e-ಸುದ್ದಿ, ಮಸ್ಕಿ
ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಮಸ್ಕಿ ತಾಲೂಕು ಅಧ್ಯಕ್ಷರಾಗಿ ವರ್ತಕ ಉಮಾಕಾಂತಪ್ಪ ಸಂಗನಾಳ ಆಯ್ಕೆಯಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಬಣಜಿಗ ಸಮಾಜದ ರಾಜ್ಯ ಅಧ್ಯಕ್ಷ ಡಾ.ಶಿವಬಸಪ್ಪ ಹೆಸರೂರು ಪ್ರಕಟಿಸಿದರು.
ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಮಂಗಳವಾರ ಸಂಜೆ ನಡೆದ ಸಮಾಜದ ಸಭೆಯಲ್ಲಿ ಭಾಗವಹಿಸಿದ್ದ ಡಾ.ಶಿವಬಸಪ್ಪ ಹೆಸರೂರು ಮಾತನಾಡಿ ಮಸ್ಕಿ ಹೊಸ ತಾಲೂಕು ಘೋಷಣೆಯಾದ ಮೇಲೆ ಮೊದಲ ಬಾರಿಗೆ ಮಸ್ಕಿ ತಾಲೂಕು ಸಂಘವನ್ನು ರಚಿಸುತ್ತಿದ್ದು ಸಮಾಜ ಬಾಂಧವರು ಸಹಕರಿಸಿ ಸಮಾಜದ ಅಭಿವೃದ್ದಿಗೆ ಶ್ರಮಿಸಬೇಕೆಂದು ತಿಳಿಸಿದರು.
ಕರ್ನಾಟಕ ರಾಜ್ಯ ಬಣಜಿಗ ಕ್ಷೇಮಾಭಿವೃದ್ದಿ ಸಂಘದ ಮಾಜಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಂದಾನಪ್ಪ ಗುಂಡಳ್ಳಿ ಮಾತನಾಡಿ ಮಸ್ಕಿ ತಾಲೂಕಿನಲ್ಲಿ ಸಮಾಜವನ್ನು ಬಲಿಷ್ಠ ಸಂಘಟನೆ ಮಾಡುವುದಕ್ಕಾಗಿ ಸಮಾಜದವರನ್ನು ಒಗ್ಗೂಡಿಸಬೇಕು. 5 ಜಿ,ಪಂ.ಕ್ಷೇತ್ರಗಳಿಗೆ ಉಪಾಧ್ಯಕ್ಷರು, ಕಾರ್ಯದರ್ಶಿ ನೇಮಿಸಿಕೊಂಡು ಸಮಾಜವನ್ನು ಸಧೃಡಗೊಳಿಸಬೇಕು ಎಂದರು.
ಮಸ್ಕಿ ನಗರ ಘಟಕದ ಅಧ್ಯಕ್ಷ ಶಶಿಕಾಂತ ಬ್ಯಾಳಿ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷೆಸುವರ್ಣ ಬ್ಯಾಳಿ, ಯುವ ಘಟಕದ ಅಧ್ಯಕ್ಷ ನಾಗರಾಜ ಯಂಬಲದ ಇದ್ದರು.
ಪದಾಧಿಕಾರಿಗಳು ಃ ಉಮಾಕಾಂತಪ್ಪ ಸಂಗನಾಳ ಅಧ್ಯಕ್ಷ, ನಾಗರಾಜ ಉಪಲದೊಡ್ಡಿ, ಬಸವರಾಜ ಗುಂಡಳ್ಳಿ ಮೆದಕಿನಾಳ ಉಪಾಧ್ಯಕ್ಷರು, ವೀರೇಶ ತಾಳಿಕೊಟಿ ಬಳಗಾನೂರು, ಗವಿಸಿದ್ದಪ್ಪ ಸಾಹುಕಾರ ಸಂತೆಕೆಲ್ಲೂರು ಕಾರ್ಯದರ್ಶಿಗಳಾಗಿ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷ ಉಮಾಕಾಂತಪ್ಪ ಸಂಗಾನಳ ಇಷ್ಟರಲ್ಲಿ ಸಭೆ ಸೇರಿ ಉಳಿದ ಪದಾಧಿಕಾರಿಗಳನ್ನು ನೇಮಿಸುವುದಾಗಿ ತಿಳಿಸಿದ್ದಾರೆ.