ಡಿಸಿಸಿ ಬ್ಯಾಂಕ್ ಎಂಡಿ ಐ.ಎಸ್ ಗಿರಡ್ಡಿ ಅವರ ಬೀಳ್ಕೊಡುಗೆ ಸಮಾರಂಭ
ಮೂರು ಲಕ್ಷ ರೈತ ಕುಟುಂಬಗಳಿಗೆ ಡಿಸಿಸಿ ಬ್ಯಾಂಕ್ ನೆರವು
e-ಸುದ್ದಿ ರಾಯಚೂರು
ರಾಯಚೂರು ಮತ್ತು ಕೊಪ್ಪಳ ಅವಳಿ ಜಿಲ್ಲೆಗಳ ಮೂರು ಲಕ್ಷ ರೈತ ಕುಟುಂಬಗಳಿಗೆ ರಾಯಚೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆಧಾರಸ್ಥಂಭವಾಗಿದೆ ಎಂದು ಆರ್.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಪಾಟೀಲ ಹೇಳಿದರು.
ಭಾನುವಾರ ಆರ್.ಡಿ.ಸಿಸಿ ಬ್ಯಾಂಕ್ ಸಭಾಂಗಣದಲ್ಲಿ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ)ಐ.ಎಸ್.ಗಿರಡ್ಡಿ ಅವರ ವಯೋನಿವೃತ್ತಿ ಬೀಳ್ಕೊಡಿಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗಿರಡ್ಡಿಯವರು ಬ್ಯಾಂಕ್ ಅಭಿವೃದ್ದಿಯಲ್ಲಿ ತಮ್ಮ ಸೇವಾ ಅನುಭವ ಸಿಬ್ಬಂದಿ ಜೊತೆ ಹಂಚಿಕೊಂಡು ರಾಜ್ಯದಲ್ಲಿ ಪ್ರಮುಖ ಡಿ.ಸಿ.ಸಿ ಬ್ಯಾಂಕ್ ಆಗಿ ಪರಿವರ್ತಿಸಿದ್ದಾರೆ. ಅವರ ಸೇವಾ ತತ್ಪಾರ್ಯವನ್ನು ಮನಗಂಡ ಆಡಳಿತ ಮಂಡಳಿ ಮುಂದಿನ ಒಂದು ವರ್ಷದ ಅವರಿಗೆ ಅವರ ಸೇವೆಯನ್ನು ಮುಂದುವರೆಸುತ್ತಿದ್ದೇವೆ. ಗಿರಡ್ಡಿ ಅವರ ದಕ್ಷತೆ, ಪ್ರಾಮಾಣಿಕತೆ ಸಿಬ್ಬಂದಿಗಳು ಅನುಸರಿಸುವಂತೆ ಸಲಹೆ ನೀಡಿದರು.
ಸರ್ಕಾರಿ ಸೇವಾ ಅವಧಿಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರು ಪ್ರಾಮಾಣಿಕತೆ, ಶಿಸ್ತುಬದ್ದತೆ ಮತ್ತು ಕರ್ತವ್ಯ ಪ್ರಜ್ಞೆ ಮೈಗೂಡಿಸಿಕೊಳ್ಳಬೇಕು. ನಾನು ನನ್ನ ಜೀವನದಲ್ಲಿ ಇದನ್ನು ಮನಃಪೂರ್ವಕವಾಗಿ ಮೈ ಗೂಡಿಸಿಕೊಂಡಿದ್ದೇನೆ. ವೃತ್ತಿಯಲ್ಲಿ ಬರುವ ಎಡರು ತೊಡರುಗಳನ್ನು ದಾಟಿಕೊಂಡು ಅನ್ನ ಕೊಡುವ ಸಂಸ್ಥೆಯ ಅಭಿವೃದ್ಧಿಗೆ ಪ್ರಾಮಾಣಿಕ ಸೇವೆ ಸಲ್ಲಿಸಬೇಕು ಎಂದು ಸನ್ಮಾನ ಸ್ವೀಕರಿಸಿ ಐ.ಎಸ್ ಗಿರಡ್ಡಿ ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲಿಂಗಸುಗೂರು ವಿ.ಸಿ.ಬಿ. ಕಾಲೇಜಿನ ನಿವೃತ್ತ ಪ್ರಾಚಾರ್ಯ ಸಿ.ಶರಣಪ್ಪ ಮಾತನಾಡಿ ಐ.ಎಸ್. ಗಿರಡ್ಡಿ ಸಹಕಾರ ಇಲಾಖೆಗೆ ಬರುವದಕ್ಕಿಂತ ಮುಂಚೆ ಲಿಂಗಸುಗೂರಿನಲ್ಲಿ ವಿ.ಸಿ.ಬಿ.ಕಾಲೇಜಿನಲ್ಲಿ ಪ್ರತಿಭಾವಂತ ಉಪನ್ಯಾಸಕರಾಗಿದ್ದರು. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉನ್ನತ ಹುದ್ದೆ ಪಡೆದರೂ ಅಹಂಕಾರ ವಿಲ್ಲದೆ ಪ್ರಾಮಾಣಿಕ ಬದಕು ನಡೆಸುತ್ತಿರುವದು ಇತರರಿಗೆ ಮಾದರಿಯಾಗಿದೆ ಎಂದರು.
ಲಿಂಗಸುಗೂರಿನ ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಬಸವಂತರಾಯ ಕುರಿ ಮಾತನಾಡಿ ಐ.ಎಸ್.ಗಿರಡ್ಡಿಯವರು ಕಡಿಮೆ ಸಮಯದಲ್ಲಿ ಡಿ.ಸಿ.ಸಿ. ಬ್ಯಾಂಕನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅವರ ಅನುಭವವನ್ನು ಸಿಬ್ಬಂದಿಗಳು ಪಡೆದುಕೊಂಡು ಮತ್ತಷ್ಟು ಅಭಿವೃದ್ದಿ ಪಡಿಸಲು ಮುಂದಾಗುವಂತೆ ತಿಳಿಸಿದರು.
ಚಂದ್ರಶೇಖರ ರಡ್ಡಿ, ಡಿವೈಎಸ್ಪಿ ರವಿ ಪುರುಷೋತ್ತಮ, ಬಿ.ಎ.ನಂದಿಕೊಲಕೊಲಮಠ, ವೀರೇಶ ಸೌದ್ರಿ, ಸಿಬ್ಬಂದಿಗಳಾದ ನಾಗರತ್ನ, ಬಸವರಾಜ, ಹನುಮಗೌಡ, ಶಿಲ್ಪಾ, ಲಿಂಗಾರೆಡ್ಡಿ, ಅಲಿಮುರ್ತುಜಾ ಗಿರಡ್ಡಿ ಅವರ ಶಿಸ್ತು ಬದ್ಧತೆ, ಕರ್ತವ್ಯಪ್ರಜ್ಞೆ ನಮಗೆಲ್ಲ ಮಾದರಿ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಡಿಸಿಸಿ ಬ್ಯಾಂಕ್ ನಿರ್ದೇಶಕ ವಿಜಯಕುಮಾರ, ಲಿಂಗಸುಗೂರು ಟಿಎಪಿಸಿಎಂಎಸ್ ಶಶಿಧರ ಪಾಟೀಲ, ಮಾನ್ವಿ ಬಸವಶ್ರೀ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಶಂಕರಗೌಡ ಪಾಟೀಲ ಸೇರಿದಂತೆ ಹಳೆಯ ವಿದ್ಯಾರ್ಥಿಗಳು, ಕೊಪ್ಪಳ ರಾಯಚೂರು ಜಿಲ್ಲೆಯ ವಿ.ಎಸ್.ಎಸ್.ಎನ್ ಕಾರ್ಯದರ್ಶಿಗಳು, ಬ್ಯಾಂಕ್ ಸಿಬ್ಬಂದಿ ಹಾಗೂ ಸಂಗನಾಳದ ಗ್ರಾಮಸ್ಥರು ಮತ್ತು ಕುಟುಂಬವರ್ಗ ಭಾಗವಹಿಸಿದ್ದರು