9 ಕೋಟಿ ರೂ ಬಾಕಿ ಹಣ ಬಿಡುಗಡೆಗೆ ಅಸ್ತು, ಮಸ್ಕಿ ಕ್ಷೇತ್ರಕ್ಕೆ 6 ಸಾವಿರ ಮನೆಗಳ ಮಂಜೂರಾತಿಗೆ ಕ್ರಮ

e-ಸುದ್ದಿ, ಮಸ್ಕಿ

ತಾಲೂಕಿನ ವಿವಿಧ ಯೋಜನೆಗಳಲ್ಲಿ ಅರ್ಧಕ್ಕೆ ನಿಂತ ಮನೆಗಳು ಪೂರ್ಣಗೊಳಿಸಲು ಬಾಕಿ ಇರುವ 9 ಕೋಟಿ ರೂ ಹಣವನ್ನು ಕೂಡಲೇ ಬಿಡುಗಡೆ ಮಾಡುವುದಲ್ಲದೆ ಹೆಚ್ಚುವರಿಯಾಗಿ 6 ಸಾವಿರ ಮನೆಗಳನ್ನು ನಿರ್ಮಿಸಿ ಗುಡಿಸಲು ಮುಕ್ತ ಕ್ಷೇತ್ರ ಮಾಡುವುದಾಗಿ ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದ ಸಮುದಾಯ ಭವನದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರ ಚುನಾವಣ ಪೂರ್ವಬಾವಿ ಸಭೆ ಉದ್ಘಾಟಿಸಿ ಮಾತನಾಡಿದರು. ಮಸ್ಕಿ ಉಪಚುನಾವಣೆ ಮುಗಿದ ತಕ್ಷಣ ಪ್ರತಾಪಗೌಡ ಪಾಟೀಲ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟದಲ್ಲಿ ಮಂತ್ರಿಯಾಗುವುದು ಖಚಿತ. ಮಸ್ಕಿ ಕ್ಷೇತ್ರ ರಾಜ್ಯದ ಮಾದರಿ ಕ್ಷೇತ್ರವಾಗುತ್ತದೆ. ಬಹುದಿನಗಳ ಬೇಡಿಕೆಯಾದ ಕೃಷ್ಣ ಮೇಲ್ದಂಡೆ ಯೋಜನೆಯ 5 ಎ ಕಾಲುವೆ ನಿರ್ಮಾಣಕ್ಕೆ ಸರ್ಕಾರ ಈಗಾಗಲೇ ಸರ್ವೆ ಕೆಲಸ ಆರಂಭಿಸಿದ್ದು ವರದಿ ಬಂದ ತಕ್ಷಣ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿ ಜಾರಿಗೊಳಿಸುವದಾಗಿ ಭರಸವೆ ನಿಡಿದರು.
ನಂದವಾಡಗಿ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವುದು ಸೇರಿದಂತೆ 502 ಕೋಟಿ ರೂ ವೆಚ್ಚದಲ್ಲಿ ಮಸ್ಕಿ ತಾಲೂಕಿನ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರ ಹಣ ಕೊಡುವಂತೆ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡುವುದಾಗಿ ವಿ.ಸೋಮಣ್ಣ ತಿಳಿಸಿದರು.
ಬಸನಗೌಡ ದುಡಕಬೇಡ ಃ ಕಳೆದ ಚುನಾವಣೆಯಲ್ಲಿ ಅಲ್ಪ ಮತಗಳಿಂದ ಪರಾಭವಗೊಂಡಿದ್ದ ಬಸನಗೌಡ ತುರ್ವಿಹಾಳ ಅವರು ಪಕ್ಷ ಬಿಡುವ ನಿರ್ಧಾರ ಮಾಡಿದ್ದು ತಪ್ಪು. ಅವರಿಗೆ ಯಡಿಯೂರಪ್ಪನವರು ತುಂಗಭದ್ರ ಕಾಡ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು. ಸಿಕ್ಕ ಅಧಿಕಾರವನ್ನು ಬಳಸಿಕೊಳ್ಳುವದನ್ನು ಬಿಟ್ಟು ಪಕ್ಷ ಬಿಡುವ ನಿರ್ಧಾರ ಸರಿಯಲ್ಲ. ಕಾಂಗ್ರೆಸ್ ಈಗಗಲೇ ಒಡೆದ ಮನೆಯಾಗಿದೆ. ಅಲ್ಲಿ ಒಬ್ಬರ ಕಾಲು ಮತ್ತೊಬ್ಬರು ಎಳೆಯುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ವಿನಾಶದ ಅಂಚಿನಲ್ಲಿದ್ದಾಗ ಬಸನಗೌಡ ತುರ್ವಿಹಾಳ ಅಲ್ಲಿಗೆ ಹೋಗಿ ಪಶ್ಚಾತಾಪ ಪಡುತ್ತಾರೆ. ಇನ್ನೊಮ್ಮೆ ವಿಚಾರ ಮಾಡಿ ಎಂದು ಸೋಮಣ್ಣ ಕಿವಿ ಮಾತು ಹೇಳಿದರು.
ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿ ಸಮಿಶ್ರ ಸರ್ಕಾರದಲ್ಲಿ ಶಾಸಕರುಗಳಿಗೆ ಗೌರವ ಇರಲಿಲ್ಲ. ಸ್ವಾಭಿಮಾನದಿಂದ ಕ್ಷೇತ್ರದ ಅಭಿವೃದ್ದಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲಿನ ಪ್ರೀತಿಯಿಂದ ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿರುವೆ. 5 ಎ ಕಾಲುವೆ ಮತ್ತು ಕನಕಾ ನಾಲ ಯೋಜನೆ ಜಾರಿಗೆ, ಕೆರೆ ತುಂಬಿಸುವ ಮೂಲಕ ನಿರಾವರಿಗೆ ಒಳಪಡಿಸುವದು, ಕ್ಷೇತ್ರವನ್ನು ಸಂಪೂರ್ಣ ಗುಡಿಸಲು ಮುಕ್ತ ಮಾಡಲು ಮನೆ ಇಲ್ಲದವರಿಗೆ ಮನೆ ಕೊಡುವ ಕೆಲಸಕ್ಕೆ ಪ್ರಯತ್ನಿಸುತ್ತಿದ್ದೇನೆ. ನನ್ನನ್ನು ಉಪ ಚುನಾವಣೆಯಲ್ಲಿ ಗೆಲ್ಲಿಸಿ ಮಸ್ಕಿ ಕ್ಷೇತ್ರದ ಅಭಿವೃದ್ದಿಗೆ ಸಹಕರಿಸುವಂತೆ ಮನವಿ ಮಾಡಿದರು.
ಸಂಸದ ಸಂಗಣ್ಣ ಕರಡಿ, ಸುರುಪುರ ಶಾಸಕ ರಾಜುಗೌಡ, ಕನಕಗಿರಿ ಶಾಸಕ ಬಸವರಾಜ ಧಡೆಸುಗೂರು, ಯಲಬುರ್ಗಾ ಶಾಸಕ ಹಾಲಪ್ಪ ಆಚಾರ, ಮಾಜಿ ಶಾಸಕರಾದ ಮಾನಪ್ಪ ವಜ್ಜಲ, ಬಸನಗೌಡ ಬ್ಯಾಗವಾಟ, ಗಣಗಾಧರ ನಾಯಕ, ಎನ್.ಶಂಕ್ರಪ್ಪ ಮಾತನಾಡಿದರು.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ ಹಿರೇಮನಿ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ರಾಯಚೂರು ಶಾಸಕ ಡಾ.ಶಿವರಾಜ ಪಾಟೀಲ, ಮಾಜಿ ಶಾಸಕ ಪಾಪರಡ್ಡಿ, ಮಸ್ಕಿ ಗ್ರಾಮದ ಮುಖಂಡರಾದ ಕೆ.ವೀರನಗೌಡ, ಅಂದಾನಪ್ಪ ಗುಂಡಳ್ಳಿ ಹಾಗೂ ಇತರರು ಇದ್ದರು

Don`t copy text!