ಮಸೀದಿ, ಮಂದಿರ, ಚರ್ಚ
(ಚಿತ್ರ ಕೃಪೆ -ಹಾದಿಮನಿ ಟಿ.ಎಫ್)
ಒಂದು ಪಾರಿವಾಳದ ಗುಂಪು ಮಸೀದಿ ಮೇಲೆ ಗೂಡು ಕಟ್ಟಿಕೊಂಡು ವಾಸವಾಗಿದ್ದವು.
ರಂಜಾನ್ ಬಂತು ಮಸೀದಿಗೆ ಸುಣ್ಣಬಣ್ಣ ಬಳಿಯಲು ಎಲ್ಲಾ ಸ್ವಚ್ಛಗೊಳಿಸತೊಡಗಿದರು.
ಆಗ ಆ ಪಾರಿವಾಳಗಳು ಅಲ್ಲಿಂದ ಹಿಂದೂ ದೇವಾಲಯಕ್ಕೆ ಹೋಗಿ ವಾಸವಾದವು…
ಕೆಲದಿನಗಳಲ್ಲಿ ದಸರಾ ಹಬ್ಬ ಬಂತು. ಅಲ್ಲಿಂದ ಪಾರಿವಾಳಗಳು ಹಾರಿ ಚರ್ಚ್ ಮೇಲೆ ನೆಲೆಸಿದವು. ಕ್ರಿಸ್ ಮಸ್ ವೇಳೆಗೆ ಮತ್ತೆ ಮಸೀದಿಗೆ ನೆಲೆ ಬದಲಾಯಿಸಿದವು…
ಒಂದು ದಿನ ಮಸೀದಿ ಮುಂದೆ ಕೋಮು ಗಲಭೆ ನಡೆಯಿತು. ಆಗ ಅದನ್ನು ನೋಡಿದ ಮರಿ ಪಾರಿವಾಳ ತಾಯಿ ಪಾರಿವಾಳವನ್ನು ಕೇಳಿತು…
ಯಾರು ಅವರು ಬಡಿದಾಡಿಕೊಳ್ಳುತ್ತಿರುವುದು..?
ತಾಯಿ ಪಾರಿವಾಳ ಹೇಳಿತು…
ಅವರು ಮನುಷ್ಯರು ಮಗು…
ಯಾಕೆ ಅವರು ಜಗಳವಾಡುತ್ತಿದ್ದಾರೆ…?
ಮಸೀದಿಗೆ ಹೋಗುವವರು ಮುಸ್ಲಿಮರಂತೆ…
ಗುಡಿಗೆ ಹೋಗುವವರು ಹಿಂದುಗಳಂತೆ…
ಚರ್ಚ್ ಗೆ ಹೋಗುವವರು ಕ್ರೈಸ್ತರಂತೆ…
ಇದು ಅವರೊಳಗಿನ ಮತ ಮತಗಳ ಸಂಘರ್ಷಣೆ.
ಮರಿ ಪಾರಿವಾಳಕ್ಕೆ ಆಶ್ಚರ್ಯವಾಯಿತು.!
ನಾವು ಕೂಡ ಮಸೀದಿ ಮೇಲೆ ವಾಸಿಸುತ್ತೆವೆ…
ಗುಡಿಗಳ ಮೇಲೆ ವಾಸಿಸುತ್ತೆವೆ……..
ಚರ್ಚ್ ಮೇಲೆ ವಾಸಿಸುತ್ತೆವೆ…..!
ನಾವು ಎಲ್ಲಿಗೆ ಹೋದರೂ ಕೂಡ ಪಾರಿವಾಳಗಳೇ ಆಗಿದ್ದೇವೆ, ಆದರೆ ಈ ಮನುಷ್ಯರು ಯಾಕೆ ಹೀಗೆ….?
ಅವರು ಮನುಷ್ಯರು ಎಲ್ಲಿಗೆ ಹೋದರೂ ಮನುಷ್ಯರೇ ಅಲ್ಲವೇ…?
ತಾಯಿ ಪಾರಿವಾಳ ನಕ್ಕು ಹೇಳಿತು…
ಮಗು ನಾವು ಅವರಿಗಿಂತ ಎತ್ತರದಲ್ಲಿದ್ದೇವೆ. ವಿಶಾಲವಾದ ಪ್ರಪಂಚದಲ್ಲಿ ಜೀವಿಸುತ್ತಿದೆವೆ. ನಮ್ಮದು ನಿಷ್ಕಲ್ಮಶ ಸ್ವೇಚ್ಛಾ ಜಗತ್ತು. ಎಲ್ಲಾ ಜೀವಿಗಳಲ್ಲಿ ಮೇಧಾವಿಯಾದ ಮಾನವ ಕಣ್ಣಿಗೆ ಕಾಣದ ಅಮಾನವೀಯ ಕುಲ ಮತ ಜಾತಿ ಲಿಂಗ ವರ್ಗ ಎಂಬ ಗೋಡೆಯನ್ನು ನಿರ್ಮಿಸಿಕೊಂಡಿದ್ದಾನೆ…