ಓದುಗರ ಪ್ರೀತಿ, ಅಭಿಮಾನ ದೊಡ್ಡದು
ಮಾನ್ಯರೇ,
e-ಸುದ್ದಿ ಗೆ ಎರಡು ವರ್ಷ ಪೂರೈಸಿ ಮೂರನೇ ವರ್ಷಕ್ಕೆ ಕಾಲಿಡುವ ಸಂಭ್ರಮದಲ್ಲಿರುವಾಗ ಓದುಗರು ತೋರಿಸುವ ಪ್ರೀತಿ, ವಿಶ್ವಾಸಕ್ಕೆ ಮಾತುಗಳು ಮೂಕವಾಗಿವೆ. ಮನಸ್ಸು ತುಂಬಿ ಬಂದಿದೆ.
ಈ ವರ್ಷದಿಂದ ಓದಗರು ಚಂದಾ ಹಣವಾಗಿ ವರ್ಷಕ್ಕೆ 300 ರೂ. ಕೊಡಿ ಎಂಬ ನಮ್ಮ ಮನವಿಗೆ ಬಹಳಷ್ಟು ಜನ ಸ್ಪಂದಿಸಿದ್ದಾರೆ. ಕೆಲವರು ಹಣವನ್ನು ಕಳಿಸಿದ್ದಾರೆ. ಅವರಿಗೆಲ್ಲ ಕೃತಜ್ಞತೆ ಸಲ್ಲಿಸುವೆ
ಎಂಬ ಪದ ಸಣ್ಣ ಶಬ್ದವಾಗುತ್ತದೆ. ನಿಜವಾಗಿಯು ಹಣ ಕಳಿಸಿದವರ ಸಹಾಯ ಮರೆಯುವಂತಿಲ್ಲ.
ಚಂದಾ ಹಣ ಕಳಿಸಲು ಈ ತಿಂಗಳು 31-10-22 ಕೊನೆಯ ದಿನಾಂಕವಾಗಿದೆ. ದಯವಿಟ್ಟು ಚಂದಾ ಹಣ ಕಳಿಸಲು ಇಚ್ಚಿಸುವವರು ಆದಷ್ಟು ಬೇಗ ಕಳಿಸಿದರೆ ಒಳ್ಳೆಯದು.
ಇನ್ನೂ ಮುಂದೆ e-ಸುದ್ದಿ ತಂಡ ಮತ್ತಷ್ಟು ಕ್ರಿಯಾಶೀಲತೆ ಯಿಂದ ತೊಡಗಿಕೊಳ್ಳಲಿದೆ. ರಾಜ್ಯದ ನಾನ ಭಾಗಗಳಲ್ಲಿ ನಡೆಯುವ ವಿದ್ಯಮಾನಗಳನ್ನು ಓದುಗರಿಗೆ ಕೊಡಲು ಉತ್ಸುಕರಾಗಿದ್ದೇವೆ. ಹೊಸತನ , ಹೊಸಶೈಲಿಯಿಂದ ಮತ್ತಷ್ಟು ಓದುಗರಿಗೆ ಆಪ್ತವಾಗಬೇಕೆಂಬುದು ನಮ್ಮ ಅಪೇಕ್ಷೆ. ನಿಮ್ಮ ಸಹಕಾರ, ಸಲಹೆ, ಟೀಕೆ, ಟಿಪ್ಪಣಿಗಳಿಗೆ ಸದಾ ಸ್ವಾಗತ.
e-ಸುದ್ದಿ ಗೆ ಚಂದಾದಾರಗಲು ಇಚ್ಚಿಸುವವರು ನನ್ನ ಕರೆಗಂಟೆ 9448805067 ಗೆ ಸಂಪರ್ಕಿಸಿ.
e-ಸುದ್ದಿ ಓದುಗರಿಗೆಲ್ಲ ಮತ್ತೊಮ್ಮೆ ಧನ್ಯವಾದಗಳು.
🙏🙏🙏
ಇಂತಿ ನಿಮ್ಮ
ಸಂಪಾದಕ
ವೀರೇಶ ಸೌದ್ರಿ ಮಸ್ಕಿ