ರೂ.8ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ-ರಾಜಾ ವೆಂಕಟಪ್ಪ ನಾಯಕ

e- ಸುದ್ದಿ ಮಾನ್ವಿ

‘ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದ ಸಂಪರ್ಕ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ತಾಲ್ಲೂಕಿನ ಬ್ಯಾಗವಾಟ ಗ್ರಾಮದಲ್ಲಿ ಸೋಮವಾರ ರೂ. 8ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತಬಾಡಿದರು.
‘ ಪಿಎಂಜಿಎಸ್‍ವೈ ಯೋಜನೆ ಅಡಿಯಲ್ಲಿ ರೂ.8ಕೋಟಿ ಅನುದಾನದಲ್ಲಿ ಬ್ಯಾಗವಾಟ ಗ್ರಾಮದಿಂದ ಬಾಗಲವಾಡ ಗ್ರಾಮಕ್ಕೆ ಆಂಧ್ರ ಕ್ಯಾಂಪಿಗಳ ಮೂಲಕ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ದಿಗೆ ಕ್ರಮ ಕೈಗೊಳ್ಳಲಾಗಿದೆ. ಗುಣಮಟ್ಟದ ಕಾಮಗಾರಿ ನಿರ್ವಹಣೆಗೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಗಮನಹರಿಸಬೇಕು. ಸುಸಜ್ಜಿತ ರಸ್ತೆಗಳನ್ನು ನಿರ್ಮಿಸಬೇಕು’ ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಬಸನಗೌಡ ಬ್ಯಾಗವಾಟ, ಉಮೇಶ ಪಾಟೀಲ್, ರಾಜಾ ರಾಮಚಂದ್ರ ನಾಯಕ, ಜಂಬುನಾಥ ಯಾದವ್, ಮಲ್ಲಿಕಾರ್ಜುನಗೌಡ ಬಲ್ಲಟಗಿ ಗೋಪಾಲ ನಾಯಕ ಹರವಿ, ಚಂದ್ರಪ್ಪ ಸಾಹುಕಾರ, ಖಲೀಲ್ ಖುರೇಷಿ, ಶಿವನಗೌಡ ಬ್ಯಾಗವಾಟ, ಅಮರೇಶ ನಾಯಕ, ರವಿಗೌಡ ಬ್ಯಾಗವಾಟ, ಮೌಲಾಸಾಬ್, ಲಕ್ಷ್ಮಣ ಯಾದವ್, ಬಸನಗೌಡ ಬೆಟ್ಟದೂರು, ಚೆನ್ನಯ್ಯ ಶೆಟ್ಟಿ, ಯಲ್ಲಪ್ಪ ನಾಯಕ, ಆದೇಶ ನಾಯಕ, ದೇವಪ್ಪ ನಾಯಕ ಇದ್ದರು.

Don`t copy text!