ನಾವು ನಕರಾತ್ಮಕವಾಗಿ ಯೋಚಿಸದೆ, ಸಕರಾತ್ಮಕವಾಗಿ ಯೋಚಿಸಿ ನಮ್ಮ ಜೀವನ ಸುಂದರಗೊಳಿಸೋಣ
ನಾನು ಇಂಗ್ಲಿಷ್ ಮೀಡಿಯಂನಲ್ಲಿ ಕಲಿತರು ಕನ್ನಡದ ಹುಚ್ಚು ನನಗೆ ಬಿಡಲಿಲ್ಲ, ತುಂಬ ಕಷ್ಟ ಆಗುತಿತ್ತು, ಅಕ್ಷರ ಜೋಡಣೆ , ಕನ್ನಡ ನಿಘಂಟು ಹುಡುಕಿ ಹುಡುಕಿ ಅಕ್ಷರಗಳನ್ನು ತಿಳಿದುಕೊಳ್ಳುವ ಪ್ರಸಂಗ ತುಂಬಾ ಸರ್ತಿ ಎದುರಾಗಿತ್ತು. ಅಪ್ಪ ಇಲ್ಲದ ನಾನು, ನನ್ನ ತಾಯಿ ಶಿಕ್ಷಣದ ಬಗ್ಗೆ ಅಷ್ಟು ಬಲ್ಲವರಲ್ಲ ಬಡತನದಲ್ಲಿ ಬಂದ ನನಗೆ, ಈಗಿನ ಕಾಲದಲ್ಲಿ ಅವಕಾಶಗಳು ಎಲ್ಲಿಂದ ಸಿಕ್ಕವು?? ಅಲ್ಲದೆ ಎಲ್ಲದಕ್ಕೂ ಬೇಕು ಅಂತ ಕೇಳುವ ಕಂಪ್ಯೂಟರ್ ಜ್ಞಾನ ಅಷ್ಟಕಷ್ಟೇ ಎಂದು ಕೈಕಟ್ಟಿಕೊಂಡು ಅದೆಷ್ಟು ಜನರು ಹಾಳಾದ ಹಣೆಬರಹವನ್ನು ಬೈದುಕೊಳ್ಳುತ್ತಾ ಬದುಕು ಕಟ್ಟಿಕೊಳ್ಳಲಾಗದೆ ಕಂಗೊಡುತ್ತಿದ್ದಾರೆ, ಅಷ್ಟೇ ಅಲ್ಲ ಎಷ್ಟೋ ತರಬೇತಿ ಪಡೆದುಕೊಂಡವರು ಕೂಡ ಕೆಲಸ ಸಿಗದೇ ಕುಳಿತ್ತಿದ್ದಾರೆ. ಅಂತದ್ರಲ್ಲಿ ಮಾತು ಮಾತಿಗೆ ಜನರಿಗೆ ಕಿವಿ ಕೊಟ್ಟು ಹಿಂದುಳಿದವರೇ ಹೆಚ್ಚು
ನಮ್ಮ ಜೀವನ ಅತಿ ದುರ್ಲಭ ಮತ್ತು ಅಡೆತಡೆಗಳ ಪಥ
ಅದರಲ್ಲೂ ನಾವು ನಿರಾಶದಾಯಕ ಮನೋಭಾವ ಹೊಂದಿದವರಾಗಿದ್ದರೆ ನಾವು ನಮಗೆ ಅತಿ ದೊಡ್ಡ ಅಡೆತಡೆ. ನಿರಾಶದಾಯಕ ಮನೋಭಾವ ಹೊಂದಿದವರು ಗೆಳೆತನ, ಉದ್ಯೋಗ ,ವಿವಾಹ ಸಂಬಂಧ , ಹೀಗೆ ಅನೇಕ ವಿಷಯಗಳ ತಲೆಗೆ ಹಾಕಿಕೊಂಡು ಬಳಲುತ್ತಾರೆ. ಅವುಗಳಲ್ಲಿ ಕ್ರೋಧ ಅಸಮಾಧಾನ ಜೊತೆಗೆ ಗುರಿ ಇಲ್ಲದ ಜೀವನ, ಅನಾರೋಗ್ಯ, ಹೀಗೆ ಅನೇಕ ಕಾರಣಗಳಿಂದ ಒತ್ತಡಕ್ಕೆ ಒಳಗಾಗುತ್ತಾರೆ.
ಈಗಿನ ಯುವ ಪೀಳಿಗೆ ಗಳಲ್ಲಿ ಇಂತಹ ನಿರಾಶದಾಯಕ ವಾತಾವರಣ ನಾವು ಕಾಣಬಹುದು , ಈಗಿನ ಯುವಕರಿಗಾಗಲಿ ಮಧ್ಯಮ ವರ್ಗಗಳಾಗಲಿ ವಯಸ್ಸಾದವರಿಗಾಗಲಿ ಹೇಳುವುದಿಷ್ಟೇ, ನಮ್ಮ ನಕಾರಾತ್ಮಕ ನಡುವಳಿಕೆ ಗೊತ್ತಾದಾಗ ಅದನ್ನೇ ನಾವು ಬದಲಿಸಿಕೊಳ್ಳಬೇಕು
ಬದಲಾವಣೆಯನ್ನುದು ಸಾಮಾನ್ಯವಾಗಿ ಮನುಷ್ಯ ಪ್ರತಿರೋ ರ್ಧಿಸುತ್ತಾನೆ, ಬದಲಾವಣೆ ಹಿತದಾಯಕವಾಗುವದಿಲ್ಲ ಅಂತ ಗೊತ್ತಾದಾಗ ಅಂತು ಬೇಡವೇ ಬೇಡ, ಪರಿಣಾಮ ಒಳ್ಳೆದಾಗಿರಬಹುದು ಅಥವಾ ಕೆಟ್ಟದಿರಬಹುದು ಅದು ಪ್ರಯಾಸಕರ ಹಾಗಾದರೆ ಕೆಲವೊಮ್ಮೆ ನಾವು ನಮ್ಮ ನಕರಾತ್ಮಕತೆಯಲ್ಲಿ ಎಷ್ಟೊಂದು ಆರಾಮವಾಗಿರುತೆ ಎಂದರೆ ಬದಲಾವಣೆ ಒಳ್ಳೇದಕ್ಕಾಗಿದ್ದರು ಕೂಡ ಅದನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ.
ಯಾಕೆಂದರೆ ನಕರಾತ್ಮಕತೆಗೆ ಅಂಟಿಕೊಂಡಿರುತ್ತೇವೆ. ನಾವು ಮಾಡುವ ಯೋಚನೆಗೆ ಹಾಗೂ ನಮ್ಮ ಅದೃಷ್ಟಕ್ಕೆ ಸಂಬಂಧ ಇದ್ಯಾ? ಬುದ್ಧಿವಂತನು ಅವಕಾಶಗಳನ್ನು ತನ್ನ ಭಾಗ್ಯವನ್ನಾಗಿ ಬದಲಾಯಿಸಿಕೊಳ್ಳುತ್ತಾನೆ. ಅದೇ ದಡ್ಡ ಸಿಕ್ಕವಕಾಶ ಚೆನ್ನಾಗಿ ಉಪಯೋಗಿಸಿಕೊಳ್ಳುವುದಕ್ಕಿಂತ ಸಿಗದಿರುವ ಅವಕಾಶಗಳನ್ನು ಹೆಚ್ಚು ನೆನೆದು ಕೊರಗುತ್ತಾನೆ. ಒಂಟಿಯಾಗಿದ್ದರೆ ಬೆಲೆಯಲ್ಲಿಂದು ??
ಬೆಲೆ ಇಲ್ಲದ ಸೊನ್ನೆಗೆ ಅಂಕಿಯ ಜೊತೆ ಸೇರಿದರೆ ಅಂಕಿಗೆ ಬೆಲೆ ಹೆಚ್ಚುತ್ತದೆ ಅಲ್ಲವೇ.. ಹಾಗಾದರೆ ಈ ನಕರಾತ್ಮಕ ಧೂರ್ರಣೆಗಳನ್ನ ತಳಿದು ಸಕರಾತ್ಮಕತೆಯನ್ನು ನಾವು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಸುತ್ತಮುತ್ತ ನಡೆಯುತ್ತಿರುವುದನ್ನೆಲ್ಲ ಕತೆ ಕಣ್ಣಿಂದ ಸದಾ ನೋಡುತ್ತಿರಬೇಕು. ಉತ್ಸಾಹದಿಂದ ಅವಲೋಕಿಸಬೇಕು. ಅವಕಾಶಗಳನ್ನು ಬಾಚಿಕೊಳ್ಳಬೇಕು . ಸಿದ್ಧತೆ ಕಾರ್ಯವೈಖರಿ ಜವಾಬ್ದಾರಿ ನೀಗಿಸುವ ರೀತಿ ಕಠಿಣ ಸವಾಲು ಎದುರಿಸಬೇಕು. ಎನ್ನುವದೇ ನನ್ನ ಉದ್ದೇಶ .
ಅವಕಾಶಗಳು ಸಳೆಯುವ ಮೊದಲ ಹೆಜ್ಜೆ ಎಂದರೆ ನಮ್ಮನ್ನು ನಾವು ತಿಳಿಯಬೇಕು ಹೀಗೆ ನಮ್ಮ ಕೆಲಸಕ್ಕೆ ನಾವು ಮಹತ್ವ ನೀಡಿದ್ದಾದಲ್ಲಿ ಅತ್ಯುತ್ತಮ ಪ್ರತಿಭಾ ಶಕ್ತಿ ನಮ್ಮಲ್ಲಿಂದ ಹೊರಬರಹುದು. ನಾವೇನು ಯೋಚಿಸುತ್ತೇವೆ ಎಂಬುದರ ಮೇಲೆ ಎಲ್ಲವೂ ನಿರ್ಧಾರಿತಗೊಂಡಿದೆ.
ಹಾಗಾದ್ರೆ ಎಚ್ಚರವಿರಲಿ
ಸಕಾರಾತ್ಮಕ ಧೋರಣೆಗಳು ಬೇಕಾದಲ್ಲಿ ಇತರರೊಡನೆ ನೋಡುವ ಮಾತನಾಡುವ ಉತ್ತರಿಸುವ ರೀತಿ ನಗುವ ಶೈಲಿ ಕುಳಿತುಕೊಳ್ಳುವ ಭಂಗಿ ಎಲ್ಲಾ ನಮ್ಮ ವ್ಯಕ್ತಿತ್ವದ ನೆರಳಿನಂತೆ ನಾವು ಮಾಡುವ ಎಲ್ಲವೂ ಬೇರೆಯವರ ಮೇಲೆ ಪ್ರಭಾವ ಬೀರುತ್ತದೆ. ನಿರ್ಧರಿಸುವಾಗ ನಮ್ಮ ನಿರ್ಧಾರ ಮೇಲೆ ಎಂತ ಪರಿಣಾಮ ಬೀರಬಲ್ಲದು ಎಂಬುದರ ಮೇಲೆ ಲಕ್ಷ ಕೊಡಬೇಕು .
ನಮ್ಮ ಸಾಮರ್ಥ್ಯದ ಪ್ರಭಾವ ಜನರ ಮೇಲೆ ಬೀಳುತ್ತಿರುತ್ತದೆ ಹಾಗೆಯೇ ನಾವು ವಿಚಾರಿಸುವುದನ್ನು ನಮ್ಮ ಮನಸ್ಸಿನ ಮೇಲೆ. ನಾವು ಸಕಾರಾತ್ಮಕವಾಗಿ ಯೋಚಿಸಿದ್ದಲ್ಲಿ ಎಲ್ಲೆಲ್ಲೂ ಅವಕಾಶಗಳಿವೆ. ಅವುಗಳನ್ನು ಉಪಯೋಗಿಸಿಕೊಳ್ಳುವ ಜಾಣ್ವ್ಯವನ್ನು ಬೆಳೆಸಿಕೊಳ್ಳಬೇಕು . ನಮ್ಮ ಆಲೋಚನೆ ಆಸಕ್ತಿಯೇ ಹೊಂದುವ ಅವಕಾಶಗಳನ್ನು ಸ್ವಲ್ಪ ಭಾಗಿಸಿ ತಿರುಚಿ ನಮ್ಮದಾಗಿಸಿಕೊಳ್ಳಬೇಕು. ಜ್ಞಾನ ಕೌಶಲ್ಯ ಸದ್ಗುಣ ರೂಡಿಸಿಕೊಳ್ಳಬೇಕು . ಇದರಿಂದ ನಾವೂ ಸದಾ ಉತ್ಸುಕರಾಗಿ ಕಾರ್ಯಗಳನ್ನು ಮಾಡಲು ಸದಾ ಸಿದ್ಧರಾಗಿರುತ್ತೇವೆ. ……
ಮುಂದುವರೆಯುವುದು…..
–ಮೇನಕಾ ಪಾಟೀಲ್