ಭಾರತೀಯ ಮಹಿಳೆ ಕುಟುಂಬದ ಸ್ವಾಸ್ಥ್ಯ ಕಾಪಾಡುತ್ತಾಳೆ-ನಿರ್ಭಯಾನಂದ ಸ್ವಾಮೀಜಿ


ಭಾರತೀಯ ಮಹಿಳೆ ಕುಟುಂಬದ ಸ್ವಾಸ್ಥ್ಯ  ಕಾಪಾಡುತ್ತಾಳೆ-ನಿರ್ಭಯಾನಂದ ಸ್ವಾಮೀಜಿ

e-ಸುದ್ದಿ ಮಸ್ಕಿ

ಭಾರತೀಯ ಸಂಸ್ಸೃತಿಯನ್ನು ಉಳಿಸಿಕೊಂಡು ಹೋಗುವಲ್ಲಿ ಮಹಿಳೆಯರ ಪಾತ್ರ ದೊಡ್ಡದಿದ್ದು ಕುಟುಂಬದ ಸ್ವಾಸ್ಥ್  ಮತ್ತು ಭಾರತೀಯ ಸಂಸ್ಕೃತಿ ಮಹಿಳೆಯರಿಂದ ಉಳಿದುಕೊಂಡಿದೆ ಎಂದು ಗದಗ ಮತ್ತು ವಿಜಯಪುರದ ರಾಮಕೃಷ್ಣ ಆಶ್ರಮದ ಮುಖ್ಯಸ್ಥರಾದ ನಿರ್ಭಯಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಶುಕ್ರವಾರ ಆಯೋಜಿಸಿದ್ದ ನವರಾತ್ರಿ ಉತ್ಸವದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಡಿದರು. ಭಾರತೀಯರಿಗೆ ಇರುವ ಬುದ್ದಿವತಿಂಕೆ ಪ್ರಪಂಚದ ಯಾವ ಭಾಗದಲ್ಲೂ ಇಲ್ಲ. ಪ್ರಪಂಚದ ಯಾವುದೇ ಭಾಗಕ್ಕೆ ಹೋದರು ಅಲ್ಲಿನ ಪ್ರತಿಭಾವಂತರಲ್ಲಿ ಭಾರತೀಯರು ಮುಂಚುಣಿಯಲ್ಲಿರುತ್ತಾರೆ. ಕಾರಣ ವಿದೇಶದಲ್ಲಿರುವ ಭಾರತೀಯರು ಭಾರತೀಯ ಸಂಸ್ಸೃತಿಯನ್ನು ಕಾಪಾಡಿಕೊಂಡು ಅಳವಡಿಸಿಕೊಂಡಿದ್ದಾರೆ. ಆದರೆ ಭಾರತದಲ್ಲಿ ಇರುವ ಭಾರತೀಯರು ಸಂಸ್ಕೃತಿ ಮರೆತು ವಿದೇಶಿ ಸಂಸ್ಕೃತಿ ತಾಂಡವಾಡುತ್ತಿರುವದರಿಂದ ಅವನತಿಯತ್ತ ಸಾಗುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿ ಎಚ್ಚರಿಸಿದರು.
ನಮ್ಮ ದೇಶದ ಬಹುತೇಕ ಬುದ್ದಿವಂತರು ನಿದ್ರೆಗೆ ಜಾರಿದ್ದಾರೆ. ಚೋಳರು ಹಿಂದುಗಳಲ್ಲ ಅಲ್ಲ ಎಂದು ಹೇಳಿಕೆ ನೀಡಿದ ನಟ ಕಮಲ್ ಹಾಸನ್ ಅಂತವರನ್ನು ಬುದ್ದಿ ಇಲ್ಲದವರು ದೊಡ್ಡವರನ್ನಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ವಿದ್ಯಾವಂತರು ವಿವಾದಗಳನ್ನು ಸೃಷ್ಟಿ ಮಾಡಿ ಜನರಲ್ಲಿ ಗೊಂದಲ ಮಾಡುವುದನ್ನು ಬಿಟ್ಟು ದೇಶದ ಪ್ರಗತಿ ಶ್ರಮಿಸಬೇಕೆಂದರು.
ಪ್ರತಿ ಮನೆಯಲ್ಲಿ ಒಂದು ಗ್ರಂಥಾಲಯ ಇರಬೇಕು. ಪ್ರತಿಯೊಬ್ಬರು ಮಹಾಪುರಷರ ಜೀವನ ಚರಿತ್ರೆ , ಇತಿಹಾಸ, ಬದುಕಿನ ಪ್ರಗತಿಗೆ ಬೇಕಾದ ಪುಸ್ತಕನ್ನು ಓದಿದಾಗ ಸಿಗುವ ಸಂತೋಷವೇ ಬೇರೆ. ಮೊಬೈಲ ಮತ್ತು ಟಿ.ವಿ ಹಾವಳಿಯಿಂದ ದೂರ ಇರಬೇಕೆಂದರೆ ಪುಸ್ತಕ ಓದುವ ಸಂಸ್ಕೃತಿ ಬೆಳೆಯಬೇಕು ಎಂದರು.
ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯರು ಉಪಸ್ಥಿತರಿದ್ದರು. ನಿರ್ಮಾಲ ಲದ್ದಿ ಪ್ರಾರ್ಥಿಸಿದರು. ನಾಗಭೂಷಣ ಶಿಕ್ಷಕರು ಕಾರ್ಯಕ್ರಮ ನಿರ್ವಹಿಸಿದರು.

Don`t copy text!