ಮೋಧೇರಾ ಸೂರ್ಯ ದೇವಾಲಯ

ಮೋಧೇರಾ ಸೂರ್ಯ ದೇವಾಲಯ.

ಪ್ರವಾಸ ಲೇಖನ

ಗುಜರಾತಿನ ಪ್ರಸಿದ್ಧ ದೇವಾಲಯ. ಪಾಠಣ ನಿಂದ 35ಕಿಲೋಮೀಟರು.ಪಾಠಣ ಪಟೊಲಾ ಸೀರೆಗೆ ಪ್ರಸಿದ್ಧಿ.ಇದು ಇಕ್ಕಟ್ ಹೆಣಿಗೆ ಸೀರೆ.ಇದಕ್ಕೆ ತರಕಾರಿಯಿಂದಾ ಮಾಡಿದ ಬಣ್ಣ ಬಳಸುತ್ತಾರೆ. ಇದಕ್ಕೆ ಪ್ರತಿ ಹೆಣಿಗೆಗೆ ಬಣ್ಣ ಹಾಕ್ತಾ ಹೋಗ್ತಾರೆ. ಹಾಗಾಗಿ ಇದು ತುoಬಾ ದುಬಾರಿ.ಪಟೊಲಾ ಹಿಂದೆ ಗುಜರಾತನ ರಾಜಧಾನಿಯಾಗಿತ್ತು.ಕುಮಾರ್ ಪಾಲಎನ್ನುವ ಸೋಲoಕಿ ರಾಜ ಇದಕ್ಕೆ ಪ್ರೋತ್ಸಾಹಿಸಿ ಬೆಳಿಸಿದ್ದಾರೆ. ಈಗ ಈ ಸೀರೆ ನೇಯುವವರು ಕಡಿಮೆಯಾಗಿದ್ದಾರೆ. ಇದು ಶುದ್ಧ ರೇಷ್ಮೆ ಸೀರೆ.
ಪಟೋಲಾ ದಿಂದ 35 ಕಿಲೋಮೀಟರು ದೂರದಲ್ಲಿದೆ. ಈ ದೇವಾಲಯ ಕಟ್ಟಿದ್ದು ಸೋಲoಕಿ ರಾಜರು. ಈ ದೇವಾಲಯ ಕರ್ಕ ವೃತ್ತದ ಮೇಲೆ ಇದೆ.ವರ್ಷದ ಎರಡು ದಿನ ಮಾರ್ಚ್ 21ಹಾಗೂ ಸೆಪ್ಟೆಂಬರ್ 21 ಸೂರ್ಯ ಉದಯದ ಮೊದಲ ಕಿರಣ ಗರ್ಭಗುಡಿಯ ಪ್ರತಿಮೆಯ ಮೇಲೆ ಬೀಳುತ್ತೆ.
ಇದನ್ನ ಕಟ್ಟಿ 1000 ವರ್ಷ ಆಯಿತು.
ದೇವಸ್ಥಾನ ಮೂರು ಭಾಗದಲ್ಲಿದೆ.ಮೊದಲು ಸೂರ್ಯ ಕುಂಡ. ಎರಡನೇದು ಸಭಾಗೃಹ. ಮೂರನೆಯದು ಗರ್ಭಗುಡಿ. ಗರ್ಭಗುಡಿಯಲ್ಲಿ ಈಗ ದೇವರಿಲ್ಲ. ಅಲ್ಲಾವೂದ್ದಿನ್ ಖಿಲ್ಜಿ ದಾಳಿಯಲಿ ಧ್ವoಸಗೊಂಡಿದೆ.ಅದು ಸೂರ್ಯ ದೇವಾಲಯ. ಸೂರ್ಯಕುಂಡದಲ್ಲಿ 108 ಚಿಕ್ಕ ಚಿಕ್ಕ ದೇವಾಲಯ ಇದೆ. ಸೂರ್ಯನ ವ್ಯಾಸಕ್ಕೆ 108 ರಿಂದ ಗುಣಿಸಿದರೆ ಸೂರ್ಯಹಾಗೂ ಭೂಮಿಯ ದೂರ ಸಿಗುತ್ತೆ. ಅದೇ ರೀತಿ ಚಂದ್ರನ ವ್ಯಾಸಕ್ಕೆ 108 ರಿಂದ ಗುಣಿಸಿದರೆ ಭೂಮಿ ಮತ್ತು ಚಂದ್ರನ ದೂರ ಸಿಗುತ್ತೆ. ಇದು 108ರ ಗಮ್ಮತ್ತು. ದೇವಾಲಯದ ಗೋಪುರಕ್ಕೆ ವಿಮಾನ ಅಂತಾರೆ.
ಸಭಾ ಮಂಟಪದಲ್ಲಿ 52ಕಂಬಗಳಿವೆ. ಭೂಮಿಯ ಒಂದು ಸುತ್ತು ಹೊಡೆಯಲು 52ವಾರಗಳು ಬೇಕು.365ದಿನಗಳು. ಸಭಾಗ್ರಹ ಧ್ಯಾನ ಮಾಡಲು ಇದೆ.ಸಭಾಗೃಹ ಎರಡನೇ ಭಾಗ. ಮೂರನೇದು ಗರ್ಭ ಗುಡಿ. ಆಕ್ರಮಣದಲ್ಲಿ ಮೂರ್ತಿ ಇಲ್ಲವಾಗಿದೆ.ಹೊರಗೆ ಸೂರ್ಯನ ಕೆತ್ತಿದ್ದಾರೆ ಏಳು ಕುದುರೆ… ಏಳು ಬಣ್ಣ ಹಾಗೂ ಏಳು ವಾರ ಪ್ರತಿನಿಧಿಸುತ್ತೆ.ಮತ್ತೆ ಮತ್ತೆ ನೋಡಬೇಕು ಎನಿಸುವ ಸುಂದರ ತಾಣ. ರಾತ್ರಿ ವಿದ್ಯುತ್ ದೀಪದಲ್ಲಿ ಮೋಹಕವಾಗಿ ಕಾಣುತ್ತದೆ. ನಾನು ಸೀರೆ ಉಟ್ಟು ಫೋಟೋ ತೆಗೆಸಿಕೊಂಡು ಖುಷಿ ಪಟ್ಟೆ.

✍️ ಶ್ರೀಮತಿ. ವಿದ್ಯಾ ಹುಂಡೇಕರ

Don`t copy text!