ಅಂಬಾರಿಯ ಇತಿಹಾಸ ತಿಳಿಯೋಣ ಬನ್ನಿ

ಅಂಬಾರಿಯ ಇತಿಹಾಸ ತಿಳಿಯೋಣ ಬನ್ನಿ

ಮೂಲತಃ ಮಹಾರಾಷ್ಟ್ರದ ದೇವಗಿರಿಯಲ್ಲಿ ಈ ರತ್ನ ಖಚಿತ ಅಂಬಾರಿ ಆರಂಭದಲ್ಲಿ ಇರುತ್ತದೆ.. ಆ ಬಳಿಕ ದೇವಗಿರಿ ಸಂಸ್ಥಾನ ನಾಶವಾದ ವೇಳೆ. ಈ ಅಂಬಾರಿಯನ್ನು ದೇವಗಿರಿಯ ರಾಜ ಕಂಪಿಲದ ಮೊಮ್ಮಡಿ ಸಿಂಗ್ ನಾಯಕನಿಗೆ 1300ರಲ್ಲಿ ಹಸ್ತಾಂತರ ಮಾಡಿ ಅದನ್ನು ಕಾಪಾಡಿಕೊಂಡು ಬರುವಂತೆ ಮನವಿ ಮಾಡುತ್ತಾನೆ. ಹಾಗಾಗಿ ಮುಮ್ಮಡಿ ಸಿಂಗ್ ನಾಯಕ ವಿದೇಶಿಯರ ದಾಳಿಗೆ ಹೆದರಿ ಈ ಅಂಬಾರಿಯನ್ನು ಬಳ್ಳಾರಿ(ಕಂಪ್ಲಿ ) ಬಳಿಯ ರಾಮದುರ್ಗದ ಕೋಟೆಯಲ್ಲಿ ಮುಚ್ಚಿಟ್ಟಿರುತ್ತಾನೆ.

ನಂತರ ಮುಮ್ಮಡಿ ಸಿಂಗ್ ಪುತ್ರ ಕಂಪಿಲರಾಯ ತನ್ನ ರಾಜ್ಯವನ್ನು ವಿಸ್ತರಿಸಿದ ಸಮಯದಲ್ಲಿ ಕೊಪ್ಪಳದ ಕಮ್ಮಟ ದುರ್ಗವನ್ನು ರಾಜಧಾನಿಯಾಗಿ ಮಾಡಿಕೊಂಡು ದುರ್ಗಾದೇವಿಯನ್ನು ಸ್ಥಾಪಿಸಿ ಆ ಅಂಬಾರಿಗೆ ಪೂಜೆಯನ್ನು ಮಾಡ್ತಾ ಇರುತ್ತಾನೆ.

ಆದರೆ 1327 ರಲ್ಲಿ ದೆಹಲಿಯ ಸುಲ್ತಾನರ ದಾಳಿಗೆ ಸಿಕ್ಕ ಈ ಕಂಪಿಲ ರಾಜ್ಯ ಸಂಪೂರ್ಣವಾಗಿ ನಾಶವಾಗಿ ಹೋಗುತ್ತದೆ. ಕಂಪಿಲರಾಯ ಈ ದಾರುಣ ಯುದ್ಧದಲ್ಲಿ ಕೊನೆಗೊಳ್ಳುತ್ತಾನೆ. ಆ ಸಮಯದಲ್ಲಿ ಕಂಪಿಲದ ಬಂಡಾರ ರಕ್ಷಣೆ ಮಾಡುತ್ತಿದ್ದ ಹರಿಹರಹಕ್ಕ- ಬುಕ್ಕರು ಆ ಅಂಬಾರಿಯನ್ನು ಹುತ್ತದಲ್ಲಿ ಮುಚ್ಚಿಟ್ಟು ಅಲ್ಲಿಂದ ಕಣ್ಮರೆಯಾಗುತ್ತಾರೆ.

ಇನ್ನೂ 1336 ರ ವೇಳೆಗೆ ದೆಹಲಿ ಸುಲ್ತಾನರು ನಾಶವಾದ ಸಮಯದಲ್ಲಿ
ರಾಜ್ಯವನ್ನು ಸ್ಥಾಪಿಸುವುದಕ್ಕೆ ಗಂಡುಗಲಿ ಕುಮಾರರಾಮನಿಗೆ ಕೊಟ್ಟ ಮಾತಿನಂತೆ
ಪುನಃ ಹಿಂದವಿ (ಹಿಂದೂ) ರಾಜ್ಯ ಸ್ಥಾಪನೆಗೆ
ಮುಂದಾಗುತ್ತಾರೆ. ಹಾಗಾಗಿ ಹಕ್ಕ ಆನೆಗುಂದಿಯಲ್ಲಿ ವಿಜಯನಗರದ ಸಾಮ್ರಾಜ್ಯ ಸ್ಥಾಪನೆ ಮಾಡುತ್ತಾನೆ.
ಇದು ವಿಜಯನಗರ ಸಾಮ್ರಾಜ್ಯದ ಮೊದಲ ರಾಜಧಾನಿಯಾಗುತ್ತದೆ. ನಂತರ ಬುಕ್ಕನು ಹಂಪಿಯಲ್ಲಿ ವಿಜಯನಗರದ ಸಾಮ್ರಾಜ್ಯದ ಎರಡನೇ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾನೆ.

ಮೈಸೂರು ದಸರಾ’ ಆಗಿದ್ದು ಹೇಗೆ?

ಆರಂಭದಲ್ಲಿ ವಿಜಯದಶಮಿಯನ್ನು ವಿಜಯನಗರದ ಅರಸರು ಆಚರಿಸಿಕೊಂಡು ಬರುತ್ತಿದ್ದರು.
ಸಾರ್ವಜನಿಕ ದಸರಾಕ್ಕೆ ಚಾಲನೆ ಕೊಟ್ಟಿದ್ದು 1424 ರಲ್ಲಿ ಪ್ರೌಢ ದೇವರಾಯ.
ನಂತರ ವೈಭೋಗ ದಸರಾ ನಡೆದದ್ದು ಕೃಷ್ಣ ದೇವರಾಯನ ಕಾಲದಲ್ಲಿ.
ಮಾರ್ನಮಿ ದಿಬ್ಬದ ಮೇಲೆ ರಾಜರು ಕೂತು ದಸರಾ ಫಥ ಸಂಚಲನವನ್ನು ವೀಕ್ಷಿಸುತ್ತಿದ್ದರು.
ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಇದೆ ವೇದಿಕೆ ಯಾಗಿತ್ತು
16ನೇ ಶತಮಾನದ ರತ್ನಾಕರವರ್ಣಿಯ
ಕೃತಿ ಭರತೇಶ ವೈಭವ ಕೃತಿಯಲ್ಲಿ
ಅಂಬಾರಿ ಹಾಗೂ ದಸರೆಯ ಸಾಹಿತಿಕ ಉಲ್ಲೇಖವಿದೆ.
1430ರಲ್ಲಿ ಭಾರತಕ್ಕೆ ಆಗಮಿಸಿದ ಇಟಲಿಯ
ನಿಕೋಲಸ್ ಡೇ ಕೌಂಟಿ ಹಾಗು ಪರ್ಷಿಯನ್ ಅಬ್ದುಲ್ ರಜಾಕ್ ದಸರೆಯ ವೈಭೋಗ ವಿವರಿಸಿದ್ದಾರೆ.
ನಂತರ ಬಂದಂತಹ ಎಲ್ಲಾ ರಾಜರು ಪಾಲಿಸಿಕೊಂಡು ಬಂದಿರುತ್ತಾರೆ.

ತಾಳಿಕೋಟೆ ಕದನದ ನಂತರ ಅಂಬಾರಿ ಮತ್ತೆ ಸಿಂಹಾಸನವನ್ನು ಆಂಧ್ರದ ಪೆನುಕೊಂಡಕ್ಕೆ ಸಾಗಿಸಲಾಗುತ್ತದೆ
ನಂತರ ಅಳಿಯ ರಾಮರಾಯನ ಪಥನದ ನಂತರ
ಶ್ರೀ ರಂಗರಾಯ ಅಂಬಾರಿಯನ್ನು ಮತ್ತೆ
ಸಿಂಹಾಸನವನ್ನು ಮೈಸೂರು ರಾಜರಿಗೆ ರಕ್ಷಣೆ ಮಾಡುವಂತೆ ಒಪ್ಪಿಸುತ್ತಾನೆ.

ವಿಜಯನಗರ ಸಾಮ್ರಾಜ್ಯ ಪತನದ ಬಳಿಕ
ಅವರ ಸಾಮಂತ ದೊರೆಗಳಾದ ಮೈಸೂರಿನ ಯದುವಂಶಸ್ಥರು 1600ರಲ್ಲಿ ಸ್ವಾತಂತ್ರ್ಯ ವಾಗತ್ತಾರೆ.
ಶ್ರೀರಂಗಪಟ್ಟಣವನ್ನು ರಾಜಧಾನಿಯನ್ನಾಗಿಸಿಕೊಂಡು ರಾಜ್ಯವನ್ನು ಆಳುತ್ತಿದ್ದ ರಾಜ ಒಡೆಯರ್ 1610ರಲ್ಲಿ ವಿಜಯದಶಮಿಯನ್ನು ಮೊದಲು ಆಚರಿಸಿದರು.
ಶ್ರೀರಂಗಪಟ್ಟಣದಲ್ಲೆ ದಸರಾ ನಡೆಯುತ್ತಿತ್ತು ಈಗಲೂ ದಸರಾ ಮಂಟಪವಿದೆ ಇದೆ ಅದಕ್ಕೆ ಸಾಕ್ಷಿ

ಟಿಪ್ಪುವಿನ ಕಾಲದಲ್ಲಿ ದಸರಾ ತಾತ್ಕಾಲಿಕವಾಗಿ ನಿಂತಿತ್ತಾದರೂ ಟಿಪ್ಪುವಿನ ಪತನದ ನಂತರ
ಮೈಸೂರು ರಾಜಧಾನಿಯಾಗಿಸಿಕೊಂಡ ಒಡೆಯರು 1800ರಲ್ಲಿ ಮೈಸೂರಿನಲ್ಲಿ ದಸರಾ ಆರಂಭಿಸಿದರು
ಮುಮ್ಮಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ (1799-1868) ವಿಜೃಂಭಣೆಯಿಂದ ನಡೆಯಿತು
ಬಳಿಕ “ಮೈಸೂರು ದಸರಾ” ಎಂದೇ ವಿಶ್ವವಿಖ್ಯಾತಿ ಪಡೆಯಿತು.

ಇನ್ನೂ ಮೈಸೂರಿನಲ್ಲಿ 1969ರವರೆಗೂ ರಾಜರೆ ಅಂಬಾರಿಯಲ್ಲಿ ಕೂತು ಬನ್ನಿ ಮಂಟಪಕ್ಕೆ ಪೂಜೆ ಮಾಡಲು ಸಾಗುತ್ತಿದ್ದರು
ತದನಂತರದ ಬೆಳವಣಿಗೆಗಳ ಅಂದರೆ ಕೇಂದ್ರ ಸರ್ಕಾರ ಎಲ್ಲಾ ರಾಜಮನೆತಗಳಿಗೂ ಕೊಡುವ ರಾಯಲ್ಟಿ ನಿಲ್ಲಿಸುತ್ತದೆ ಕಾರಣ ಮೈಸೂರು ಸಂಸ್ಥಾನವು ದಸರಾ ಆಚರಣೆ ಅರಮನೆಗೆ ಸೀಮಿತ ಗೊಳಿಸುತ್ತದೆ. 1974 ನಂತರ ತಾಯಿ ಚಾಮುಂಡೇಶ್ವರಿ ಅಮ್ಮನವರ ಅಂಬಾರಿ ಹೊತ್ತ ಆನೆಗಳ ಸವಾರಿ ಸಾಗುತ್ತಿದೆ
ಜನರ ಬೇಡಿಕೆಗೆ ಮಣಿದ ಆಗಿನ ಕರ್ನಾಟಕ ಸರ್ಕಾರ
ನಾಡಹಬ್ಬವೆಂದು ಘೋಷಣೆ ಮಾಡುತ್ತದೆ
ಅಂದಿನಿಂದ ಸರ್ಕಾರದ ಕಡೆಯಿಂದ ದಸರಾ ಉತ್ಸವ ಮಾಡಲಾಗುತ್ತಿದೆ.

ದೇವಗಿರಿ – ಕಂಪಿಲ ದುರ್ಗ- ಕುಮ್ಮಟದುರ್ಗಾ
ಆನೆಗುಂದಿ- ಹಂಪಿ- ಪೆನುಕೊಂಡ-ಶ್ರೀರಂಗಪಟ್ಟಣ
ಈಗ ಮೈಸೂರಿನಲ್ಲಿ ಇದೆ

ಇದು ಅಂಬಾರಿಯ ಇತಿಹಾಸವಾದರೆ
ಸಿಂಹಾಸನದ ಇತಿಹಾಸ ಮಹಾಭಾರತದ ಕಾಲಕ್ಕೆ ಕೊಂಡೊಯ್ದು ಬಿಡುತ್ತದೆ..

ವಿಶ್ವ ವಿಖ್ಯಾತ ಜಂಬೂ ಸವಾರಿಗೆ 400 ವರ್ಷಗಳ ಇತಿಹಾಸವಾದರೆ
ಅಂಬಾರಿಗೆ 700 ವರ್ಷಗಳ ಇತಿಹಾಸವಿದೆ
ಇನ್ನೂ ಸಿಂಹಾಸನಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ.

❤️🚩✍️..ಭರತೇಶl

Don`t copy text!