ನಾವು- ನಮ್ಮವರು
ಸಹೃದಯಿ ಸವದತ್ತಿಯ ಶಶಿಕುಮಾರ ಪಟ್ಟಣಶಟ್ಟಿ
ಸವದತ್ತಿಯ ಈರಣ್ಣ ಪಟ್ಟಣಶೆಟ್ಟಿಯವರು ವರ್ತಕರು. ಹಾಗೆಯೇ ರಾಜಕಾರಣದಲ್ಲಿ ಆಸಕ್ತಿ ಉಳ್ಳವರು. ಸವದತ್ತಿ ತಾಲ್ಲೂಕಿನ ಜಾತ್ಯಾತೀತ ಜನತಾದಳದ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ.ಅದೃಷ್ಟ ಇವರ ಪಾಲಿಗೆ ಇರಲಿಲ್ಲ ಎನಿಸುತ್ತದೆ ಇದ್ದಿದ್ದರೆ ಎಂದೋ ಸವದತ್ತಿಯ ಶಾಸಕರಾಗಿ ಆಯ್ಕೆಯಾಗುವಂಥ ವ್ಯಕ್ತಿತ್ವವುಳ್ಳ ಈರಣ್ಣ ಪಟ್ಟಣಶೆಟ್ಟಿಯವರು ಸಾಮಾಜಿಕ ಮತ್ತು ಸಾಂಸ್ಕೃತಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿವಹಿಸಿ ಸೇವೆಯನ್ನು ಸಲ್ಲಿಸುತ್ತಿದ್ದ ಹೃದಯವಂತರು.
ಈರಣ್ಣ ಪಟ್ಟಣಶೆಟ್ಟಿಯವರು ನನ್ನ ಮೇಲೆ ಅತೀವ ಅಭಿಮಾನ ಮತ್ತು ಪ್ರೀತಿ ಯನ್ನು ಹೊಂದಿದ್ದರು. ಅವರ ಪ್ರೀತಿಯನ್ನು ನಾನೆಂದೂ ಮರೆಯಲು ಸಾಧ್ಯವಿಲ್ಲ.ಇವರ ಚಿರಂಜೀವಿಯೇ ನಮ್ಮ ಇಂದಿನ ಹೀರೋ ಶಶಿಕುಮಾರ ಈರಣ್ಣ ಪಟ್ಟಣಶೆಟ್ಟಿ.
ಹಾಸ್ಪಿಟಲ್ ಮ್ಯಾನೇಜ್ ಮೆಂಟ್ ನಲ್ಲಿ ಎಂ.ಬಿ.ಎ ಪದವಿ ಪಡೆದಿರುವ ಇವರು ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರು, ಬೆಳಗಾವಿಯ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಸೇವೆಯನ್ನು ಸಲ್ಲಿಸಿ ಅನುಭವವನ್ನು ಪಡೆದಿದ್ದಾರೆ.ಕಳೆದ 8 ವರ್ಷಗಳಿಂದ ಬೆಂಗಳೂರಿನ ನಾರಾಯಣ ಹೃದಯಾಲಯದ ಅಂಗಸಂಸ್ಥೆಯಾಗಿರುವ ಧಾರವಾಡದ ಎಸ್. ಡಿ.ಎಂ ಆಸ್ಪತ್ರೆಯಲ್ಲಿರುವ “ನಾರಾಯಣ ಹಾರ್ಟ್ ಸೆಂಟರ್” ನ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
ನನಗೆ ವೈಯಕ್ತಿಕವಾಗಿ ಕಳೆದ ಹದಿನೈದು ವರ್ಷಗಳಿಂದ ನಿಕಟ ಪರಿಚಯ.ನಮ್ಮ ಕೊಪ್ಪಳ ಭಾಗದ ಯಾವುದೇ ಪೇಶೆಂಟ್ ಗಳು ಧಾರವಾಡದ ಎಸ್.ಡಿ.ಎಂ. ಆಸ್ಪತ್ರೆಗೆ ದಾಖಲಾದರೆ ನಾನು ಮಾಡುವ ಮೊದಲನೆಯ ಫೋನು ಶಶಿಗೆ.ನಮ್ಮವರು ಇಂತಹ ಚಿಕಿತ್ಸೆಗಾಗಿ ತಮ್ಮಲ್ಲಿ ದಾಖಲಾಗಿದ್ದಾರೆ.ದಯವಿಟ್ಟು ತಾವು ಗಮನಿಸಬೇಕು ಕಾಳಜಿವಹಿಸಬೇಕು ಎಂದು ತಿಳಿಸಿದರೆ ಸಾಕು ಆ ಪೇಷೆಂಟ್ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವವರೆಗೂ ಅವರ ಪ್ರತಿದಿನದ ರಿಪೋರ್ಟ್ ಗಳನ್ನು ನನಗೆ ತಿಳಿಸುವ ಸಹೃದಯಿ.
ಧಾರವಾಡದ ಎಸ್. ಡಿ.ಎಂ.ನಾರಾಯಣ ಹಾರ್ಟ್ ಸೆಂಟರ್ ನ ವ್ಯವಸ್ಥಾಪಕ ನಿರ್ದೇಶಕರು ಇವರಾದರೂ ಇಡೀ ಎಸ್. ಡಿ.ಎಂ ಆಸ್ಪತ್ರೆಯಲ್ಲಿ ಇವರ ಮಾತು ನಡೆಯುತ್ತದೆ.ಅಲ್ಲಿರುವ ಎಲ್ಲ ಪ್ರತಿಷ್ಠಿತ ಡಾಕ್ಟರ್ ಗಳು ಶಶಿಯನ್ನು ಅತ್ಯಂತ ಆತ್ಮೀಯತೆಯಿಂದ, ಪ್ರೀತಿಯಿಂದ ಮಾತನಾಡಿಸುತ್ತಾರೆ,ಗೌರವಿಸುತ್ತಾರೆ ಹಾಗೆಯೇ ಇಂತಹ ಪೇಶೆಂಟ್ ತಮ್ಮ ನಿಗಾದಲ್ಲಿದೆ, ತಾವೇ ನೋಡಿದ್ದೀರಿ ದಯವಿಟ್ಟು ಅವರ ಆರೋಗ್ಯದ ಪ್ರಗತಿಯ ಬಗ್ಗೆ ಕಾಳಜಿ ವಹಿಸಿ ಎಂದು ಹೇಳಿದರೆ ಸಾಕು ಅವರು ನಿರಾಕರಿಸಲು ಸಾಧ್ಯವೇ ಇಲ್ಲ, ಅಂತಹ ವ್ಯಕ್ತಿತ್ವವನ್ನು ಶಶಿ ಪಟ್ಟಣಶೆಟ್ಟಿ ಇಡೀ ಎಸ್. ಡಿ.ಎಂ. ಆಸ್ಪತ್ರೆಯಲ್ಲಿ ಬೆಳೆಸಿಕೊಂಡಿದ್ದಾರೆ.
ವಿಶೇಷವಾಗಿ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳಿಗೆ ಪೇಶೆಂಟ್ ಗಳು ಅಲ್ಲಿ ದಾಖಲಾಗಿದ್ದರೆ ಸ್ವತಃ ಶಶಿಯವರೇ ಅಲ್ಲಿಗೆ ಹೋಗಿ ಮಾತನಾಡಿಸಿ ಅವರ ಸಂಬಂಧಿಕರ ಬಳಿ ಅವರ ಆರ್ಥಿಕ ಸ್ಥಿತಿ ಗತಿಗಳನ್ನು ವಿಚಾರಿಸಿ.ಸರಕಾರಿ ನೌಕರರಾಗಿದ್ದರೆ, ಬಿ.ಪಿ.ಎಲ್, ಯಶಸ್ವಿನಿ ಮುಂತಾದ ಸರಕಾರದ ಆರೋಗ್ಯ ಸೇವೆಯ ಸೌಲಭ್ಯಗಳ ಕಾರ್ಡುಗಳು ಇದ್ದರೆ ಅವುಗಳನ್ನು ತೆಗೆದುಕೊಂಡು ಅವರಿಂದ ಬೇಕಾದ ದಾಖಲೆ ಪತ್ರಗಳನ್ನು ತರಿಸಿಕೊಂಡು ಸ್ವತಃ ಆನ್ ಲೈನ್ ನಲ್ಲಿ ಅಪ್ ಲೋಡ್ ಮಾಡಿಸಿ,ಸಂಬಂಧಪಟ್ಟ ಇಲಾಖೆಯಿಂದ ಸ್ಯಾಂಕ್ಷನ್ ಮಾಡಿಸಿ ಪೇಶೆಂಟ್ ಗಳ ಶಸ್ತ್ರಚಿಕಿತ್ಸೆಯನ್ನು ಮಾಡಿಸುವವರೇಗೂ ಕಾಳಜಿಯನ್ನು ತೆಗೆದುಕೊಳ್ಳುವ ಗುಣ ಶಶಿ ಪಟ್ಟಣಶೆಟ್ಟಿಯವರದು.
ಯಾವುದೇ ಸರಕಾರಿ ಸೌಲಭ್ಯದ ಕಾರ್ಡ್ ಗಳು ಇರದಿದ್ದರೂ ಕಡಿಮೆ ಖರ್ಚಿನಲ್ಲಿ ಚಿಕಿತ್ಸೆಯನ್ನು ತಮ್ಮ ಪ್ರಭಾವವನ್ನು ಬೀರಿ ಮಾಡಿಸಿ ಕಳಿಸಿರುವ ಎಷ್ಟೋ ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಇವರ ಹೃದಯವಂತಿಕೆಯ ಗುಣವನ್ನು ನಾನೇ ಸ್ವತಃ ಅನುಭವಿಸಿದ್ದೇನೆ. ನಾನೇ ಒಮ್ಮೆ ಅದೇ ಆಸ್ಪತ್ರೆಯಲ್ಲಿ ದಾಖಲಾದಾಗ ನಾನು ಗುಣಮುಖನಾಗಿ ಬಿಡುಗಡೆಯಾಗುವವರೆಗೂ ಬೆಳಿಗ್ಗೆ ಸಾಯಂಕಾಲ ಬಂದು ಮಾತನಾಡಿಸಿ ಯಾವ ವೈದ್ಯರಿಗೆ ಏನನ್ನು ಹೇಳಬೇಕು ಹೇಳಿ ಗುಣಮುಖನಾಗಿ ಬಿಡುಗಡೆಯಾಗುವಂತೆ ನೋಡಿಕೊಂಡಿದ್ದಾರೆ. ನಮ್ಮ ತಂಗಿಯ ಗಂಡ ಶಿವಯೋಗಿ ಹಾವಿನಾಳ ಹೃದಯ ಚಿಕಿತ್ಸೆಗಾಗಿ ಹೋದಾಗ ಮತ್ತು ನನ್ನ ಅನೇಕ ಸಂಬಂಧಿಕರಿಗೂ ಇದೇ ಸೇವೆಯನ್ನು ಒದಗಿಸಿದ್ದಾರೆ.ಒಂದು ನಯಾ ಪೈಸೆ ಪ್ರತಿಫಲಾಪೇಕ್ಷೆಯನ್ನು ಬಯಸುವವರಲ್ಲ. ಈ ಕಾರಣಕ್ಕಾಗಿ ಶಶಿಕುಮಾರ್ ಈರಣ್ಣ ಪಟ್ಟಣಶೆಟ್ಟಿ ನಮ್ಮ ಇಂದಿನ ಹೀರೋ.ನಮ್ಮ ಪೇಷೆಂಟುಗಳು ಅಲ್ಲಿದ್ದಾಗ ಶಶಿ ಪಟ್ಟಣಶೆಟ್ಟಿಯವರಿಗೆ ನೂರಾರು ಸಲ ಫೋನ್ ಮಾಡಿ ಪೇಶೆಂಟ್ ಗಳ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ವಿಚಾರಿಸಿದಾಗ ಬೇಸರಿಸದೆ ಹಸನ್ಮುಖದಿಂದ ಉತ್ತರಿಸುವದನ್ನು ನೋಡಿದರೆ ಈ ಸಂಸ್ಕಾರ ಶಶಿಕುಮಾರ ಪಟ್ಟಣಶೆಟ್ಟಿ ಅವರಿಗೆ ಎಲ್ಲಿಂದ ಬಂತು ? ಎಂದು ಆಶ್ಚರ್ಯವೆನಿಸುತ್ತದೆ.”ತಾಯಿಯಂತೆ ಮಗಳು”, ” ನೂಲಿನಂತೆ ಸೀರೆ.” ಎನ್ನುವ ಹಾಗೆ ಇವರ ತಂದೆ ಈರಣ್ಣ ಪಟ್ಟಣಶೆಟ್ಟಿ ಅವರ ಸೇವೆ-ಸಹಕಾರ ಹೃದಯವಂತಿಕೆ ಗುಣಗಳು ಶಶಿಕುಮಾರ ಪಟ್ಟಣಶೆಟ್ಟಿಯವರಲ್ಲಿ ಅವಿರ್ಭವಿಸಿವೆ ಎನಿಸುತ್ತದೆ.ಬಡ ರೋಗಿಗಳ ಸೇವೆಯನ್ನು ಮಾಡುವ ಸಾಮರ್ಥ್ಯ ಮತ್ತು ತಾಕತ್ತನ್ನು ಮಹಾತ್ಮ ಬಸವೇಶ್ವರ ಇವರಿಗೆ ನೀಡಲಿ ಎಂದು ಹಾರೈಸುತ್ತೇನೆ.ಯಾರಿಗಾದರೂ ಇವರ ಸೇವೆಯ ಅವಶ್ಯಕತೆ ಇದ್ದರೆ ಇವರ ನಂಬರ 9972409999 ಇಲ್ಲಿದೆ ಸದುಪಯೋಗಪಡಿಸಿಕೊಳ್ಳಿ. ಆದರೆ ದಯವಿಟ್ಟು ದುರುಪಯೋಗ ಪಡಿಸಿಕೊಳ್ಳಬೇಡಿ. ನಮ್ಮವರನ್ನು ನಾವು ಬೆನ್ನು ತಟ್ಟಿ ಪ್ರೋತ್ಸಾಹಿಸದಿದ್ದರೆ, ಇನ್ನಾರು ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ ? ಸಾಧ್ಯವಾದರೆ ಒಂದ್ ಕಾಲ್ ಮಾಡಿ ಅವರಿಗೆ ಮೆಚ್ಚುಗೆಯನ್ನು ಸೂಚಿಸಿ. ಶಶಿ ನಿನ್ನ ಸೇವಾ ಕಾರ್ಯಗಳು ಮುಂದುವರಿಯಲಿ…
–ಗವಿಸಿದ್ದಪ್ಪ ವೀ.ಕೊಪ್ಪಳ
—————————————————————————ಕ್ಣಣ ಕ್ಷಣದ ಸುದ್ದಿಯನ್ನು
ತಾವು ವೀಕ್ಷಿಸಲು
*e-ಸುದ್ದಿ ಅಂತರಜಾಲ ಪತ್ರಿಕೆ ನೋಡಿ.*
ಪ್ರತಿದಿನದ ಮತ್ತು ಯಾವ ದಿನಾಂಕದ ಪತ್ರಿಕೆ ನೊಡಬಯಸಿವಿರೊ ಆ ದಿನದ ಸುದ್ದಿ ಓದಬಹುದು.
ಅದಕ್ಕಾಗಿ
ನಿವು ಮಾಡಬೆಕಾಗಿರೊದು
*ಬೆಲ್ ಬಟನ್ ಒತ್ತಿ ಸಬ್ ಸ್ಕ್ರೈವ್ ಆಗಿ ಮತ್ತು ನಮ್ಮವಾಟ್ಸಪ್ ಗ್ರೂಪಗೆಸೇರಲುಬಯಸಿದರೆವಾಟ್ಸ್ ಪ್ ಸಿಂಬಲ್ ಮೆಲೆ ಕ್ಲಿಕ್ ಮಾಡಿ*
🙏🙏🙏🙏🙏🙏