ಎಲ್ಲಕಿಂತ ಹೆಚ್ಚಾಗಿ ನಮ್ಮನ್ನು ನಾವು ಗೌರವಿಸೋಣ

ಮಾತು ಕಡಿಮೆ ಯಾಗಿರಲಿ ಒಂದು ಬೋಧನೆಯ ಸ್ಥಳ ಒಂದು ಭೇಟಿಯ ಸ್ಥಳವಲ್ಲ ಹಾಗಾದರೆ ನೀವೇನು ಮಾಡುತ್ತೀರಿ, ಒಂದು ಪೊರಕೆಯನ್ನು ತೆಗೆದುಕೊಳ್ಳಿ ಮತ್ತು ಬೇರೆಯವರ ಮನೆಯನ್ನು ಶುಚಿ ಮಾಡಿ ಅಷ್ಟು ಸಾಕು. ಅದು ಎಲ್ಲವನ್ನು ಹೇಳುತ್ತದೆ ಅಂತ ಮದರ್ ತೆರೆಸಾರು ಹೇಳ್ತಾ ಇದ್ರಂತೆ. ಜ್ಞಾನ ನಮಗೆ ಶಕ್ತಿಯನ್ನು ನೀಡಿದರೆ ನಮ್ಮ ಯೋಗ್ಯತೆ ನಮಗೆ ಗೌರವವನ್ನು ನೀಡುತ್ತದೆ

ಅದೇ ಗೌರವ ಅನೇಕ ಅರ್ಥಗಳನ್ನು ಹೊಂದಿದೆ ಮಾನವನ ಮನಸ್ಸಿನ ಅತ್ಯುತ್ತದ ಭಾವನೆ ಯೋಗ್ಯತೆ, ಮತ್ತು ಗೌರವಾರ್ಥ ಗುಣಮಟ್ಟ ಹಾಗೂ ನಮ್ಮ ವರ್ತನೆ ,ಸಮಾಜದ ನೀತಿ ಸಹಿತೆಯೊಂದಿಗೆ ವ್ಯಕ್ತಿಗಳಿಗೆ ಮೌಲ್ಯ ಮತ್ತು ಸ್ಥಾನ ನಿಗದಿಪಡಿಸಲಾಗುತ್ತದೆ. ಗೌರವವು ಒಂದು ಸಮಾಜಕ್ಕೆ ಗುಂಪಿನೊಳಗೆ ಒಬ್ಬ ವ್ಯಕ್ತಿಯ ಕರ್ತವ್ಯಗಳನ್ನು ವ್ಯಾಖ್ಯಾನಿಸುತ್ತದೆ. ಸ್ವಯಂ ಗೌರವ ಶಿಸ್ತಿನ ಫಲ, ನಮ್ಮನ್ನು ನಾವು ಯಶಸ್ವಿ ವ್ಯಕ್ತಿ ಎಂದು ಭಾವಿಸಿದಾಗ ಮಾತ್ರ ಅದು ನಮಗೆ ಸಿಗಲು ಸಾಧ್ಯ . ಹಾಗಾದರೆ ಈ ಸ್ವ ಗೌರವ ಎಂದರೇನು? ನಾವು ನಮ್ಮ ಬಗ್ಗೆ ಹೊಂದಿರುವ ಭಾವನೆಗೆ ಸ್ವಗೌರವ ಎನ್ನಬಹುದು.ನಮ್ಮನ್ನು ಬೇರೆಯವರು ಗೌರವಿಸಬೇಕೆಂದು ನಾವು ಬಯಸಿದರೆ ಮೊದಲು ನಮ್ಮನ್ನು ನಾವು ಗೌರವಿಸುವುದು ಉತ್ತಮ!

ಅದೇ ನಿಮ್ಮನ್ನು ಇತರರು ಗೌರವಿಸುವಂತೆ ಮಾಡುತ್ತದೆ. ನಾವು ನಮ್ಮ ವಿಚಾರಗಳಲ್ಲಿ ಯೋಜನೆಗಳಲ್ಲಿ ವರ್ತನೆಗಳಲ್ಲಿ ಸ್ವತಂತ್ರವಲ್ಲದಿದ್ದರೆ ನಮ್ಮನ್ನು ಯಾರು ಗೌರವಿಸುವುದಿಲ್ಲ ಇದು ನೆನಪಿರಲಿ.

ನಾವು ಗೌರವಕ್ಕೆ ಅರ್ಹರು ಇತರರನ್ನು ಗೌರವಿಸಿದಂತೆ ನಮ್ಮನ್ನು ನಾವು ಗೌರವ ವಿಸಿಕೊಳ್ಳುವುದೆ ಸ್ವಾಗೌರವ.

ನಿಮ್ಮನ್ನು ನೀವು ಕನಿಷ್ಠ ಎಂದು ತಿಳಿದರೆ ಅದು ದೀರ್ಘಾವಧಿಯ ನಂತರ ಖಿನ್ನತೆ ಅಥವಾ ಆತಂಕದಂತಹ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ, ಸ್ವಾಭಿಮಾನ ಇದ್ದವರು ಮಾತ್ರ ಹೀಗೆ ವಿಚಾರಿಸಲು ಸಾಧ್ಯನಾ ಎನ್ನುವ ಪ್ರಶ್ನೆ ನಮಗೆ ಕಾಡುತ್ತದೆ . ಸ್ವಾಭಿಮಾನವು ನಮ್ಮ ಭಾವನಾತ್ಮಕ ಯೋಗ ಕ್ಷೇಮದ ಒಂದು ಪ್ರಮುಖ ಅಂಶ ಕಡಿಮೆ ಸ್ವಾಭಿಮಾನವೆಂದರೆ ನಾವು ಇರುವ ರೀತಿಯಲ್ಲಿ ಹಾಗೂ ನಾವು ಸಂತೋಷವಾಗಿರುವುದಿಲ್ಲ ಎಂದರ್ಥ, ಈ ಸ್ವಾಭಿಮಾನಿ ಕೆಲವರು ತಮ್ಮ ಸ್ವಾಭಿಮಾನವನ್ನು ಆಂತರಿಕ ಧ್ವನಿಯಾಗಿ ಭಾವಿಸುತ್ತಾರೆ ನೀವು ಏನನ್ನಾದರೂ ಮಾಡಲು ಅಥವಾ ಸಾಧಿಸಲು ಸಾಕಷ್ಟು ಶಕ್ತರಾಗಿದ್ದೀರಿ ಎಂದು ಹೇಳುವ ಅಭಿಮಾನವು ನಾವು ನಮ್ಮನ್ನು ಹೇಗೆ ಗೌರವಿಸುತ್ತೇವೆ ಮತ್ತು ನಮ್ಮ ಸಾಮರ್ಥ್ಯದ ಬಗ್ಗೆ ನಮ್ಮ ಗ್ರಹಿಕೆ ಆಗಿರುತ್ತದೆ, ಉತ್ತಮ ಸ್ವಾಭಿಮಾನ ಹೊಂದಿರುವ ಜನರು ತಮ್ಮ ಬಗ್ಗೆ ಮತ್ತು ಜೀವನದ ಬಗ್ಗೆ ಧನಾತ್ಮಕವಾಗಿ ಭಾವಿಸುತ್ತಾರೆ.ಇದು ಅವರನ್ನು ಹೆಚ್ಚು ಸ್ಥಿತಿಸ್ಥಾಪಕವಾಗಿಸುತ್ತದೆ, ಜೀವನದ ಏರುವಿತಗಳನ್ನು ಉತ್ತಮವಾಗಿ ನಿಭಾಯಿಸುತ್ತದೆ

ಸ್ವಾಭಿಮಾನ ಕಡಿಮೆ ಇರುವ ಜನರಿಗೆ ಸವಾಲುಗಳು ಮತ್ತು ಹಿನ್ನಡೆಗಳಿಂದ ಅವರಿಗೆ ಕಷ್ಟವಾಗುತ್ತದೆ . ಕಷ್ಟಕರ ಸಂದರ್ಭಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ

ಒಬ್ಬ ಮನುಷ್ಯ ತನ್ನ ಬಗ್ಗೆ ತಾನು ಏನು ತಿಳಿದುಕೊಂಡಿದ್ದಾನೆ ಎಂಬುದರ ಮೇಲೆ ಆತನ ವಿಚಾರ ನಿರ್ಧಾರವಾಗುತ್ತದೆ, ನಿಮ್ಮ ಬಗ್ಗೆ ನಿಮ್ಮ ನಕಾರಾತ್ಮಕ ನಂಬಿಕೆಗಳು ಗುರುತಿಸುವುದು ಮತ್ತು ಸವಾಲು ಹಾಕುವುದು ಮೊದಲ ಹೆಜ್ಜೆ, ನಿಮ್ಮ ಬಗ್ಗೆ ನಿಮ್ಮ ಆಲೋಚನೆಗಳನ್ನು ಗಮನಿಸಿ ನೀವು ಹಾಗೆ ಯೋಚಿಸಿದಾಗ ಮಾತ್ರ ನಮಗೆ ನಾವು ಸವಾಲು ಹಾಕಲು ಸಾಧ್ಯ

ಜೊತೆಗೆ ಧನಾತ್ಮಕತೆ ಗುರುತಿಸೋಣ ನಿಮ್ಮ ಬಗ್ಗೆ ಧನಾತ್ಮಕ ವಿಷಯಗಳನ್ನು ಬರೆದುಕೊಳ್ಳುವುದು ಒಳ್ಳೆಯದು . ನಾನು ವಿಫಲನಾಗಿದ್ದೇನೆ ಎಂದು ಹೇಳುವುದನ್ನು ಬಿಟ್ಟು ನಾನು ಸೋಲಿಸಬಲ್ಲೆ ಎಂದು ಹೇಳಿಕೊಂಡರೆ ಹೆಚ್ಚು ಆತ್ಮವಿಶ್ವಾಸ ಹೊಂದಬಹುದು. ಇದರಿಂದ ಸ್ವಾಭಿಮಾನ ಕೂಡ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.

ಗುಲಾಬಿಯನ್ನು ಪ್ರೀತಿಸುವವರು ಮುಳ್ಳನ್ನು ಕೂಡ ಗೌರವಿಸಬೇಕು ಅಲ್ಲವೇ
ಹಾಗಾದರೆ ಸಂಬಂಧಗಳನ್ನು ನಿರ್ಮಿಸೋಣ ಕೆಲವರು ನಿಮ್ಮನ್ನು ಕೆಳಗಿಳಿಸಲು ಪ್ರಯತ್ನಿಸುತ್ತಾರೆ ಅಂತವರೊಂದಿಗೆ ಕಡಿಮೆ ಸಮಯ ಕಳೆಯಲು ಪ್ರಯತ್ನಿಸಿ.

ಸಕರಾತ್ಮಕ ಮತ್ತು ನಿಮ್ಮನ್ನು ಮೆಚ್ಚುವ ಜನರೊಂದಿಗೆ ಸಂಬಂಧವನ್ನು ಬೆಳೆಸಿ ಧನಾತ್ಮಕ ಸಂಬಂಧಗಳನ್ನು ನಿರ್ಮಿಸಿ ನಕಾರಾತ್ಮಕ ಅಂಶಗಳನ್ನು ತಪ್ಪಿಸಿ, ನಿಮ್ಮ ಬಗ್ಗೆ ಕೆಟ್ಟ ಭಾವನೆ ಮೂಡಿಸುವ ಜನರಿದ್ದಾರೆ ಅವರನ್ನು ತಪ್ಪಿಸಲು ಪ್ರಯತ್ನಿಸಿ.

ನಿಮ್ಮ ಆತ್ಮೀಯ ಸ್ನೇಹಿತರು ಇಂತಹ ಪರಿಸ್ಥಿತಿಯಲ್ಲಿ ಇರುವಾಗ ನೀವು ಏನು ಹೇಳುತ್ತೀರಿ ಎಂದು ಕೇಳಿಕೊಳ್ಳಿ.

ಬೇರೆಯವರ ಅಭಿಪ್ರಾಯಗಳು ಒಪ್ಪದಿದ್ದರು ಅವರ ಅಭಿಪ್ರಾಯಗಳನ್ನು ಗೌರವಿಸೋಣ ನೀವು ನೀವೇ ಆಗದಿದ್ದರೆ ನಿಮ್ಮನ್ನು ಇತರರಿಗೆ ಹೋಲಿಕೆ ಮಾಡದಿದ್ದರೆ ಬೇರೆಯವರೊಂದಿಗೆ ಸ್ಪರ್ಧಿಸದಿದ್ದರೆ ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ ನೆನಪಿರಲಿ,

ಕೊನೆಯದಾಗಿ ದೃಢವಾಗಿರೋಣ ದೃಢವಾಗಿ ರುವುದು ಎಂದರೆ ಇತರ ಜನರ ಅಭಿಪ್ರಾಯಗಳು ಮತ್ತು ಅಗತ್ಯಗಳನ್ನು ಗೌರವಿಸುವುದು ಮತ್ತು ಅವರಿಂದ ಅದೇ ರೀತಿ ನಿರೀಕ್ಷಿಸುವುದು, ಅಲ್ಲ ಎಂದು ಹೇಳಲು ಪ್ರಾರಂಭಿಸಿ ಬಹುಪಾಲು ಇಲ್ಲ ಎಂದು ಹೇಳುವುದು ಸಂಬಂಧಗಳನ್ನು ಕೆಡಿಸುವುದಿಲ್ಲ ಹೊಸ ವಿಷಯಗಳನ್ನು ಪ್ರಯತ್ನಿಸುವುದನ್ನು ಅಥವಾ ಸವಾಲುಗಳನ್ನು ತೆಗೆದುಕೊಳ್ಳುವುದನ್ನು ಕಲಿಸುತ್ತದೆ. ಹಾಗಾಗಿ ನಿಮಗೆ ಸಂತೋಷವನ್ನುಂಟು ಮಾಡುವುದನ್ನೆ ಮಾಡಿ ಇದರಿಂದ ನೀವು ಸಕರಾತ್ಮಕವಾಗಿ ಯೋಚಿಸುವ ಸಾಧ್ಯವಾಗುತ್ತದೆ ,

ಸಣ್ಣ ಸಣ್ಣ ವಿಷಯಗಳನ್ನು ವಿಚರಿಸುವುದು ನಿಮ್ಮ ಬಗ್ಗೆ ಉತ್ತಮ ಭಾವನೆ ಮೂಡಿಸಲು ಸಾದ್ಯವಾಗುತ್ತದೆ.

ರಾತೋ ರಾತ್ರಿ ಸ್ವಾಭಿಮಾನ ಹೆಚ್ಚಾಗುವುದಿಲ್ಲ, ಅದಕ್ಕೆ ನಿತ್ಯ ಪ್ರಯತ್ನ ಬೇಕು ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮನ್ನು ನೀವು ಗೌರವಿಸಿ ಸ್ವಾಭಿಮಾನ ಗಳಿಸಿದರೆ ಸುಂದರ ಜೀವನ ತಾನಾಗಲೇ ಅರಳುವುದು!

_ ಮೇನಕಾ ಪಾಟೀಲ್

Don`t copy text!