‘ಗಾಂಧೀಜಿ ಎಂದಿಗೂ ಅಮರ ‘
e-ಸುದ್ದಿ ಸುರಪುರ
ಸುರಪುರ: ‘ಮೋಹನದಾಸ ಕರಮಚಂದ ಗಾಂಧಿ ಅವರು ಸಾಮಾನ್ಯತೆಯಿಂದ ಅಸಾಮಾನ್ಯತೆಯೆಡೆಗೆ ಸಾಗಿದವರು. ಅವರು ಸತ್ಯ ಅಹಿಂಸೆ ತ್ಯಾಗ ಪ್ರಾಮಾಣಿಕತೆ ಮೂಲಕ ಈ ದೇಶದ ಜನರಿಗೆ ಬ್ರಿಟೀಷ್ ರಿಂದ ಸ್ವಾತಂತ್ರ್ಯ ದೊರಕಿಸಿಕೊಟ್ಟರು. ಅವರು ಇಂದು ಜಗತ್ತಿನ ಮಹಾತ್ಮಾ . ಇಡೀ ಜಗತ್ತು ಅವರ ಜೀವನದ ರೀತಿ ನೀತಿಯಿಂದ ಪ್ರಭಾವಿತಗೊಂಡಿದೆ. ಮಹಾತ್ಮಾ ಗಾಂಧಿ ಎಂದಿಗೂ ಜನ ಮಾನಸದಲ್ಲಿ ತಮ್ಮ ಅಚ್ಚಳಿಯದ ಪ್ರಭಾವ ಬೀರಿದ್ದಾರೆ. ಜಗತ್ತಿನಲ್ಲಿ ದಾಸ್ಯತ್ವವನ್ನು ಕಿತ್ತೊಗೆದು ಭಾವೈಕ್ಯದ ಮುನ್ನುಡಿ ಬರೆದವರು ಮಹಾತ್ಮಾಜಿ’ ಎಂದು ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ ಹೇಳಿದರು.
ಅವರು ಇಂದು ಸುರಪುರದ ಗಾಂಧೀಜಿ ಮೂರ್ತಿಗೆ ನಮನ ಸಲ್ಲಿಸಿ ಮಾತನಾಡುತ್ತಿದ್ದರು.
‘ಈ ದೇಶದ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಬಹಳಷ್ಟು ಅಪಾಯಕಾರಿ ಸ್ಥಿತಿಯಲ್ಲಿವೆ. ಅದರ ರಕ್ಷಣೆಗಾಗಿ ಎಲ್ಲರೂ ಕೈ ಜೋಡಿಸಬೇಕು. ಮಹಾತ್ಮಾನಂತಹ ಶ್ರೇಷ್ಠರ ದಾರಿಯಲ್ಲಿ ಸಾಗಬೇಕು. ಮುಂದೆ ಬರಲಿರುವ ಚುನಾವಣೆಯಲ್ಲಿ ಯೋಗ್ಯರನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವದ ಗೌರವ ಕಾಪಾಡಬೇಕು’ ಎಂದು ಹಿರಿಯ ನ್ಯಾಯವಾದಿ ನಿಂಗಣ್ಣ ಚಿಂಚೋಡಿ ಹೇಳಿದರು.
ಮುಖಂಡರಾದ ಹಣಮಂತ ಕಟ್ಟಿಮನಿ ಮಾತನಾಡಿದರು. ಶೋಷಿತ ವರ್ಗದ ಹಿತರಕ್ಷಣಾ ಸಮಿತಿ ಅಧ್ಯಕ್ಷ ವೆಂಕೋಬ ದೊರೆ, ದಯಾನಂದ ಜಮಾದಾರ, ಲಕ್ಷ್ಮಣ ಗುತ್ತೇದಾರ, ಚಿನ್ನು ಪಟೇಲ, ಬಿಜೆಪಿ ಧುರಿಣ ಮಲ್ಲೇಶಿ ಪಾಟೀಲ, ನ್ಯಾಯವಾದಿ ಅನಿಲ, ಇತರರು ಉಪಸ್ಥಿತರಿದ್ದರು.