ನೀತಿ ಇಲ್ಲದ ಶಿಕ್ಷಣ ಸಮಾಜಕ್ಕೆ ಕೇಡು

ನೀತಿ ಇಲ್ಲದ ಶಿಕ್ಷಣ ಸಮಾಜಕ್ಕೆ ಕೇಡು

ಯಾವತ್ತಿಗೂ ಆಶೀರ್ವಾದ ಮತ್ತು ಅನುಗ್ರಹವನ್ನು ಎಣಿಸಿ ಹೊರೆತು ಕಷ್ಟವನಲ್ಲ. ಈ ಕಷ್ಟ ಕೇವಲ ಸಂಜೆ ಇರುವ ಹಾಗೆ ಮುಂಜಾನೆ ಎದ್ದ ತಕ್ಷಣ ಬೆಳಗಾಗಲೇಬೇಕು ಜೊತೆ ಸೂರ್ಯ ಹುಟ್ಟಲೇಬೇಕು!

ಗುಲಾಬಿಯ ಸುಹಾಸನೆಯನ್ನು ಸವಿಯಲು ಸಮಯ ಮಾಡಿಕೊಳ್ಳೋಣ, ಅಪಘಾತ ಅಥವಾ ಅನಾರೋಗ್ಯದಿಂದ ಕುರುಡಾದವರು ಅಥವಾ ಅಂಗವಿಕಲರಾದವರು ಪರಿಹಾರದ ಮೂಲಕ ಲಕ್ಷಾಂತರ ರೂಪಾಯಿ ಪಡೆದಿದ್ದನ್ನ ನೀವು ನಾವು ನೋಡಿರಬಹುದು ಅಥವಾ ಕೇಳಿರಬಹುದು. ಆದರೆ ನಮ್ಮಲ್ಲಿ ಎಷ್ಟೋ ಜನ ಇಂಥವರಿಗೆ ಸಹಾಯ ಮಾಡಲು ಬಯಸುತ್ತಾರೆ ಹೇಳಿ?
ಖಂಡಿತವಾಗಿಯೂ ಹೆಚ್ಚು ಜನರಲ್ಲ,

ನಾವು ನಮ್ಮಲ್ಲಿರದ ಉತ್ತಮ ಸಂಗತಿಗಳ ಬಗ್ಗೆ ಕೊರಗುವುದರಲ್ಲಿ ಎಷ್ಟು ತಲೀನರಾಗಿದ್ದೇವೆ ಎಂದರೆ ನಮ್ಮಲಿ ಇರುವಂತಹ ಒಳ್ಳೆಯ ಸಂಗತಿಗಳು ನಮಗೆ ಕಾಣುವುದೇ ಇಲ್ಲ, ನಮ್ಮಲ್ಲಿ ಕೂಡ ಸಂತೋಷಪಡುವ ಅನೇಕ ಸಂಗತಿಗಳಿವೆ ಎಂಬುದು ಅರಿವಿರಲಿ,

ಯಾವತ್ತೂ ಆಶೀರ್ವಾದವನ್ನು ಎಣಿಸಿ ಹೊರೆತು ಕಷ್ಟವನಲ್ಲ

ಹೀಗೆ ಹೇಳಿದಾಗ ಮೊದಲ ನನ್ನ ಸಂದೇಶವೇನೆಂದರೆ ಬೇಗನೆ ಸಂತುಷ್ಟರಾಗಬೇಡಿ ಎಂದು, ಯಾಕೆಂದರೆ ಸಂತುಷ್ಟರಾಗಿ ಎಂಬ ಸಂದೇಶವನ್ನು ನೀವು ಪಡೆದರೆ ನಿಮಗೆ ತಪ್ಪು ಕಲ್ಪನೆ ಮೂಡಿಸಿದ ಕೊರಗು ನನ್ನನ್ನು ಕಾಡುತ್ತದೆ ,ಎಂದು ಭಾವಿಸಿರುತ್ತೇನೆ. ಶಾಲೆ ಅಥವಾ ಕಾಲೇಜುಗಳಲ್ಲಿ ಮಾತ್ರ ಉತ್ತಮ ಶಿಕ್ಷಣ ಪಡೆಯುತ್ತೇವೆ ಎಂಬ ಭಾವನೆ ತಪ್ಪು ಕಲ್ಪನೆ ಇವತ್ತಿಗೆ ಹೊಡೆದು ಹಾಕೋಣ.

ಯಾಕೆಂದ್ರೆ ಬೇರೆ ಬೇರೆ ದೇಶಗಳಲ್ಲಿ ಉಪನ್ಯಾಸ ನೀಡುವ ಸಭಿಕರಿಗೆ ಒಂದು ಪ್ರಶ್ನೆ ಕೇಳಲು ಬಯಸುತ್ತೇನೆ ಕೆಲವರು ಹೌದು ಎಂದಾದರೆ ಬಹುತೇಕ ಮಂದಿ ಇಲ್ಲ ಅನ್ನುತ್ತಾರೆ, ಯಾಕೆಂದರೆ ಶಾಲೆ ಮತ್ತು ಕಾಲೇಜುಗಳಲ್ಲಿ ನಾವು ಸಾಕಷ್ಟು ಮಾಹಿತಿ ಪಡೆಯುತ್ತೇವೆ. ಶಿಕ್ಷಕರಾಗಲು ನಮಗೆ ಮಾಹಿತಿ ಬೇಕು ಆದರೆ ಶಿಕ್ಷಣದ ನಿಜವಾದ ಅರ್ಥ ಅರಿಯುವುದು ಅಗತ್ಯ ಅಲ್ಲವೇ?

ಬೌದ್ಧಿಕ ಶಿಕ್ಷಣ ನಮ್ಮ ಬುದ್ಧಿಯ ಮೇಲೆ ಪ್ರಭಾವಬಿರುತ್ತದೆ ಮೌಲ್ಯಧಾರಿತ ಶಿಕ್ಷಣ ನಮ್ಮ ಭಾವದ ಮೇಲೆ ಪ್ರಭಾವ ಬೀರುತ್ತದೆ , ನಮ್ಮ ಭಾವ ಅಥವಾ ಹೃದಯವನ್ನು ತರಬೇತಿಗೊಳಿಸಬೇಕಾದ ಶಿಕ್ಷಣ ಅಪಾಯಕಾರಿ, ನಮ್ಮ ಕಚೇರಿ ಮನೆ ಸಮಾಜದಲ್ಲಿ ನೀತಿಬಲ ಅಥವಾ ಸಂಪನ್ನಶೀಲತೆಯನ್ನು ಬೇಳಸಬೇಕೆಂದು ಬಯಸಿದರೆ ನಾವು ಕನಿಷ್ಠ ಮಟ್ಟದ ನೀತಿ ಹಾಗೂ ತತ್ವ ನಡುವಳಿಕೆಯ ಸಾಕ್ಷರತೆಯನ್ನು ಸಾಧಿಸಬೇಕು, ಪ್ರಮಾಣಿಕತೆ ಅನುಕಂಪ ಧೈರ್ಯ ದೃಢತೆ ಮತ್ತು ಜವಾಬ್ದಾರಿಯನ್ನು ಬಿಂಬಿಸುವ ಇಂದಿಗೆ ಶಿಕ್ಷಣ ಅಗತ್ಯವಾಗಿದೆ.

ನಮಗೆ ಅಕೆಡಮಿ ಶಿಕ್ಷಣ ಬೇಕಿಲ್ಲ ನಮಗೆ ಬೇಕಿರುವುದು ಮೌಲ್ಯದ ಶಿಕ್ಷಣ, ಅತ್ಯುತ್ತಮವಾದ ಅಕಾಡೆಮಿ ಶಿಕ್ಷಣ , ಹೊಂದಿ ನೈತಿಕವಾಗಿ ದಿವಾಳಿ ಹೊಂದಿದವನಿಗಿಂತ ನೈತಿಕ ಶಿಕ್ಷಣ ಪಡೆದವರು ಜೀವನದಲ್ಲಿ ಯಶಸ್ವಿಯಾಗಲು ಹೆಚ್ಚು ಸಮರ್ಥರು ಎಂದು ನಾನು ಭಾವಿಸಿದ್ದೇನೆ .

ಬುದ್ಧಿ ಹಾಗೂ ಭಾವವನ್ನು ತರಬೇತಿಗೊಳಿಸುವುದೇ ನೈಜ ಶಿಕ್ಷಣ, ಏನೇ ಬಂದರೂ ಎದುರಿಸಿ ಬಿಡಬಲ್ಲ ನಾವು ಜ್ಞಾನ ವಿವೇಕ ಮತ್ತು ಪ್ರಜ್ಞಾ ಇಂದ ಸ್ಪರ್ಧಿಸುವ ಅಗತ್ಯವಿದೆ.
ಹೊರತು ಸ್ಥಾನ ಶ್ರೇಣಿ ಅಲ್ಲ.

ನಮ್ಮಲ್ಲಿ ಇರುವಂತಹ ಜ್ಞಾನ ಯಾವತ್ತು ಮಾಹಿತಿಯನ್ನು ಸ್ವೀಕರಿಸಬಲ್ಲದು, ಹೆಚ್ಚು ಕಲಿಕೆ ಉತ್ತಮ ಶ್ರೇಣಿ ಮತ್ತು ಡಿಗ್ರಿ ಪಡೆಯಬಹುದು, ಯಾರೇ ಆಗಲಿ ಕಲಿಯಬೇಕಾದ ಮುಖ್ಯ ಸಂಗತಿ ಎಂದರೆ ಕಲಿಯಲು ಕಲಿಕೆ ಹಾಗೂ ಮಾಹಿತಿಯನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ.

ನೀತಿ ಇಲ್ಲದ ಶಿಕ್ಷಣ ಸಮಾಜಕ್ಕೆ ಕೇಡು

ಜ್ಞಾನ ಪರಿಜ್ಞಾನವೇ ಶಕ್ತಿ ಸಾಮರ್ಥ್ಯ, ಎಂದು ಹೇಳುವುದನ್ನು ನಾವು ಕೇಳಿದ್ದೇವೆ. ಆದರೆ ಅದು ಸರಿಯಲ್ಲ ಜ್ಞಾನವೆಂದರೆ ಅದು ಮಾಹಿತಿ , ಅದೊಂದು ಸಂಭಾವ್ಯಶಕ್ತಿ ಸಾಮರ್ಥ್ಯ , ಅದು ಕಾರ್ಯರೂಪಕ್ಕೆ ಬಂದಾಗ ಮಾತ್ರ ಅದು ಶಕ್ತಿ ಸಾಮರ್ಥ್ಯ ಆಗುತ್ತದೆ . ಓದು ಬಾರದ ಮತ್ತು ಓದಲು ಬಂದರು ಓದದ ವ್ಯಕ್ತಿಗಳ ನಡುವೆ ಇರುವ ವ್ಯತ್ಯಾಸ ಏನು ಗೊತ್ತಾ ಹೆಚ್ಚಿನ ವ್ಯತ್ಯಾಸವಿಲ್ಲ ಈ ಕಲಿಕೆ ಎಂಬುದು ಬಹುಪಾಲು ಊಟ ಮಾಡಿದಂತೆ, ನಾವು ಎಷ್ಟು ಊಟ ಮಾಡಿದ್ದೀವಿ ಅನ್ನುವುದಕ್ಕಿಂತ ಎಷ್ಟು ಜೀರ್ಣಿಸಿಕೊಂಡಿದ್ದೆವು ಎನ್ನುವುದು ಮುಖ್ಯವಾಗುತ್ತದೆ.

ಜ್ಞಾನ ಪರಿಜ್ಞಾನ ಸಂಭಾವ್ಯಶಕ್ತಿ ಶಿಕ್ಷಣದ ಹಲವಾರು ರೂಪಗಳಿವೆ ಗ್ರೇಡ್ ಡಿಗ್ರಿಗಳಷ್ಟೇ ಅದು ಸೀಮಿತವಾಗಿಲ್ಲ . ಶಿಕ್ಷಣ ಎಂದರೆ ಶಕ್ತಿ ಸಾಮರ್ಥ್ಯಗಳ ರೂಪಿಸಿಕೊಳ್ಳುವುದು ಆತ್ಮ ಸಂಯಮ ಶಿಸ್ತು ರೂಡಿಸಿಕೊಳ್ಳುವುದು. ಕೇಳುವುದು, ಕಲಿಯುವದು.
ಜೊತೆಗೆ ಕಲಿಯುವ ಆತುರ ಇರುವಂತವರು, ನಮ್ಮ ಮೆದುಳು ಸ್ನಾಯುಗಳಿಗಿಂತ ನಾವು ಅಭ್ಯಾಸ ಮಾಡಿದಂತೆ ಬೆಳೆಸಿದಂತೆ ಅದು ಹೆಚ್ಚುತ್ತಾ ಹೋಗುತ್ತದೆ ,

ಶಿಕ್ಷಣವೆಂದರೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಕಲಿಕೆಯಲ್ಲ! ನೆನಪಿರಲಿ!!!!

ಮುಂದುವರೆಯುತ್ತದೆ…

ಮೇನಕಾ ಪಾಟೀಲ್

Don`t copy text!