ಶ್ರೀಮತಿ ಯಮುನಾ.ಕಂಬಾರ ಹಿರಿಯ ಸಾಹಿತಿಗಳು ಕವಯಿತ್ರಿ ಹಾಗೂ ಅನುವಾದಕರು
ರಾಮದುರ್ಗ..
e-ಸುದ್ದಿ ಬಳ್ಳಾರಿ
ಶ್ರೀಮತಿ ಯಮುನಾ.ಕಂಬಾರ ಹಿರಿಯ ಸಾಹಿತಿಗಳು ಕವಯಿತ್ರಿ ಹಾಗೂ ಅನುವಾದಕರುರಾಮದುರ್ಗ..ಇವರು ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ಸದಸ್ಯಳು.
ಅವರು ಬಳ್ಳಾರಿಯಲ್ಲಿ ಮೂರು ದಿನಗಳ ವರೆಗೆ ನಡೆದ ಸಂಗಂ ವಿಶ್ವಕವಿ ಸಮ್ಮೇಳನದಲ್ಲಿ ಅನುವಾದಕಳಾಗಿ ಭಾಗವಹಿಸಿ ವಿಶೇಷ ಅತಿಥಿಯಾಗಿ ಸತ್ಕರಿಸಲ್ಪಟ್ಟಿದ್ದಾರೆ.
ದಿ: ೨೧, ೨೨,೨೩ ದಿನಗಳವರೆಗೆ ನಿರಂತರವಾಗಿ ಅನುವಾದಿತ ಕವಿಗೋಷ್ಠಿಗಳು ನಡೆದವು. ಅದು ವಿಶ್ವದ ಕವಿಗಳ ಸಮ್ಮೇಳನವಾಗಿತ್ತು.ವಿಶ್ವದ ನಾನಾ ಕಡೆಗಳಿಂದ ವೆನಿಜುವೇಲಾ ಆಸ್ಟ್ರೇಲಿಯಾ ಇರಾನ್ ಇರಾಕ ಬಾಂಗ್ಲಾದೇಶ ಇತ್ಯಾದಿ ವಿದೇಶಿಗಳಿಂದಲೂ , ತಮಿಳುನಾಡು, ಮಹಾರಾಷ್ಟ್ರಗಳಿಂದಲೂ ಅಲ್ಲದೇ ಕರ್ನಾಟಕದ ವಿವಿಧ ಜಿಲ್ಲೆಗಳಿಂದಲೂ ಕವಿಗಳು ಆಗಮಿಸಿದ್ದರು.
ಅಲ್ಲದೆ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಕವಿಗೋಷ್ಠಿ ದಿ: ೨೨-೧೦-೨೨ ರಂದು ನೆರವೇರಿತು. ಪ್ರತಿ ಗೋಷ್ಠಿಯಲ್ಲಿ ಮೂಲ ಲೇಖಕರು, ಅನುವಾದಕರು ವಾಚಕರು ಗೋಷ್ಠಿಯ ಉಪಸಂಹಾರಕರಿಂದ ಹಾಗೂ ಪ್ರತಿಕ್ರಿಯೆಗಳಿಂದ ಕೂಡಿತ್ತು. ಮೂಲ ಪಂಜಾಬನ ಶ್ರೇಷ್ಠ ಕವಿಗಳಾದ ಸದ್ಯ ಆಸ್ಟ್ರೇಲಿಯಾದಲ್ಲಿರುವ ಅಶ್ವಿನ ಕುಮಾರ ಅವರ ಅನುವಾದಿತ ಕವಿತೆಗಳನ್ನು ಬೆಳಗಾವಿಯ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ಅತ್ಯಂತ ಮನೋಜ್ಞವಾಗಿ ವಾಚಿಸಿದರು.
ಪ್ರತಿ ಗೋಷ್ಠಿಗಳಲ್ಲಿ ನೂರಾರು ಪ್ರೇಕ್ಷಕರು ಭಾಗಿಗಳಾಗಿರುತ್ತಿದ್ದರು. ಆಗಮಿಸಿದ ಭಾಗವಹಿಸಿದ ಅತಿಥಿಗಳಿಗೆ ಒಳ್ಳೆಯ ಉಪಹಾರ ಊಟದ ವ್ಯವಸ್ಥೆ , ವಸತಿ ವ್ಯವಸ್ಥೆ ಇತ್ತು. ಮೂರು ಪುಸ್ತಕದ ಮಳಿಗೆಗಳು ಇದ್ದವು.ಸಾಹಿತ್ಯಾಸಕ್ತರು ಆಸಕ್ತಿಯಿಂದ ಪುಸ್ತಕಗಳನ್ನು ಖರೀದಿಸುತ್ತಿದ್ದರು.ಅಲ್ಲದೆ ಈ ಸಮ್ಮೇಳನವು ಅಂತರರಾಷ್ಟ್ರೀಯ ವಿಚಾರ ಸಂಕಿರಣ ಗೋಷ್ಠಿಯನ್ನು ಸಂಘಟಿಸಿತ್ತು
.ಈ ಅಂತರರಾಷ್ಟ್ರೀಯ ವಿಚಾರ ಸಂಕಿರಣದ ಸಂಚಾಲಕರಾಗಿ ಬೆಳಗಾವಿ ಜಿಲ್ಲೆಯ ಲೇ.ಸಂ.ಸದಸ್ಯರು ಹಾಗೂ ಖ್ಯಾತ ವಿಮರ್ಶೆಕರು ಸಾಹಿತಿಗಳಾದ ಡಾ.ಮೈತ್ರೇಯಿಣಿ ಗದಿಗೆಪ್ಪಗೌಡರ ಅವರು ನಿರ್ವಹಣೆ ಮಾಡಿದರು.
ಸಮ್ಮೇಳನ ತುಂಬಾ ಅರ್ಥಪೂರ್ಣ ಹಾಗೂ ವಿಶ್ವಕವಿಗಳ ಅವಿಸ್ಮರಣೀಯ ಅಪರೂಪದ ನುಡಿ ಚಿಂತನೆಗಳು ಅರ್ಥಪೂರ್ಣವಾಗಿದ್ದವು ಒಟ್ಟಾರೆ ಸಂಗಂ ವಿಶ್ವಕವಿ ಸಮ್ಮೇಳನ ಅತೀ ಉಪಯುಕ್ತವಾಗಿತ್ತು. ಈ ಸಮ್ಮೇಳನದಲ್ಲಿ ರಾಮದುರ್ಗದ ಹಿರಿಯ ಸಾಹಿತಿಗಳು ಅನುವಾದಕರಾದ ಶ್ರೀಮತಿ ಯಮುನಾ ಕಂಬಾರ ಅವರು ಹತ್ತಾರು ಕನ್ನಡ ಕವನಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿ ವಾಚಕರಿಗೆ ನೀಡಿದ್ದು ಹೆಮ್ಮೆಯ ಸಂಗತಿಯಾಗಿದೆ.
**** ****
ಲೇಖಕಿ: ಡಾ: ಮೈತ್ರಾಯಣಿ. ಗದಿಗೆಪ್ಪಗೌಡರ
ಖ್ಯಾತ ಸಾಹಿತಿಗಳು
ವಿಮರ್ಶಕರು
ಬೆ.ಜಿ.ಲೇ.ಸಂಘದ ಸದಸ್ಯರು
ಬೆಳಗಾವಿ.