ಅಂಬೇಡ್ಕರ್

 

ಅಂಬೇಡ್ಕರ್
ಬಾಬಾ ಅಂಬೇಡ್ಕರ್
ಹೊಸ ಮಾರ್ಗದ ಬೆಳಕು
ಬುದ್ದ್ಗ ಬಸವೇಶ್ವರ

ನ್ಯಾಯ ಪ್ರೀತಿ ಶಾಂತಿ
ಸಮ ಬಾಳು ಸಮ ಪಾಲು
ಕಪ್ಪು ನೆಲದ ಕೆಂಪು ಸೂರ್ಯ
ಪರಿವರ್ತನೆ ಗುರಿಕಾರ

ಇಲ್ಲವಾದವು ಹಿಂಸೆ ಸುಲಿಗೆ
ದೂರವಾದವು ಶೋಷಣೆ
ಜಾತಿ ಮತ ಮೆಟ್ಟಿ ನಿಂತೇ
ಸಮತೆ ಮಮತೆ ಕನಸುಗಾರ

ದಲಿತಪರ ಗಟ್ಟಿ ಧ್ವನಿ
ಸಮಾನತೆಯ ಜೀವ ವಾಣಿ
ಬದುಕುಗಳ ಹಕ್ಕು ಕೊಟ್ಟೆ
ಸಂವಿಧಾನ ರಚನಾಕಾರ

ಕಿತ್ತು ಕಂದರ ಸೇತುವೆ
ಮನುಜ ಪಥದ ಯಾನ
ಬಡವ ಶೂದ್ರ ಯೊಧರಾದರು
ನವ ನಿರ್ಮಾಣಕಾರ

ಹಸಿವು ಬಡತನ ಬಳಲಿಕೆ
ಸೋಲು ಟೀಕೆ ಟಿಪ್ಪಣೇ
ಪರಿನಿರ್ವಾಣ ನಿನ್ನ ಮೆರಗು
ಜಗವ ಗೆದ್ದ ಕ್ರಾಂತಿಕಾರ

-ಡಾ ಶಶಿಕಾಂತ ಪಟ್ಟಣ ರಾಮದುರ್ಗ

 

Don`t copy text!