್ಪ_ಚನ್ನವೀರಪ್ಪ ಮೋದಿ.
ಬೆಳಗಾವಿಯ ಬಿ_ಎಂ_ಕಂಕನವಾಡಿ ಆಯುವೇ೯ದ ಮಹಾವಿದ್ಯಾಲಯದ ಪದವೀಧರ.ಓದಿದ್ದು ಆಯುರ್ವೇದ ಪದ್ದತಿಯ ಔಷಧೋಪಚಾರ;ಒಲಿದು ಬಂದದ್ದು,
ನೇತ್ರ ಶಸ್ತ್ರಚಿಕಿತ್ಸೆ.
ಆಗಷ್ಟ್ 8 1942 ರಂದು ಮುಂಬೈನಲ್ಲಿ ಮಹಾತ್ಮಾ ಗಾಂಧೀಜಿಯವರ ಪ್ರಾಥ೯ನಾ ಸಭೆಯಲ್ಲಿ ಇವರು ಆಕಸ್ಮಿಕವಾಗಿ ಭಾಗವಹಿಸುತ್ತಾರೆ.ಅಂದು ಆ ಸಭೆಯಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ “ಕ್ವಿಟ್_ಇಂಡಿಯಾ” ನಿಣ೯ಯವನ್ನು_ ತೆಗೆದುಕೊಂಡದ್ದು_ಇತಿಹಾಸ.
ಹಾಗೆಯೇ ಅದು ಡಾಕ್ಟರ್ ಮೋದಿಯವರ ಜೀವನ ಪಥವನ್ನೇ ಬದಲಿಸಿದ,ನೇತ್ರ ಶಸ್ತ್ರಚಿಕಿತ್ಸೆಯಲ್ಲಿ ಅಧ್ಭುತ ಸಾಧನೆಯನ್ನು,ಚರಿತ್ರೆಯನ್ನು ಸೃಷ್ಟಿಸಲು,ಇವರ ಹೆಸರು ಗಿನ್ನಿಸ್ ದಾಖಲೆ ಸೇರಲು ಅನುವು ಮಾಡಿಕೊಟ್ಟ ಶುಭದಿವಸವೂ ಕೂಡ.
ಪ್ರಾಥ೯ನಾ ಸಭೆಯಲ್ಲಿ ಸೇರಿದ್ದ ಅನೇಕ ದೇಶಭಕ್ತ ಮಹನೀಯರ ಮಾತುಗಳಿಂದ ಪ್ರಭಾವಿತರಾಗಿ,ತಮಗಿದ್ದ ಸಾವಿರಾರು ರೂಪಾಯಿಗಳ ಆದಾಯದ ಮೂಲವಾಗಿದ್ದ ಖಾಸಗಿ ವೈದ್ಯ ವೃತ್ತಿಯನ್ನು ತೊರೆಯಲು ಮನಸ್ಸು ಮಾಡಿ, ಬಿಡಿಗಾಸು ಪಡೆಯದೇ ಅಂಧರಿಗೆ ನೇತ್ರಚಿಕಿತ್ಸೆ ಮಾಡಲು ಸಂಕಲ್ಪಿಸುತ್ತಾರೆ.
1943 ರಿಂದ ಆರಂಭವಾದ ಇವರ ಉಚಿತ ಸೇವೆ 2005 ರವರೆಗೆ ಅವಿರತವಾಗಿ ನಡೆದುಕೊಂಡು ಬಂದದ್ದು ಪವಾಡಸದೃಶ. ಸಾವ೯ಜನಿಕರು,ಸಂಘ ಸಂಸ್ಥೆಗಳು,ದಾನಿಗಳು ಇವರ ನೆರವಿಗೆ ಬಂದದ್ದು ಇವರ ಪುಣ್ಯವಿಶೇಷ.
ದೇಶಾದ್ಯಂತ ಸುಮಾರು 42000ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಕ್ಯಾಂಪ್ ಏಪ೯ಡಿಸಿ,12 ಲಕ್ಷಕ್ಕೂ ಹೆಚ್ಚು ರೋಗಿಗಳ ತಪಾಸಣೆ ಮಾಡಿ,ಎಂಟು ಲಕ್ಷಕ್ಕೂ ಹೆಚ್ಚು ಕ್ಯಾಟರಾಕ್ಟ್ ಶಸ್ತ್ರಚಿಕಿತ್ಸೆಗಳನ್ನು ಮಾಡಿದ ಪುಣ್ಯದ ಕೈಗಳು ಇವರದು.
ಅಷ್ಟೇ ಅಲ್ಲ,ಶಸ್ತ್ರಚಿಕಿತ್ಸೆ ಗೊಳಗಾದವರೆಲ್ಲರಿಗೂ ಉಚಿತವಾಗಿ ಕನ್ನಡಕವನ್ನು ನೀಡಿದವರು.
ಬಲಗೈಯಷ್ಟೇ ಕುಶಲತೆಯಿಂದ ಎಡಗೈಯಲ್ಲಿಯೂ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಅಪರೂಪದ ಕೈಗಳು ಇವರದು.
#ಖ್ಯಾತ_ಅಂಧಲೇಖಕಿ_ಅಮೆರಿಕದ_ಹೆಲನ್_ಕೆಲ್ಲರ್ ಇವರ ಶಸ್ತ್ರಚಿಕಿತ್ಸೆ ಕ್ಯಾಂಪ್ ಗೆ ಭೇಟಿ ನೀಡಿ,ಇವರನ್ನು
“#Have_you_insured_your_hands?”
ಎಂದು ಕೇಳಿದ್ದಕ್ಕೆ, ಮೋದಿಯವರ ಮುಗ್ದ ನಕ್ಕು ಸುಮ್ಮನಾದರಂತೆ.
ಎರಡೂ ಕೈಗಳಲ್ಲಿಯೂ ಒಂದೇ ರೀತಿಯ ಕೌಶಲ್ಯತೆಯಿಂದ ಆಪರೇಷನ್ ಮಾಡಿದ ಮತ್ತೊಂದು ಉದಾಹರಣೆ ಇದುವರೆಗೆ ಇಲ್ಲ.ಈ ಕೌಶಲ್ಯವನ್ನು #AMBIDEXTROUS ಎಂದು ಕರೆಯಲಾಗುತ್ತದೆ.
ಅತ್ಯಂತ ಸೂಕ್ಷ್ಮ ಆಪರೇಷನ್ ಗಳನ್ನು ಎಡಗೈಯಿಂದಲೂ ಸಮಥ೯ವಾಗಿ ಮಾಡಬಲ್ಲ ದೈವದತ್ತವಾದ ಕುಶಲತೆ ಅವರಿಗೆ ಒಲಿದಿತ್ತು.
ಒಂದು ದಿನಕ್ಕೆ 600 ರಿಂದ 700 ಆಪರೇಷನ್ ಗಳನ್ನು ಸುಲಲಿತವಾಗಿ,ಅನಾಯಾಸವಾಗಿ ಮಾಡುತ್ತಿದ್ದರು. ಇವರು ಮಾಡಿದ ಆಪರೇಷನ್ ಗಳಲ್ಲಿ ವೈಫಲ್ಯವಾದವು ತೀರಾ ಗೌಣ.
ಇವರು ಕೊಟ್ಟ ಸೂಚನೆಗಳನ್ನು ಸರಿಯಾಗಿ ಪಾಲಿಸದೆ, ಕಾಲಕ್ಕೆ ಸರಿಯಾಗಿ ಔಷಧಗಳನ್ನು ಸೇವಿಸದೆ ವಿಫಲವಾದವುಗಳೇ ಹೊರತು,ಇವರ ಚಿಕಿತ್ಸಾ ಕ್ರಮದಿಂದಲ್ಲವೆಂದರೆ ನಂಬಲಸಾಧ್ಯವಾದ ವಿಷಯ.
ಮೊಟ್ಟಮೊದಲ ಬಾರಿಗೆ ಸಂಚಾರಿ_ನೇತ್ರಚಿಕಿತ್ಸೆ, ಸಂಚಾರಿ ನೇತ್ರ ಶಸ್ತ್ರಚಿಕಿತ್ಸೆಗಳನ್ನು ತಂದ ಕೀರ್ತಿ ಇವರದು.
1956 ರಲ್ಲಿ ಪದ್ಮಶ್ರೀ,
1968 ರಲ್ಲಿ ಪದ್ಮಭೂಷಣ ಹಾಗೂ ಅನೇಕ ಅಂತರಾಷ್ಟ್ರೀಯ ಪ್ರಶಸ್ತಿಗಳು ಇವರಿಗೆ ಸಂದಿವೆ.
ಅಮೆರಿಕದ_Spartanburg ನ ಮೇಯರ್ ಇವರಿಗೆ ಗೌರವ ಪೌರತ್ವ ನೀಡಿ ಗೌರವಿಸಿದ್ದರು.. ಕನಾ೯ಟಕ ವಿಧಾನ ಪರಿಷತ್ತಿನ ಸದಸ್ಯರಾಗಿ 1990 ರಲ್ಲಿ ನೇಮಕಗೊಂಡಿದ್ದರು.
ದಾವಣಗೆರೆಯಲ್ಲಿ ನೇತ್ರ ಚಿಕಿತ್ಸೆಯ ಉಚಿತ ಆಸ್ಪತ್ರೆ ಕಟ್ಟಸಿದ್ದಾರೆ.
ಬೆಂಗಳೂರಿನ West of Chord Road ನಲ್ಲಿರುವ ಮೋದಿ ಕಣ್ಣಿನ ಆಸ್ಪತ್ರೆ ಇವರ ಕೊಡುಗೆ.
“ನನ್ನ_ಸರದಿ_ಬಂದ_ದಿನ_ಸದ್ದಿಲ್ಲದೆ_ಅದೃಶ್ಯನಾಗಿಬಿಡುವೆ ನಾನು”ಎನ್ನುವುದು ಇವರ ಮಂತ್ರವಾಗಿತ್ತು.
ಲಕ್ಷಾಂತರ ಅಂಧರ ಬಾಳಿಗೆ ಕಣ್ಣಾದ ಇವರು,ಕಾಣದ ಲೋಕಕ್ಕೆ 11-11-2005 ರಂದು ಸದ್ದು ಮಾಡದೆಯೇ ಸೇರಿಬಿಟ್ಟರು.
🙏🙏
ಅವರ ಜನ್ಮದಿನ ಇಂದು ನೆನಪಿನ ಅಂಗಳದ ಗೌರವ ನಮನ ಮತ್ತು ಸ್ಮರಣೆಗಳು..