ನಮ್ಮ ನಡವಳಿಕೆ ಬದಲಾವಣೆಗೆ ಅನುಸರಿಸಬೇಕಾದ ಕ್ರಮಗಳು
ಸಕಾರಾತ್ಮಕ ನಡವಳಿಕೆಯನ್ನು ಬಳಸಿಕೊಂಡು ಅದನ್ನು ಕಾಪಾಡಿಕೊಳ್ಳಲು ನೀವು ಬಯಸಿದ್ದೆ ಆದರೆ , ಈ ಕೆಳಗಿನ ಸಂಗತಿಗಳನ್ನು ಕಾಳಜಿ ಪೂರ್ವಕವಾಗಿ ಅನುಸರಿಸೋದು ಒಳ್ಳೇದು.
ದೃಷ್ಟಿಕೋನ ಬದಲಿಸಿಕೊಂಡು ಸಕರತ್ಮಕವಾಗಿ ಯೋಚಿಸುವದರ ಕಡೆಗೆ ಗಮನಹರಿಸುವುದು, ನಾವು ಒಳ್ಳೆಯ ಸಂಗತಿಗಳನ್ನು ಹುಡುಕುವರಾಗಬೇಕು, ಜೀವನದಲ್ಲಿ ಒಳ್ಳೆಯ ಸಂಗತಿಗಳ ಮೇಲೆ ಮನಸ್ಸು ಕೇಂದ್ರೀಕರಿಸುವ ದೃಷ್ಟಿಕೋನ ಬೆಳೆಸಿಕೊಳ್ಳಬೇಕು, ಒಬ್ಬ ವ್ಯಕ್ತಿಯಲ್ಲಿ ಅಥವಾ ಒಂದು ಸನ್ನಿವೇಶದಲ್ಲಿ ಕೆಟ್ಟದ್ದನ್ನು ಹುಡುಕುವ ಬದಲು ಒಳ್ಳೆಯದನ್ನ , ಹಾಗೂ ನೋಡುವ ಸ್ವಭಾವ ಬೆಳೆಸಿಕೊಳ್ಳಲು ಆರಂಭಿಸಬೇಕು, ನಮ್ಮ ಗುಣ ಸ್ವಭಾವದಿಂದ ನಾವು ಕೇವಲ ಕೆಟ್ಟದ್ದನ್ನು ಮಾತ್ರ ನೋಡುವ ರೂಡಿ ಬೆಳೆಸಿಕೊಂಡಿರುವುದರಿಂದ ಉತ್ತಮವಾಗಿರುವುದನ್ನು ಕೂಡ ಮರೆತು ಬಿಟ್ಟಿರುತ್ತೇವೆ.
ಏನಿರಲಿ ಕೆಲವರು ಟೀಸುತ್ತಾರೆ. ಕೆಲವರಿಗಂತೂ ಟೀಕೆ ಮಾಡುವುದೇ ಕಸುಬು. ವೃತ್ತಿಯಿಂದ ಟಿಕಾಕಾರರು ಅಂತವರು ಏನಾದರೂ ಇದ್ದರೆ ಬಹುಮಾನ ಗಿಟ್ಟಿಸಿ ಕೊಳ್ಳುವುದಂತು ಅವರೇ ಗ್ಯಾರಂಟಿ. ಕೆಲ ವ್ಯಕ್ತಿ ಮತ್ತು ಕೆಲ ಸನ್ನಿವೇಶದಲ್ಲಿ ಇಂಥವರನ್ನು ನಾವು ಕಾಣಬಹುದು. ಕೆಲವರಂತೂ ಯಾವತ್ತೂ ನ್ಯೂನತೆಗಳನ್ನು ಅಷ್ಟೇ ನೋಡುತ್ತಾರೆ , ಇಂಥವರು ನಿರಾಶವಾದಿಗಳೆ ಎಂದು ಹೇಳಬಹುದು, ಸಂತೋಷದಿಂದ ಇರುವಾಗಲೂ ಕೂಡ ಬೇಸರಸಿಕೊಳ್ಳುವವರು ಜೀವನದ ಬಹುತೇಕ ಅವಧಿಯನ್ನು ಟೀಕೆ ದೋಷಣೆ ಮಾಡುವಾದರಲ್ಲಿಯೆ ಕಳೆಯುವರು, ಕನ್ನಡಿ ಎಂಥ ಜೀವನದಲ್ಲಿ ಸದಾ ಒಡಕನ್ನೆ ಹುಡುಕುವಂತವರು ,
ಪರಿಶ್ರಮ ಯಾರನ್ನು ನೋಯಿಸುವುದಿಲ್ಲವೆಂದು ಗೊತ್ತಿದ್ದರೂ , ಏಕೆ ಶ್ರಮ ಪಡಬೇಕೆಂದು ಭಾವಿಸುವವರು. ಇಂತಹವರಲ್ಲಿ ಏನನ್ನು ನಿರೀಕ್ಷಿಸಲು ಸಾಧ್ಯ?
ಅದೇ ಮನುಷ್ಯ ಆಶಾವಾದಿಗಳಾದಲ್ಲಿ ಮನಸ್ಸಿನ ಶಾಂತಿಗೆ ಯಾವುದೇ ವಿಷಯ ಭಂಗ ತರಲಾರದೆಂಬ ಗಟ್ಟಿ ನಿಲುವು ತಾಳಿದವನಾಗಿರುತ್ತಾನೆ.
ಆನಂದ ಮತ್ತು ಏಳಿಗೆಯ ಕುರಿತು ಮಾತನಾಡುತ್ತಾನೆ. ಪ್ರತಿಯೊಬ್ಬರಲ್ಲೂ ಏನೋ ಒಂದು ಮುಖ್ಯವಾದದ್ದು ಇದೆ ಎಂಬುದು ಮನವರಿಕೆ ಮಾಡಿ ಕೊಡುತ್ತಾನೆ.
ಪ್ರತಿಯೊಂದು ವಸ್ತು ಅಥವಾ ಪ್ರತಿಯೊಬ್ಬನಲ್ಲಿ ಒಳ್ಳೆಯ ಸಂಗತಿಯನ್ನು ನೋಡುತ್ತಾನೆ.
ಒಳ್ಳೆಯದಕ್ಕಾಗಿ ದುಡಿಯುತ್ತಾನೆ ,ಒಳ್ಳೆಯದನ್ನೇ ನಿರೀಕ್ಷಿಸುತ್ತಾನೆ, ಹಿಂದಿನ ಪ್ರಮಾದಗಳನ್ನ ಮರೆತು ಮುಂದೆ ಸಾಧಿಸುವ ಸಾಧನೆಯ ಬಗ್ಗೆ ಲಕ್ಷ ವಹಿಸುತ್ತಾನೆ, ಎಲ್ಲರೊಂದಿಗೆ ಸಂತೋಷದಿಂದ ಯಾರನ್ನು ಟೀಕಿಸಲು ಸಮಯವಿಲ್ಲದಂತೆ, ತನ್ನ ಸಾಧನೆಗೆ ಹೆಚ್ಚಿನ ಸಮಯ ಮೀಸಲಾಡುತ್ತಾನೆ.
ಏನು ಇರಲಿ ನಮ್ಮ ಜೀವನದ ಒಂದಿಲ್ಲೊಂದು ಘಟ್ಟದಲ್ಲಿ ನಾವು ಕಾಲಹರಣ ಮಾಡುತ್ತೇವೆ, ಇದಕ್ಕೆ ನಾನೇನು ಹೊರತಲ್ಲ. ಅದಕ್ಕಾಗಿ ಅನಂತರ ಅಶತಾಪ ಪಟ್ಟಿದ್ದು ಉಂಟು, ಯಾವುದೇ ಕೆಲಸ ಇರಲಿ ಅದನ್ನು ಈಗ ಮಾಡದೆ ಮುಂದೂಡುವ ನಕರಾತ್ಮಕತೆಯನ್ನು ಬೆಳೆಸುತ್ತದೆ.
ಒಂದು ಕೆಲಸವನ್ನು ಮಾಡಿ ಮುಗಿಸುವ ಪ್ರಯತ್ನಕ್ಕಿಂತ ಅದನ್ನು ಮುಂದೂಡುವುದರಿಂದ ಆಗುವ ತೊಂದರೆ ಹೆಚ್ಚು. ಮಾಡಿ ಮುಗಿಸಿದ ಕೆಲಸದಲ್ಲಿ ಒಂದು ಬಗೆಯ ತೃಪ್ತಿರುತ್ತದೆ, ಸಮಾಧಾನವಿರುತ್ತದೆ, ಲವಲವಿಕೆ ಇರುತ್ತದೆ , ಮಾಡದೇ ಇರುವ ಕೆಲಸವು ಸೋರುವ ಟ್ಯಾಂಕಿನಂತೆ ನಮ್ಮ ಶಕ್ತಿ ವ್ಯರ್ಥ ಮಾಡುತ್ತದೆ.
ನಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ನಾವು ಹೇಗೆ ಯೋಚಿಸುತ್ತೇವೆ , ಎಂಬುದು ನಮ್ಮ ನಂಬಿಕೆಯೆ ರೂಪಿಸುತ್ತದೆ, ನಂಬಿಕೆಯೇ ಬದುಕಿನ ಬುನಾದಿ ಎಂಬ ಮಾತನ್ನು ಮರೆಯುವಂತಿಲ್ಲ.
ಗೌರವಿಸುವ ಕೆಲ ಜನರ ಬಗ್ಗೆ ಯೋಚಿಸಿ , ನೀವು ಅವರಲ್ಲಿ ಏನನ್ನು ಮೆಚ್ಚುತ್ತೀರಿ, ನೀವು ಗೌರವಿಸುವ ಯಾವ ಲಕ್ಷಣಗಳನ್ನು ಅವರು ಹೊಂದಿದ್ದಾರೆ, ನಿಮ್ಮ ಸ್ವಂತ ಜೀವನದಲ್ಲಿ ಇವುಗಳನ್ನು ನೀವು ಹೇಗೆ ನೋಡುತ್ತೀರಿ, ಎಂಬುದನ್ನು ಆಲೋಚಿಸಿ.
ಯಾವುದನ್ನು ಬದಲಾಯಿಸಬಹುದು ಮತ್ತು ಏಕೆ ?
ಎಂದು , ತೃಪ್ತಿಯ ಕ್ಷಣಗಳನ್ನು ಅನುಭವಿಸುವದು ಯಾವುದು ಮುಖ್ಯವೆಂದು, ತೋರಿಸುತ್ತದೆಯೋ ಅದನ್ನೇ ಪ್ರತಿಬಿಂಬಿಸಿ.
ಒಮ್ಮೆ ನೀವು ನಿಮ್ಮ ಮೌಲ್ಯಗಳನ್ನು ಪ್ರತಿಬಿಂಬಿಸಿದರೆ ಪುನರಾವರ್ತಿಸಬಹುದಾದ ವಿಷಯಗಳ ಪ್ರತಿಕ್ರಿಯೆಗಳನ್ನು ಪರೀಕ್ಷಿಸಿ. ಹೀಗೆಯೇ ನಮ್ಮನ್ನು ನಾವೂ ಒಳ್ಳೆಯ ನಿರ್ಧಾರದತ್ತ ಕರೆದುಕೊಂಡು ಹೋಗಬಹುದು.
ಮುಂದುವರೆಯುವುದು….
_ ಮೇನಕಾ ಪಾಟೀಲ್