ಮೀಸಲಾತಿಯಿಂದ ಎಸ್.ಸಿ ಮತ್ತು ಎಸ್.ಟಿ ಸಮುದಾಯದ ಅಭಿವೃದ್ದಿ ಸಾಧ್ಯ- ಪ್ರತಾಪಗೌಡ ಪಾಟೀಲ
e-ಸುದ್ದಿ ಮಸ್ಕಿ
ಚುನಾವಣೆಯಲ್ಲಿ ಕೊಟ್ಟ ಮಾತಿಗೆ ಬದ್ಧವಾಗಿ ಬಿಜೆಪಿ ಸರ್ಕಾರ ಎಸ್.ಸಿ ಮತ್ತು ಎಸ್.ಟಿ.ಸಮುದಾಯಕ್ಕೆ ನಿವೃತ್ತ ನ್ಯಾಯಮೂರ್ತಿ ನಾಗಮೊಹನ ದಾಸ ವರದಿಯಂತೆ ಮೀಸಲಾತಿ ಹೆಚ್ಚಿಸಿದೆ ಇದರಿಂದ ಈ ಸಮುದಾಯದ ವಿದ್ಯಾರ್ಥಿಗಳಿಗೆ ಅನುಕೂಲವಾಗಿ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು. ಕಳೆದ ೪೦ ವರ್ಷಗಳಿಂದ ಮೀಸಲಾತಿ ಹೆಚ್ಚಳಕ್ಕಾಗಿ ಸಮುದಾಯದ ಬೇಡಿಕೆ ನಿರಂತರವಾಗಿತ್ತು. ಅನೇಕ ಸರ್ಕಾರಗಳು ಮೀಸಲಾತಿ ಹೆಚ್ಚಿಸುವವಲ್ಲಿ ಮೀನಮೇಷ ಮಾಡಿದ್ದವು. ಆದರೆ ಸಮಿಶ್ರ ಸರ್ಕಾರದ ನಿವೃತ್ತ ನ್ಯಾಯಮೂರ್ತಿ ನಾಗಮೊಹನ ದಾಸ್ ಸಮಿತಿ ರಚಿಸಿ ಸರ್ಕಾರಕ್ಕೆ ವರದಿಕೊಡಲು ತಿರ್ಮಾನಿಸಿತು. ಬಿಜೆಪಿ ಸರ್ಕಾರ ಕೊಟ್ಟ ಮಾತಿನಂತೆ ಅನುಷ್ಠಾನಗೊಳಿಸುತ್ತದೆ. ಕಾಂಗ್ರೆಸ್ ಪಕ್ಷ ಕೂಡ ಮೀಸಲಾತಿ ಹೆಚ್ಚಿಸಲು ಸಹಕರಿಸಿದೆ ಎಂದರು.
ಕಳೆದ ೨೬೦ ದಿನಗಳಿಂದ ಮೀಸಲಾತಿ ಹೆಚ್ಚಳಕ್ಕಾಗಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಪ್ರತಿಭಟನೆ ನಡೆಸಿದರು. ಅದರ ಫಲವಾಗಿ ರಾಜ್ಯದ ಎಲ್ಲಾ ಪಕ್ಷಗಳು ಕೈ ಜೋಡಿಸಿವೆ ಎಂದರು.
ಮಂಗಳವಾರ ಗಿಲ್ಲೆಸೂಗೂರಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಜಯ ಸಂಕಲ್ಪಯಾತ್ರಗೆ ಚಾಲನೆ ನೀಡಲಿದ್ದಾರೆ. ಮಸ್ಕಿ ಕ್ಷೇತ್ರದ ಸಾವಿರಾರು ಕಾರ್ಯಕರ್ತರು ತೆರಳಲಿದ್ದು ಬರುವ ದಿನಗಳಲ್ಲಿ ಮಸ್ಕಿಯಲ್ಲಿ ವಿಜಯ ಸಂಕಲ್ಪ ಯಾತ್ರೆ ನಡೆಯಲಿದೆ ಎಂದರು.
ಎಸ್.ಸಿ ಜಿಲ್ಲಾ ಮೊರ್ಚಾ ಅಧ್ಯಕ್ಷ ಶರಣಪ್ಪ ವಕೀಲರು ಉಮಲೂಟಿ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಶಿವಪುತ್ರಪ್ಪ ಅರಳಹಳ್ಳಿ, ಕಾರ್ಯದರ್ಶಿಗಳಾದ ಮಲ್ಲು ಯಾದವ, ಶರಣಯ್ಯ ಸೊಪ್ಪಿಮಠ ಇದ್ದರು.