ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಮತ್ತು ಡಾ ಎಂ ಎಂ ಕಲಬುರ್ಗಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಕಟ

ಡಾ. ಎಂ ಎಂ ಕಲಬುರ್ಗಿ ವಚನ ಸಿರಿ ಮತ್ತು ಡಾ ಎಂ ಎಂ ಕಲಬುರ್ಗಿ ಸಾಹಿತ್ಯ ಸಿರಿ ಪ್ರಶಸ್ತಿ ಪ್ರಕಟ

 

 

 

 

 

 

 

 

ಕಲ್ಬುರ್ಗಿ ಫೌಂಡೇಶನ್ ವಿಜಯಪುರ ಇವರು ಕೊಡ ಮಾಡುವ ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಮತ್ತು ಡಾ ಎಂ ಎಂ ಕಲಬುರ್ಗಿ ಸಾಹಿತ್ಯ ಸಿರಿ ಪ್ರಶಸ್ತಿಗಳು ನಾಡು ಕಂಡ ಶ್ರೇಷ್ಠ ಲೇಖಕ ಸಂಶೊಧಕ ಮಾನವತಾವಾದಿ. ಕನ್ನಡ ಮತ್ತು ಬಸವಣ್ಣ ಇವರ ಕಾರ್ಯಕ್ಷೇತ್ರ ಇವರ ಹೆಸರಿನಲ್ಲಿ ಹೆಚ್ಚಿನ ಸಾಧನೆ ಮತ್ತು ಕಾರ್ಯ ಮಾಡುವ ಸಾಧಕರಿಗೆ ಕೊಡುವ ಈ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಡಾ ಎಂ ಎಂ ಕಲಬುರ್ಗಿ ವಚನ ಸಿರಿ ಪ್ರಶಸ್ತಿಯನ್ನು  ಶರಣೆ ಸುಜಾತ ಪಾಟೀಲ ಅವರಿಗೆ, ಡಾ ಎಂ ಎಂ ಕಲಬುರ್ಗಿ ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಡಾ ಶಶಿಕಾಂತ ಪಟ್ಟಣ ಅವರು ಆಯ್ಕೆ ಆಗಿದ್ದಾರೆ.

ಕಲ್ಬುರ್ಗಿ ಫೌಂಡೇಶನ್ ವಿಜಯಪುರ ಇವರು ಕೊಟ್ಟ ಪ್ರಶಸ್ತಿಗಳು ಬಯಸದೆ ಬಂದ ಲಿಂಗ ಭೊಗ ಎಂದು ಡಾ ಶಶಿಕಾಂತ್ ಪಟ್ಟಣ ಅಭಿಪ್ರಾಯ ಪಟ್ಟು ನಮಗೆ ಡಾ ಎಂ ಎಂ ಕಲ್ಬುರ್ಗಿ ಅವರ ಸಾಧನೆ ಪರಿಶ್ರಮ ಸ್ಫೂರ್ತಿ ಎಂದು ಹೇಳಿದ್ದಾರೆ.

ಆಯ್ಕೆ ಸಮಿತಿಯ ಡಾ ಎಂ ಎಂ ಪಡಶೆಟ್ಟಿ ಸರ್ ಡಾ ಲಿಂಗಪ್ಪ ಕಲಬುರ್ಗಿ ಸರ್ ಲೀನಾ ಅಕ್ಕ ಕಲ್ಬುರ್ಗಿ ಶ್ರೀ ಶಿವಲಿಂಗಪ್ಪ ಅಣ್ಣ ಕಲ್ಬುರ್ಗಿ ಮತ್ತು ಡಾ ಶೆಟ್ಟರ್ ಮೃತ್ಯುಂಜಯ ಇವರು ವಿಜೇತ ಸುಜಾತ ಪಾಟೀಲ್ ಮತ್ತು ಡಾ ಶಶಿಕಾಂತ ಪಟ್ಟಣ ವರನ್ನು ಅಭಿನಂದಿಸಿದ್ದಾರೆ.

ಕನ್ನಡ ಮತ್ತು ಬಸವಣ್ಣನವರ ಸೇವೆ ಕಾರ್ಯ ಮಾಡುವ ಸಾಧಕರಿಗೆ ಇವೆರಡು ಪ್ರಶಸ್ತಿ ಕೊಡಲಾಗುವುದು .ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವು ಗುಂಪಿನ ಸಕ್ರಿಯ ಸದಸ್ಯರಿಗೆ ಮಾತ್ರ ಪ್ರಶಸ್ತಿ ನೀಡಲಾಗುವುದು.

ಪ್ರಶಸ್ತಿ ಮೊತ್ತ ತಲಾ ಹತ್ತು ಸಾವಿರ ರೂಪಾಯಿ ಮತ್ತು ಡಾ ಎಂ ಎಂ ಕಲ್ಬುರ್ಗಿ ಅವರ ಹೆಸರಿನಲ್ಲಿ ನೆನಪಿನ ಫಲಕ
ಕೊಡಲಾಗುವುದು.
ಪ್ರತಿ ವರ್ಷ ಇವೆರಡು ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಕಲ್ಬುರ್ಗಿ ಫೌಂಡೇಶನ್ ವಿಜಯಪುರ ಇವರು ಪ್ರಕಟಿಸಿದ್ದಾರೆ. ಇವೆರಡು ಪ್ರಶಸ್ತಿಗಳನ್ನು ಜನೆವರಿ 7 ರಂದು ಸಿಂದಗಿಯಲ್ಲಿ ನೀಡಲಾಗುವುದು ಎಂದು ಪ್ರಕಕಟಿಸಿದ್ದಾರೆ.

Don`t copy text!