ಅತ್ಯಾಚಾರಿ ಹನುಮೇಶಗೆ ೧೦ ವರ್ಷ ಜೈಲು, ೨೫ ಸಾವಿರ ದಂಡ

e-ಸುದ್ದಿ, ಗಂಗಾವತಿ

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತಾಲೂಕಿನ ಲಕ್ಷ್ಮೀ ಕ್ಯಾಂಪ್‌ನ ನಿವಾಸಿ ಹನುಮೇಶಗೆ ಕೊಪ್ಪಳ ಜಿಲ್ಲಾ ಮತ್ತು ಸತ್ರ(ಪೋಕ್ಸೋ) ನ್ಯಾಯಾಲಯ 10ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 25ಸಾವಿರ ರೂ.ಗಳ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಖಾಸಗಿ ವಾಹನ ಚಾಲಕನಾಗಿರುವ ಹನುಮೇಶ, ಅಪ್ರಾಪ್ತೆಯನ್ನು ಪ್ರೀತಿಸುವುದಾಗಿಯೂ ಮದುವೆಯಾಗುವುದಾಗಿಯೂ ನಂಬಿಸಿ ಅತ್್ಯಾಚಾರ   ಮಾಡಿ ನಂತರ ಮದುವೆಗೆ ನಿರಾಕರಿಸಿದನೆಂದು ಬಾಲಕಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಪ್ರಕರಣಕ್ಕೆ ಸಂಬಂಧಿಸಿದಂತೆ 2016ರ ಮಾ.19ರಂದು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ 2012ರಡಿ ದೂರು ದಾಖಲಾಗಿತ್ತು.

ಪ್ರಕರಣದ ತನಿಖೆ ಕೈಗೊಂಡ ಸಿಪಿಐ ಪ್ರಭಾಕರ ಧರ್ಮಟ್ಟಿ, ಹನುಮೇಶ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಮತ್ತು ಸತ್ರ(ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶ ಶಂಕರ ಜಾಲವಾಡಿ ಅವರು ಆರೋಪಿ ಹನುಮೇಶ ತಪ್ಪಿತಸ್ಥನೆಂದು ತೀರ್ಮಾನಿಸಿ ಬುಧವಾರ(ನ.೧೮) ಆದೇಶ ಹೊರಡಿಸಿದ್ದಾರೆ. ಸಂತ್ರಸ್ತೆ ಪರ ವಿಶೇಷ ಸರ್ಕಾರಿ ಅಭಿಯೋಜಕಿ ಗೌರಮ್ಮ ಎಲ್.ದೇಸಾಯಿ ವಾದ ಮಂಡಿಸಿದ್ದರು.

Don`t copy text!