ಕಿತ್ತೂರು ಇತಿಹಾಸದ ರೋಚಕ ಅಂಶಗಳ ಅನಾವರಣ
ಕಿತ್ತೂರು ಇತಿಹಾಸದ ಪುಟದಲ್ಲಿ ದಾಖಲಾಗಬೇಕಾದ ಹಲವು ಐತಿಹಾಸಿಕ,ರೋಚಕ ಅಂಶಗಳ ಅನಾವರಣವನ್ನು ಡಾ.ಶಶಿಕಾಂತ ಪಟ್ಟಣ ಸರ್ ಅವರು ಮಾಡಿದ್ದಾರೆ..
ಕಿತ್ತೂರಿನ ಇತಿಹಾಸದ ಕುರಿತು ತಮ್ಮ ಸುದೀರ್ಘ, ಸಂಶೋಧನಾತ್ಮಕ ಸರಣಿ ಲೇಖನಗಳು, ಓದುಗರ ಮನ ಮುಟ್ಟುವಂಥ ಲೇಖನಗಳು. ಕರ್ನಾಟಕದ ವೀರ ವನಿತೆಯರಲ್ಲಿ ಅಗ್ರಗಣ್ಯ, ಧ್ರುವತಾರೆಯ ತ್ಯಾಗ,ದೇಶಾಭಿಮಾನ, ಬಲಿದಾನ, ಹೋರಾಟ ಅವಿಸ್ಮರಣೀಯ..
ಡಾ.ಶಶಿಕಾಂತ್ ಪಟ್ಟಣ ಸರ್ ಅಕ್ಕನ ಅರಿವಿನ ತಂಡದೊಂದಿಗೆ ನಮ್ಮನ್ನು ಕಿತ್ತೂರಿನ ಕೋಟೆಗೆ ಕರೆದೊಯ್ದರು.. ವೀರ ಪರಂಪರೆಯ ಅಧಿದೇವತೆ , ಕನ್ನಡತಿ, ಚೆನ್ನಮ್ಮಳ, ಹೋರಾಟಗಾರರ ತ್ಯಾಗವನ್ನು ಹೆಮ್ಮೆಯಿಂದ, ನೆನಪಿಸಿ ಕೊಳ್ಳುವಂತೆ ತಮ್ಮ ಬರಹದ ಮೂಲಕ ಪ್ರೇರೇಪಿಸಿದ್ದಾರೆ.
ಅವರ ಈ ಸರಣಿ ಲೇಖನಗಳಲ್ಲಿ ಅವರ ರಾಷ್ಟ್ರಭಿಮಾನ, ಸಾರ್ವಭೌಮತ್ವ, ಇತಿಹಾಸವನ್ನು ಸಂರಕ್ಷಿಸುವ ಕಳಕಳಿಯೊಂದಿಗೆ, ಓದುಗರ ಏಕಾಗ್ರತೆಯನ್ನು ಐತಿಹಾಸಿಕ ಲೋಕಕ್ಕೆ ಸಾಗಿಸುತ್ತ, ಅವರು ಅನಾವರಣಗೊಳಿಸಿದ ಒಂದೊಂದು ಸಂಶೋಧನಾತ್ಮಕ, ಐತಿಹಾಸಿಕ, ವಿಷಯಗಳು, ಒಂದೊಂದು ರೋಚಕ ಕಥೆಯನ್ನು ಪಿಸುಗುಡುತ್ತವೆ.
ಸರ್ ಅವರ ಲೇಖನ ವಸ್ತುನಿಷ್ಠತೆಯನ್ನು, ಪ್ರಭಾವಿಸುವ ಪ್ರಮುಖ ಅಂಶಗಳು ಮುಕ್ತ ಮನಸ್ಸಿನಿಂದ, ಶಿಸ್ತುಬದ್ಧ ತನಿಖೆ ಮೂಲಕ ನೂತನ ಸಂಗತಿಗಳ, ಕುರಿತು ನಮೆಲ್ಲಾರಿಗೂ ಐತಿಹಾಸಿಕ ಜ್ಞಾನ ನೀಡಿ, ನಮ್ಮ ನಾಡಿನ ಬಗ್ಗೆ ಇರುವ ಹೆಮ್ಮೆ ಇನ್ನಷ್ಟು ಬಲಪಡಿಸಿದ್ದಾರೆ.
ನಮ್ಮ ನಾಡು ಎದುರಿಸುತ್ತಿರುವ ಅನೇಕ ಸಮಸ್ಯೆಗಳೊಂದಿಗೆ, ಸ್ವದೇಶಿತನಕ್ಕೆ ಅವಹೇಳನ ಎದುರಾಗುತ್ತಿರುವ, ಇಂದಿನ ದಿನಗಳಲ್ಲಿ, ಇಂಥ ಮೌಲ್ಯಯುತ ಲೇಖನಗಳ ತುಂಬಾ ಅಗತ್ಯವಿದೆ.. ಕಗ್ಗತ್ತಲೆಯಲ್ಲಿದ್ದ ಆ ಭವ್ಯ ಇತಿಹಾಸದ ಮೇಲೆ ಡಾ. ಶಶಿಕಾಂತ್ ಪಟ್ಟಣ ಸರ್, ಅವರ ಸರಣಿ ಲೇಖನಗಳು,ಕಾರ್ತಿಕ ನಂದಾ ದೀಪಗಳಂತೆ🪔🪔 ಕಿತ್ತೂರಿನ ಇತಿಹಾಸದ ಮೇಲೆ ಹೊಸಬಳಕನ್ನು ಚೆಲ್ಲಿದೆ..
ಸರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಹಾಗೆಯೇ ಈ ಸರಣಿ ಲೇಖನಗಳು ಪುಸ್ತಕ ರೂಪದಲ್ಲಿ ಹೊರತಂದು,ಎಲ್ಲರೂ ಲೇಖನದಲ್ಲಿ ಅಡಗಿರುವ ಮೌಲ್ಯ,ಅರ್ಥೈಸಿ ಕೊಳ್ಳಲಿ.
..ತಮ್ಮ ಲೇಖನವನ್ನು ತಲುಪುಸುತ್ತಿರುವ e-ಸುದ್ದಿ ಸಂಪಾದಕರಾದ ಶ್ರೀ.ವೀರೇಶ್ ಸೌದ್ರಿ ಸರ್ ಅವರಿಗೂ ಅನಂತ ಧನ್ಯವಾದಗಳು.
–ಡಾ ಶಾರದಾಮಣಿ.ಏಸ್. ಹುನಶಾಳ. ವಿಜಯಪುರ