ಮಾನವನ ಇತಿಹಾಸದ ಬೆಳವಣಿಗೆ ಎಂದರೆ ವ್ಯಕ್ತಿ ವ್ಯಕ್ತಿತ್ವವಾಗಿ, ಬದಲಾಗುವುದು
ಮಾನವನ ಇತಿಹಾಸದ ಬೆಳವಣಿಗೆ ಎಂದರೆ ವ್ಯಕ್ತಿ ವ್ಯಕ್ತಿತ್ವವಾಗಿ ಬದಲಾಗುವುದು ಅಂದರೆ ಹುಟ್ಟು ಸಾವಿನ ನಡುವಿನ ದಿನಗಳನ್ನು ಶಾಶ್ವತವಾಗಿ ನೆಲೆಗೊಳಿಸುವುದು, ನಾವು ಸತ್ತ ಮೇಲು ಇದ್ದ ನೆನಪನ್ನು ಉಳಿಸುವುದು ಪ್ರತಿಯೊಬ್ಬ ವ್ಯಕ್ತಿಯ ವಿಕಸನಕ್ಕೆ ವ್ಯಕ್ತಿತ್ವ ವಿಕಸನ ಎಂದು ಹೇಳಬಹುದು.
ಇದು ಮಾನವನ ಬದುಕಿನ ಅನಿವಾರ್ಯ ಅಂಶ ಕೂಡ. ನಮ್ಮಲ್ಲಿ ಹುದುಗಿದ್ದ ವಿಶೇಷ ಶಕ್ತಿ ಮನಗಾಣದೆ ಸಾಮಾನ್ಯ ಜೀವಿಯಂತೆ ಓಡಾಡುತ್ತಿರುವ ಮನುಷ್ಯ ಆತನ ಒಳಗಿನ ಶಕ್ತಿ ಆತನಿಗೆ ಪರಿಚಯಿಸಿ, ತನ್ನ ಮೂಲಕ ತಾನು ಉತ್ಸಾಹವಂತನಾಗಿ ಮಾಡುವುದೆ ದೊಡ್ಡ ಸೋತ್ರ.
ವ್ಯಕ್ತಿತ್ವವಿಕಸನ ಎಂಬುದು ಎಲ್ಲರೂ ಬಯಸುವ ಆದರೆ ಯಾರು ಅದರ ಬಗ್ಗೆ ಚಿಂತಿಸದಿರುವ ವಿಷಯ, ಪರಸ್ಪರ ದೂರುವುದರಲ್ಲಿ ಸಮಯ ಕಳೆಯುವ ನಾವು ನಮ್ಮೊಳಗಿನ ಶಕ್ತಿಯನ್ನು ಅರಿಯುವಲ್ಲಿ ಮನ ಕಾಣುತ್ತಿಲ್ಲ .
ನಮ್ಮ ಶರಣರ ನಾಡಲಿ ಅನೇಕ ಶಿವ ಶರಣರು ತಮ್ಮ ವಚನಗಳ ಮೂಲಕ ಜನರನ್ನು ಬಡೆದುಬ್ಬಿಸಿದ್ದಾರೆ.
ಈ ವ್ಯಕ್ತಿತ್ವ ವಿಕಸನ ಎನ್ನುವುದು ಅತ್ಯಂತ ದುರಾದೃಷ್ಟ ಕಾಲದಲ್ಲೂ ಕೂಡ ಸಂತೋಷದ ಬದಲಾವಣೆಯನ್ನು ಉಂಟುಮಾಡಬಹುದು. ನಾವು ನಿಜವಾಗಿ ಏನು ಮಾಡಲು ಬಯಸುತ್ತಿದ್ದೇವೆ ಅದನ್ನು ಮಾಡಲಾರದೆ ಇರುವುದಕ್ಕೆ ಹಲವಾರು ಕಾರಣ. ಇಂಥದ್ದೇ ಕಾರ್ಯವನ್ನು ಮಾಡಬೇಕು ಅದರಿಂದ ಏನಾದರೂ ಸಾಧಿಸಬೇಕು ಎಂಬ ಆಸೆ ನಮ್ಮೆಲ್ಲರಲ್ಲಿ ಇರುತ್ತದೆ , ಅದಕ್ಕೆ ಬೇಕಾಗಿದ್ದಂತಹ ಸಿದ್ಧತೆಗಳು ಮಾಡಿಕೊಳ್ಳಬೇಕು. ಅನಾಯಾಸವಾಗಿ ಅದರ ಬಗ್ಗೆ ಕೊನೆಯ ಹಂತದಲ್ಲಿ ಅಂಜಿಕೆ ಒಂದು ಆವರಿಸಿಕೊಳ್ಳುತ್ತದೆ, ಇನ್ನಿಲ್ಲದಂತೆ ನಮ್ಮನ್ನು ಕಾಡುತ್ತದೆ, ಆ ಕೆಲಸದಿಂದ ಲಾಭಾ ಬದಲಾಗಿ ನಷ್ಟವೆ ನಮಗೆ ಹೆಚ್ಚಾಗಿ ಕಾಣುತ್ತದೆ.
ಆದ್ದರಿಂದ ಆ ಕೆಲಸ ಮಾಡಲು ಹಿಂದೇಟು ಹಾಕುವ ಮನೋಭಾವ ಉಂಟಾಗುತ್ತದೆ.
ಹೀಗಾಗಿ ಕೊನೆಯದಾಗಿ ಆ ನಮ್ಮ ಕನಸು ಕಾಣುವ ಕೆಲಸ ವನ್ನು ಬಿಡಲು ನಿರ್ಧರಿಸುತ್ತೇವೆ. ಆ ಕೆಲಸದಲ್ಲಿ ಗೆಲುವು ಕಾಣದಿದ್ದಲ್ಲಿ ಅವಮಾನ ಎದುರಿಸುವುದಕ್ಕಾಗಿ ಬದಲಾಗಿ ಆ ಕೆಲಸವನ್ನು ಮಾಡದಿರುವುದೇ ಉಚಿತ ಎಂಬ ನಿರ್ಣಯಕ್ಕೆ ಬರುತ್ತೇವೆ.
ಇದರಿಂದ ಆ ಕೆಲಸದಿಂದ ಸಿಗುವ ಲಾಭಗಳಿಂದ ಮುಂಚಿತವಾಗಿ ನಮ್ಮನ್ನು ನಾವೇ ಬಲಿಪಶು ಮಾಡಿಕೊಂಡು ವಿರೋಧಿಸುತ್ತೇವೆ. ಕೆಲ ಸಮಯದ ನಂತರ ಆ ಕೆಲಸವನ್ನು ಸಾಧಿಸದಿದ್ದರೆ ಚೆನ್ನಾಗಿದ್ದೇನೋ ಎಂದು ಚಿಂತಿಸುತ್ತೇವೆ , ಕಾಲ್ ಮಿಂಚಿ ಹೋಗುತ್ತದೆ.
ಅವಕಾಶ ಕೈ ತಪ್ಪಿ ಹೋಗುತ್ತದೆ ಏನು ಪ್ರಯೋಜನ ಇದೆಲ್ಲಕ್ಕೂ ಪರಿಹಾರವೆಂದರೆ *ನಮಗೆ ನಾವೇ*. ಹಾಗಾದರೆ ಇದರಿಂದ ಹೊರಬರುವುದು ಹೇಗೆ ಎನ್ನುವುದರ ಬಗ್ಗೆ ಚಿಂತಿಸೋಣವೇ.
ಮೊದಲು ನಮಗೆ ನಾವು ಆದ್ಯತೆ ಕೊಡೋಣ.
ಮಡಿಕೆ ಬಾಯಿ ಮುಚ್ಚಬಹುದು ಆದರೆ ಜನರ ಬಾಯಿ ಮುಚ್ಚಲು ಸಾಧ್ಯವೇ?
ಎನ್ನುವ ಹಿರಿಯರ ವಾಣಿಯಂತೆ ಎಲ್ಲರೂ ನಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುವ ಚಿಂತೆಯೇ ಹೆಚ್ಚು. ಹೇಗೆ ಇದ್ದರೂ ಏನು ಮಾಡಿದರು? ಜನ ನಮ್ಮನ್ನು ಟೀಕಿಸುವುದು ಬಿಡಲಾರರು.
ಆದ್ದರಿಂದ ಮೂಲಭೂತವಾಗಿ ಏನು ಮಾಡಬೇಕೆಂದಿದ್ದೀಯೋ, ಅದರಿಂದ ನಾವು ಎಂದಿಗೂ ಸರಿಯಬಾರದು ಮಾಡುವ ಕೆಲಸದಲ್ಲಿ ಯಶಸ್ಸು ಕಂಡುಕೊಳ್ಳಲು ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ ಯಾವುದಕ್ಕೆ ಆದ್ಯತೆ ನೀಡುತ್ತಿವೆ ಅಥವಾ ನಮ್ಮ ಆದ್ಯತೆಗಳು ಯಾವವು ಎಂಬುದೂ ಸ್ಪಷ್ಟವಾಗಿದ್ದರೆ ಖಂಡಿತವಾಗಿ ಅಂದುಕೊಂಡ ಕೆಲಸ ಕೈ ಬಿಡಲಾರೆವು.
ನಾವು ಮಾಡುವ ಕೆಲಸ ಕಡೆ ಎಷ್ಟು ಗಮನ ಬೇಕು, ನಾವು ಎಸ್ಟು ವೈಯಕ್ತಿಕವಾಗಿ ಇದನ್ನು ಮಾಡಲು ಬಯಸುತ್ತೇವೆ ಎನ್ನುವ ಪ್ರಶ್ನೆ ಹಾಕಿಕೊಂಡು ಮುನ್ನು ನಡೆಯಬೇಕು.
ನಾವು ಮಾಡುವ ಕೆಲಸದಲ್ಲಿ ನಮಗೆ ಹೆಮ್ಮೆಯಿರಲಿ
ಕೆಲಸದ ಹೊರೆ ನಮ್ಮ ಸಾಮರ್ಥ್ಯವನ್ನು ಮೀರಿಸುವುದಿಲ್ಲ ಕೆಲಸ ನಮ್ಮ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸುತ್ತದೆ. ಎಲ್ಲರೂ ಮಾಡುತ್ತಿರುವ ಎಲ್ಲಾ ಕೆಲಸಗಳ ಮೇಲೆ ನಿಗಾ ಇಡುವುದು ಕಷ್ಟ ಆದರೆ ನಾವು ಮಾಡಬೇಕಾದ ಕೆಲಸಗಳ ಮೇಲೆ ನಿಗಾ ಇಡುವುದೇ ಸುಲಭ. ಯಾವತ್ತಿಗೂ ನಾವು ಜೀವನದಲ್ಲಿ ಏಕಾಂಗಿಯಾಗಿ ಜವಾಬ್ದಾರಿ ತೆಗೆದುಕೊಳ್ಳಲು ಸಮರ್ಥರಿದ್ದಲ್ಲಿ ನಾವು ಏನು ಬೇಕಾದರೂ ಮಾಡಬಹುದು. ಪರಿಣಿತಿ ಪಡೆದವರ ಸಲಹೆಗಳಿಂದ ನಮ್ಮ ಕೆಲಸಕ್ಕೆ ಹೊಸ ಚಾಲನೆ ಸಿಕ್ಕಲ್ಲಿ ನಾವು ಹೆಚ್ಚು ಕ್ರಿಯಾಶೀಲರಾಗುತ್ತೇವೆ.
ನಮ್ಮಲ್ಲಿ ನಮಗೆ ಆತ್ಮವಿಶ್ವಾಸ ಬೆಳೆಯುತ್ತದೆ ನಮ್ಮ ಕೆಲಸದ ಬಗ್ಗೆ ಅಭಿಮಾನ ಮೂಡುತ್ತದೆ ಜೊತೆಗೆ ನಮ್ಮ ಬಗ್ಗೆ ನಾವು ಯಾವುದೇ ರೀತಿಯ ಹೇಳಿಕೆ ನೀಡಲಾಗದೆ ನಮ್ಮ ಕೆಲಸವೇ ನಮಗೆ ಅತ್ಯುತ್ತಮ ಎಂದು ಭಾವಿಸಿದ್ದಲ್ಲಿ, ನಿಜದಲ್ಲಿ ನಮಗೆ ನಮ್ಮ ಕೆಲಸ ಅತ್ಯುತ್ತಮವಾಗಿ ಕಾಣುತ್ತದೆ. ಜೊತೆಗೆ ನಮಗೆ ಪರ್ಯಾಯ ಮಾರ್ಗ ಯಾವುದು ಎಂಬುದರ ಬಗ್ಗೆ ಆಲೋಚಿಸುವುದು
ದೈನಂದಿನ ಜೀವನದಲ್ಲಿ ಕೆಲವೊಮ್ಮೆ ನಾವು ಅಂದುಕೊಂಡ ನಿರ್ದಿಷ್ಟ ಕೆಲಸ ಮಾಡಲು ಸಾಧ್ಯವಾಗದಂತಹ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿಕೊಳ್ಳುತ್ತೇವೆ. ಅದೇ ಸಂದರ್ಭದಲ್ಲಿ ನೇರವಾಗಿ ನಿರಾಕರಿಸಲಾಗದಂತಹ ಕಾರ್ಯಗಳು ನಮ್ಮೆದುರಿಗೆ ಬಂದು ಕುಳಿತುಕೊಳ್ಳುತ್ತವೆ. ಇಂಥ ಸಂದರ್ಭದಲ್ಲಿ ಅನುಸರಿಸುವುದು ಅನಿವಾರ್ಯವಾಗುವುದು. ಮಾಡಲೇಬೇಕಾದ ಕೆಲಸವನ್ನು ಬಿಟ್ಟು ಹೆಚ್ಚಿನ ತೊಂದರೆ ಇರುವಂತಹ ಕೆಲಸ ನಾವು ಆಯ್ದುಕೊಳ್ಳಬಾರದು , ಆಯ್ಕೆ ನಮ್ಮ ಮುಂದೆ ಮಾತ್ರ ಇರುತ್ತದೆ ತುರ್ತು ಕೆಲಸಗಳಲ್ಲಿ ಭಾಗಿಯಾಗದೆ ಅನ್ಯಮಾರ್ಗವಿಲ್ಲ ವೆನಿಸುತ್ತದೆ. ಆಗ ಅಂತಹ ಪ್ರಸಂಗಗಳನ್ನು ಹೊರತುಪಡಿಸಿ ಉಳಿದಿಲ್ಲ ಪರಿಸ್ಥಿತಿಗಳಿಗೆ ನಾವು ಮಾಡಬೇಕಾದ ಕೆಲಸಗಳ ಸರಿಯಾದ ಯೋಜನೆ ಚಟುವಟಿಕೆ ಅನುಸರಿಸಬೇಕು. ನಮ್ಮ ಕೆಲಸದ ಬಗ್ಗೆ ನಾವು ಉಸ್ತುಕರಾಗಿದ್ದಲ್ಲಿ ನಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರದೇಶ ತಳ್ಳುತ್ತದೆ, ನಾವು ಮಾಡುವ ಕೆಲಸವೇ ಬದುಕಿಗೆ ಸಮೃದ್ಧಿಯನ್ನು ಹಾಗೂ ಅಪಾರ ಮೌಲ್ಯವನ್ನು ತಂದುಕೊಡುವ ವರದಾನವಾಗಿದೆ ಎಂದು ಮನಸ್ಸಿ ಮಾಡಿಕೊಂಡು ಸಕರಾತ್ಮಕವಾಗಿ ಯೋಚನೆ ಮಾಡುತ್ತಾ ಮುನ್ನುಗಬೇಕು ವಿಲಿಯನ್ ಶೇಕ್ಸ್ಪಿಯರ್ ಹೇಳಿದಂತೆ *ನಮ್ಮ ಹಣೆಬರಹವನ್ನು ನಿರ್ಧರಿಸುವ ಜವಾಬ್ದಾರಿ ನಕ್ಷತ್ರಗಳ ಮೇಲೆಲ್ಲ ಅದು ನಮ್ಮ ಮೇಲೆ ಇದೆ* ಎಂದು ಸಿದ್ಧಿ ಮಾಡಿ ತೋರಿಸಬೇಕಾಗಿದೆ.
ಮುಂದುವರೆಯುವುದು….
_ ಮೇನಕಾ ಪಾಟೀಲ್