ದೀಪಾವಳಿ ಹೊಸ ಕನಸಿಗೆ ಬೆಳಕು ಮೂಡಿಸಲಿ
ಪ್ರೀಯಿಯ ಓದುಗರಿಗೆಲ್ಲ,
ವೀರೇಶ ಸೌದ್ರಿ ಮಾಡುವ ನಮಸ್ಕಾರಗಳು ಮತ್ತು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು
ಕತ್ತಲೆಯನ್ನು ಕಳೆಯುವ ಬೆಳಕು ದಿವ್ಯ ಜ್ಯೋತಿ. ಮನಸ್ಸಿನ ಅಂಧಕಾರವನ್ನು ಕಳೆಯಲು ಜ್ಞಾನದ ಬೆಳಕು ಬೇಕು. ಎಲ್ಲರ ಮನೆಯಲ್ಲಿ ಮನಸ್ಸಿನಲ್ಲಿ ಬೆಳಕು ಮೂಡಲಿ.
೨೧ ನೇ ಶತಮಾನ ಮಾಹಿತಿಯುಗ. ಇಡೀ ಜಗತ್ತಿನಲ್ಲಿ ನಡೆಯುವ ವಿದ್ಯಾಮಾನಗಳು ತತಕ್ಷಣ ನಮ್ಮೆ ಮುಂದೆ ಅನಾವರಣಗೊಳ್ಳುತ್ತವೆ. ಅದಕ್ಕೆ ಮುಖ್ಯ ಕಾರಣ ಆಧುನಿಕ ತಂತ್ರಜ್ಞಾನ. ನಮ್ಮ ಕೈಯಲ್ಲಿರುವ ಅಂಡ್ರಾಯಡ್ ಸೆಲ್ ಪೋನ್ ಕೇವಲ ಸಂಪರ್ಕ ಸಾಧಿಸುವ ಉಪಕರಣವಾಗಿಲ್ಲ. ಇದೊಂದು ಅದ್ಬುತವಾದ ಮಾಯಪೆಟ್ಟಿಗೆ. ಮೊಬೈಲ್ ನ್ನು ಸರಿಯಾಗಿ ಬಳಸುವವರಿಗೆ ಇದೊಂದು ಆಪ್ತ ಸಂಗಾತಿ ಇದ್ದಂತೆ.
ಬೆಳಕು
ಪಯಣದ ಹಾದಿಗೆ ಪ್ರೇರಣೆ
ಆತ್ಮೀಯರೇ,
e-ಸುದ್ದಿ ಅಂತರ್ಜಾಲದ ಪತ್ರಿಕೆ ಕಳೆದ ಎರಡು ವರ್ಷಗಳಿಂದ ಅಪಾರ ಓದುಗರನ್ನು ಗಳಿಸಿಕೊಂಡಿದೆ. . ಇದಕ್ಕೆಲ್ಲ ನಿಮ್ಮ ಪ್ರೋತ್ಸಾಹ ಮುಖ್ಯವಾಗಿತ್ತು. ಅದರಂತೆ ಈ ವರ್ಷದ ದೀಪಾವಳಿ ಹಬ್ಬದ ಈ ದಿನ ದಿನಾಂಕ ೨೬-೧೦-೨೦೨೨ ಬುಧವಾರ ಬೆಳಿಗ್ಗೆ ೧೦ ಗಂಟೆಗೆ e-ಸುದ್ದಿ ತಂಡ ಹೊಸ ಯೂಟ್ಯೂಬ್ ಚಾಲನ್ ಬೆಳಕು ಪ್ರಮೊ ಲಾಂಚ್ ಆಗಲಿದೆ.
ಬೆಳಕು ಪ್ರಯಣದ ಹಾದಿಗೆ ಪ್ರೇರಣೆ ನೀಡಲಿದೆ. ಬೆಳಕು ಚಾಲನ್ ನಲ್ಲಿ ಸಾಧಕರ ಸಾಧನೆಗಳು, ನೆಲದೊಡಲ ಬದುಕಿನ ಚಿತ್ರಣಗಳು ಮಾತಾಡುತ್ತವೆ, ಪ್ರತಿಭೆಗಳಿಗೆ ಒಂದು ಒಳ್ಳೆಯ ಪ್ಲಾಟ್ ಫಾರ್ಮ್ ಒದಗಿಸುತ್ತದೆ. ಬದುಕಿನ ವಿಸ್ತಾರದಲ್ಲಿ ಮುಖಾಮುಖಿ ಯಾಗುವ ಪ್ರಪಂಚದ ಎಲ್ಲಾ ಘಟನೆಗಳು ಅನಾವರಣಗೊಳ್ಳಲಿವೆ.
ಸೂರ್ಯನ ಬೆಳಕು ನಿಮ್ಮ ಮನೆಯ ಕಿಟಕಿ, ಬಾಗಿಲುಗಳ ಮೂಲಕ ಬರಮಾಡಿಕೊಳ್ಳುವಂತೆ ನಮ್ಮ ಬೆಳಕು ಚಾಲನ್ ನ್ನು ನಿಮ್ಮಮೊಬೈಲ್ ಮೂಲಕ ಬರಮಾಡಿಕೊಳ್ಳಿ.
ಬೆಳಕು ಚಾಲನ್ ಗೆ ನೀವು ಬೆಲ್ಲ ಬಟನ್ ಒತ್ತುವ ಮೂಲಕ ಸದಸ್ಯರಾಗಿ. ಲೈಕ್ ಮಾಡಿ ಮತ್ತು ಫಾರ್ವಾಡ ಮಾಡಿ. e-ಸುದ್ದಿ ಯನ್ನು ಬೆಳಸಿದಂತೆ ಬೆಳಕನ್ನು ಬೆಳಸಿ ಎಂದು ಕೇಳಿಕೊಳ್ಳತ್ತೇನೆ.
ಇಂತಿ ನಿಮ್ಮವ
ವೀರೇಶ ಸೌದ್ರಿ ಮಸ್ಕಿ
ಸಂಪಾದಕ
e-ಸುದ್ದಿ ಮತ್ತು ಬೆಳಕು
9448805067