ಎಸ್.ಸಿ ಮತ್ತು ಎಸ್.ಟಿ ಮೀಸಲಾತಿ ಹೆಚ್ಚಳ ಸಂಭ್ರಮಾಚರಣೆ ಮಡಿದ ಬಿಜೆಪಿ
e-ಸುದ್ದಿ ಮಸ್ಕಿ
ಎಸ್.ಸಿ ಮತ್ತು ಎಸ್.ಟಿ ಜನಾಂಗಕ್ಕೆ ಹೆಚ್ಚುವರಿಯಾಗಿ ಮೀಸಲಾತಿ ಒದಗಿಸುವಂತೆ ಹಲವಾರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದು ಸರ್ಕಾರ ಮೀಸಲಾತಿ ಹೆಚ್ಚಿಸಿದ್ದಕ್ಕಾಗಿ ಭಾರತೀಯ ಜನತಾ ಪಾರ್ಟಿ ಮತ್ತ ಬಿಜೆಪಿಯ ಎಸ್.ಸಿ.ಎಸ್.ಟಿ ಮೋರ್ಚದಿಂದ ಪಟ್ಟಣದಲ್ಲಿ ಸಂಭ್ರಮಚಾರಣೆ ನಡೆಸಿದರು.
ಪಟ್ಟಣದ ವಾಲ್ಮೀಕಿ ವೃತ್ತ ಮತ್ತು ಡಾ.ಬಿ.ಆರ್.ಅಂಬೆಡ್ಕರ್ ವೃತ್ತದಲ್ಲಿ ಶನಿವಾರ ಪಟಾಕಿ ಸಿಡಿಸಿ ಸಹಿ ಹಂಚಿ ಸಂಭ್ರಮಿಸಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ ಚುನಾವಣೆಯಲ್ಲಿ ಮಾತು ಕೊಟ್ಟಂತೆ ಬಿಜೆಪಿ ಸರ್ಕಾರ ಎಸ್.ಸಿ. ಮತ್ತು ಎಸ್.ಟಿ ಜನಾಂಗಕ್ಕೆ ಮೀಸಲಾತಿಯನ್ನು ಹೆಚ್ಚಿಸಿ ಜನರಿಗೆ ಕೊಟ್ಟು ಮಾತು ಉಳಿಸಿಕೊಂಡಿದೆ. ಸರ್ಕಾರ ಅಸ್ತತ್ವಕ್ಕೆ ಬಂದ ಕೂಡಲೇ ಹೆಚ್ಚಿಸುವುದಾಗಿ ಮಾತುಕೊಟ್ಟಿತ್ತು. ಸರ್ಕಾರ ಮೀಸಲಾತಿಯನ್ನು ಕಾಟಚಾರಕ್ಕೆ ಹೆಚ್ಚಿಸದೆ ಸರ್ವ ಪಕ್ಷದ ಮುಖಂಡರ ವಿಶ್ವಾಸ ಪಡೆದು, ಕಾನುನು ತೊಡಕುಗಳನ್ನು ನಿವಾರಿಸಕೊಂಡು ಜಾರಿಗೆ ತರಲು ಶ್ರಮಿಸಿದೆ ಎಂದರು.
ಎಸ್.ಸಿ ಮತ್ತು ಎಸ್.ಟಿ ಜನಾಂಗಕ್ಕೆ ಮೀಸಲಾತಿ ನೀಡುವಂತೆ ಎಸ್.ಟಿ ಸಮುದಾಯದ ಗುರುಗಳಾದ ಪ್ರಸನ್ನಾಂದ ಸ್ವಾಮೀಜಿ ಕಳೆದ ೨೪೦ ದಿನಗಳಿಂದ ಬೆಂಗಳೂರಿನ ಫ್ರೀಡಮ್ ಪಾರ್ಕನಲ್ಲಿ ಧರಣಿ ನಡೆಸುವ ಮೂಲಕ ನಾಯಕ ಸಮುದಾಯದ ಬೇಡಿಕೆ ಈಡೇರಿಕೆಗೆ ಹಗಲು ರಾತ್ರಿ ಶ್ರಮಿಸಿದ್ದು ಇಡಿ ಸಮುದಾಯ ಪ್ರಸನ್ನಾಂದ ಸ್ವಾಮೀಜಿಗೆ ಋಣಿಯಾಗಿದೆ ಎಂದು ಪ್ರತಾಪಗೌಡ ಪಾಟೀಲ ಹೇಳಿದರು.
ನೂರಾರು ಯುವಕರು ಬಿಜೆಪಿ ಕಚೇರಿಯಿಂದ ವಾಲ್ಮೀಕಿ ವೃತ್ತ ಮತ್ತು ಅಂಬೇಡ್ಕರ್ ವೃತ್ತದವೆರೆಗೆ ಬೈಕ್ ರ‍್ಯಾಲಿ ನಡೆಸಿದರು.
ಪುರಸಭೆ ಸದಸ್ಯರಾದ ರವಿಗೌಡ, ಚೇತನ ಪಾಟೀಲ, ಮೌನೇಶ ನಾಯಕ, ಎಸ್.ಟಿ.ಮೊರ್ಚಾ ಅಧ್ಯಕ್ಷ ಡಾ.ವೆಂಕಟೇಶ ಕೊಳಬಾಳ, ಎಸ್.ಸಿಮೊರ್ಚಾ ಅಧ್ಯಕ್ಷ ಬಾಲಸ್ವಾಮಿ ಜಿನ್ನಾಪುರ, ದುರುಗಪ್ಪ ಗುಡಗಲದಿನ್ನಿ, ದೇವಣ್ಣ ನಾಯಕ, ದುರ್ಗಾಪ್ರಸಾದ, ಜಿ.ವೆಂಕಟೇಶ ನಾಯಕ, ಬಿಜೆಪಿ ಕಾರ್ಯದರ್ಶಿ ಶರಣಯ್ಯ ಸೊಪ್ಪಿಮಠ, ಭೀಮಣ್ಣ ಕಾಚಾಪುರ, ಸಿದ್ದಾರ್ಥ ಹಾಲಾಪುರ, ಚಂದ್ರಶೇಖರ ನಾಯಕ. ಉದ್ಬಾಳ ಸಂತೋಷ ಪಾಟೀಲ, ವೆಂಕಟೇಶ ಹೂಲ್ಲುರು, ಮಲ್ಲಯ್ಯ ಸಂತೆಕೆಲ್ಲೂರು, ಬಸಪ್ಪ ತುಗ್ಗಲದಿನ್ನಿ, ಕಾಶಿಮ ಮುರಾರಿ, ಶರಣು ನಾಯಕ ಹಾಗೂ ಇತರರು ಇದ್ದರು..