ನೆಲದೊಲವು
ದಿನವು ನನ್ನೆದೆ ಮೇಲೆ
ನಡೆವ ಪಾದಗಳೆಷ್ಟು
ಹಸಿರು- ಹೊನ್ನಿಗೆ ಕೊಡುವ ಕೋಟಲೆಗಳೆಷ್ಟು
ಇಲ್ಲ ನಾ ಲೆಕ್ಕವಿರಿಸಿಲ್ಲ
ಬೆವರ ರುಚಿ – ರಕ್ತ ರುಚಿ
ಕುಡಿದು ಸಂಪೆಲರಾಗಿ
ಮೊಗೆದ ಗುದ್ದಲಿ ಮೊನಚು
ಇಟ್ಟ ಸಸಿಗಳ ಬೇರು ಒಂದೆ ನನಗೆ
ಬಸಿರ ಅಂಬರ ಮೇಲೆ
ಹೆರಿಗೆಯಾದಂತೆ ಮಳೆ ಸುರಿಯೆ
ಎದೆಯ ಹದ ತೀರಿ
ಒಡಲಡಿಗೆ ಮುದದ ಜೀವ ಜಲವು
ಅಲ್ಲೇ ದೀಪವಡಗಿಹುದು ನೆಲದಲ್ಲಿ
ಬಗೆದು ಬೆಳಕ ತನ್ನಿರಿ ನನ್ನ
ಎದೆಯಿಂದಲೆದೆಗೆ ಹರಿಯಲಿ
ಮನ – ಮನಕೆ ಸಿಗಲಿ ನಿತ್ಯ ಒಲವು
– ಮಹಾಂತೇಶ ಮಸ್ಕಿ