ಕಾಯಕ ಕಟ್ಟೆ ಮಹಿಳಾ ಉದ್ದಿಮೆದಾರರು : ಯುಗಾದಿ ನಿಮಿತ್ಯ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ

ಕಾಯಕ ಕಟ್ಟೆ ಮಹಿಳಾ ಉದ್ದಿಮೆದಾರರು : ಯುಗಾದಿ ನಿಮಿತ್ಯ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ

e-ಸುದ್ದಿ ಬೆಳಗಾವಿ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಬೆಳಗಾವಿ ಸಹಯೋಗದಲ್ಲಿ ಕಾಯಕ ಕಟ್ಟೆಮಹಿಳಾ ಉದ್ದಿಮೆದಾರರ ಬಳಗದವರು ನೂತನ ವರ್ಷದ ಮೊದಲ ಹಬ್ಬ ಯುಗಾದಿ ನಿಮಿತ್ಯ ವಸ್ತುಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಿದ್ದರು.

ಮಹಿಳೆಯ ಹಸ್ತಕೌಶಲ್ಯದಿಂದ ತಯಾರಾದ ಎಲ್ಲಾ ವಸ್ತುಗಳನ್ನು ಇಲ್ಲಿ ಮಾರಾಟ ಮಾಡಲಾಯಿತು. ಮೇಳಕ್ಕೆ ಭೇಟಿ ನೀಡಿದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತು.ಬಳಗದ ಎಲ್ಲಾ ಉದ್ದಿಮೆದಾರರ ವಸ್ತುಗಳು ಯೋಗ್ಯ ಬೆಲೆಗೆ ಮಾರಾಟವಾದವು.

ವಿಶೇಷವಾಗಿ ಯುಗಾದಿ ಹಬ್ಬಕ್ಕೆ ಬಳಕೆಯಾಗುವ ಎಲ್ಲಾ ವಸ್ತುಗಳು ಮಾರಾಟಕ್ಕೆ ಲಭ್ಯವಿದ್ದವು.ಈ ಮೇಳದ ಯಶಸ್ಸಿಗಾಗಿ ಶ್ರಮಿಸಿದ ಕಾಯಕ ಕಟ್ಟೆ ಸಂಸ್ಥಾಪಕರು ಹಾಗೂ ಪ್ರಧಾನ ಕಾರ್ಯನಿರ್ವಾಹಕರಾದ ಶ್ರೀಮತಿ ಆಶಾ ಎಸ್ ಯಮಕನಮರಡಿ,  ಸಹ ನಿರ್ವಾಹಕರಾದ ಶ್ರೀಮತಿ ಶೈಲಾ ಸಂಸುಧ್ಧಿ,  ಶ್ರೀಮತಿ ಸುಧಾ ಪಾಟೀಲ್,  ಶ್ರೀಮತಿ ವಿದ್ಯಾ ಸವದಿ ಹಾಗೂ ವಿಶೇಷವಾಗಿ ನಮ್ಮೇಲ್ಲ ಕಾರ್ಯಗಳಿಗೆ ಸದಾ ಬೆಂಬಲವಾಗಿ ನಿಂತ ಶ್ರೀಮತಿ ರತ್ನಪ್ರಭಾ ಬೆಲ್ಲದ (ಅಧ್ಯಕ್ಷರು ಅ ವೀ ಲಿಂ ಮಹಾಸಭೆ ಬೆಳಗಾವಿ)ಅವರು ಕೂಡಾ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಸಹಕರಿಸಿದರು.

ಈ ಮೇಳಕ್ಕೆ ಬಂದು ಎಲ್ಲಾ ಉದ್ದಿಮೆದಾರರ ವಸ್ತುಗಳನ್ನು ಖರೀದಿಸಿ ಪ್ರೋತ್ಸಾಹಿಸಿದ ಆತ್ಮೀಯ ಗ್ರಾಹಕ ಸಹೋದರಿಯರಿಗೆ ನಮ್ಮೇಲ್ಲ ಬಳಗದ ವತಿಯಿಂದ ಧನ್ಯವಾದಗಳು.

Don`t copy text!