ಕಿತ್ತೂರು ಇತಿಹಾಸದ ಸತ್ಯ ಸಂಗತಿಗಳು

ಕಿತ್ತೂರು ಇತಿಹಾಸದ ಸತ್ಯ ಸಂಗತಿಗಳು

ಕಿತ್ತೂರು ಇತಿಹಾಸದ ಪ್ರತಿ ಪುಟಗಳ ಸತ್ಯದ ಅನಾವರಣ ಮಾಡಿದ ಡಾ ಶಶಿಕಾಂತ ಪಟ್ಟಣ ಪುಣೆ ಇವರ ಸಮಗ್ರ ಅಧ್ಯಯನ ಮಾಡಿದ ಸುದಿರ್ಘ ಲೇಖನ ಈ ಸುದ್ಧಿ ಇಲ್ಲಿ ನಿರಂತರ ಎಂಟು ಸರಣಿಯಲ್ಲಿ ಮೂಡಿ ಬಂತು .
ನಾವು ಇವುಗಳಲ್ಲಿ ಅನೇಕ ಹೊಸ ಹೊಸ ವಿಷಯದ ಜೊತೆಗೆ ನೈಜ ಇತಿಹಾಸದ ಪರಿಚಯ ನಮ್ಮೆಲ್ಲರಿಗೂ ಗೊತ್ತು ಮಾಡಿ ಕೊಟ್ಟ ಡಾ ಶಶಿಕಾಂತ ಪಟ್ಟಣ ಪುಣೆ ಇವರಿಗೆ ಮತ್ತು ಅದನ್ನು ಪ್ರಕಟಿಸಲು ಮುಂದಾದ ಶ್ರೀ ವೀರೆಶ್ ಸೌದ್ರಿ ಇವರಿಗೂ ಅನಂತ ಶರಣು.
ಕಿತ್ತೂರು ಬಂಡಾಯ ಅದಕ್ಕೆ ಪ್ರಾಮಾಣಿಕವಾಗಿ ದುಡಿದು ಮಡಿದ ಯೋಧರ ಬಗ್ಗೆ ಓದಿ ಬಹಳ ನೋವು ಕಂಡೆನು. ಸೋಲು ಗೆಲವು ಯಶಸ್ವಿನ ಹಿಂದೆ ದುಡಿಯುವವರನ್ನು ನೆನಪಿಸಿಕೊಳ್ಳವುದು ಬಹಳ ಮುಖ್ಯ. ಇಂತಹ ಕಾರ್ಯವನ್ನು ಡಾ ಶಶಿಕಾಂತ ಪಟ್ಟಣ ಸರ್ ಸಮರ್ಥವಾಗಿ ಮಾಡಿದ್ದಾರೆ.
ಸರಳವಾದ ಭಾಷೆ ಮತ್ತು ಓದುತ್ತಿರುವಾಗ ನಮ್ಮನ್ನು ಕಿತ್ತೂರು ಕೋಟೆಗೆ ಕರೆದು ಕೊಂಡು ಹೋದ ಅನುಭವ ಹುಟ್ಟಿಸುವ ಓದಿನಲ್ಲಿ ಮುಳುಗಿಸುವ
ವಿವರವಾದ ಅತ್ಯುತ್ತಮ ಲೇಖನ. ಡಾ ಶಶಿಕಾಂತ ಪಟ್ಟಣ ಕಿತ್ತೂರ ಇತಿಹಾಸ ಅಧ್ಯಯನ ಮಾಡಿದ ರೀತಿ ಅದ್ಭುತಗಳ ಸರಣಿ. ಇವರಿಂದ ಇನ್ನೂ ಹಲವಾರು ಬಗೆಯ ಲೇಖನಗಳು ಪ್ರಕಟಗೊಳ್ಳಲಿ

ಎಲ್ಲಾ ಲೇಖನಗಳು ಒಂದು ಪುಸ್ತಕ ರೂಪದಲ್ಲಿ ಬರಲಿ

ಅಂಜಲೀನಾ ಗ್ರೇಗರಿ ಧಾರವಾಡ

Don`t copy text!