ನೆನೆದು ಲಿಂಗ ಕರಿ ಗೆಟ್ಟಿತ್ತು

ನೆನೆದು ಲಿಂಗ ಕರಿ ಗೆಟ್ಟಿತ್ತು

ಅನುದಿನದಲ್ಲಿ ಮಜ್ಜನಕ್ಕೆರೆದು
ನೆನೆದು ಲಿಂಗ ಕರಿಗಟ್ಟಿತ್ತು
ನೀರನೊಲ್ಲದು ಬೋನವ ಬೇಡದು
ಕರೆದಡೆ ಓ ಎನ್ನದು ಸ್ಥಾವರ ಪೂಜೆ
ಜಂಗಮದ ಉದಾಸೀನ ಕೂಡಲಸಂಗಯ್ಯನೊಲ್ಲ ನೋಡಾ
– ಬಸವಣ್ಣ

ಅನುದಿನದಲ್ಲಿ ಮಜ್ಜನಕ್ಕೆರೆದು ನೆನೆದು ಲಿಂಗ ಕರಿಗಟ್ಟಿತ್ತು

ಲಿಂಗ ಇದು ಆಚಾರದ ಸಂಕೇತ
ಲಿಂಗ ಸಮಷ್ಟಿ ಭಾವ .
ಲಿಂಗ ಪರಿಪೂರ್ಣ ಅರಿವು ಮೂಡಿಸುವ ಕುರುಹು.
ಲಿಂಗ ಅನುಸಂಧಾನದ ಸಾಧನ.
ಲಿಂಗ ಕಾಯ ಗುಣ ನಿರಾಕರದ ಪ್ರತೀಕ .ಲಿಂಗ ಕಾಣಬಾರದ ವಸ್ತು. ಲಿಂಗ ಅಂತರಂಗದ ಬೆಳಕು ಎಂಬ ಆಶಯದ ಹಿನ್ನೆಲೆಯಲ್ಲಿ ಲಿಂಗ ಜ್ಞಾನ ಪಡೆಯಬೇಕು.
ಲಿಂಗ ಕೇವಲ ಉಪಾದಿತ ವಸ್ತು ಮಾಡಿ ಅದಕ್ಕೂ ನೀರು ಹಾಕಿ ಗಂಧ ವಿಭೂತಿ ಅಕ್ಷತೆ ಹಾಕಿ ಹೂವು ಏರಿಸಿ ಪೂಜೆ ಮಾಡಿ ಉನ್ಮಾದ ಉತ್ಸಾಹದಲ್ಲಿರುವ ಭಕ್ತರನ್ನು ಎಚ್ಚರಿಸುವ ಕೆಲಸ ಬಸವಣ್ಣನವರು ಮಾಡಿದ್ದಾರೆ.
ಲಿಂಗವನರಿಯದೆ ಏನನ್ನೂ ಅರಿದರೂ ಫಲವಿಲ್ಲ
ಲಿಂಗವನರಿತ ಬಳಿಕ ಮತ್ತಿನ್ನೇನು ಆರಿದರೂ ಫಲವಿಲ್ಲ.
ಈ ಹಿನ್ನೆಲೆಯಲ್ಲಿ ಲಿಂಗ ಜ್ಞಾನ ಬಾಹ್ಯ ಆಚರಣೆಗೆ ಸೀಮಿತಗೊಳಿಸುವ ಕಾರ್ಯಕ್ಕೆ ಅಂದೆ ಬಸವಣ್ಣ ವಿರೋಧಿಸಿದ್ದಾರೆ.

ಅನುದಿನದಲ್ಲಿ ಮಜ್ಜನಕ್ಕೆರೆದು
ನೆನೆದು ಲಿಂಗ ಕರಿಗಟ್ಟಿತ್ತು
ನಿತ್ಯ ನಿತ್ಯ ಬೆಳಿಗ್ಗೆ ಎದ್ದು ಸ್ನಾನ ಮಾಡಿ ಲಿಂಗಕ್ಕೂ ಮಜ್ಜನ ಎರೆದು ನೀರು ಹಾಕಿದರೆ ಅದು
ಭೌತಿಕ ಪೂಜೆ ಮಾಡಿದ ಹಾಗೆ.
ಹಾಗಾದಲ್ಲಿ ಲಿಂಗ ತನ್ನ ಕಳೆಯನ್ನು ಕಳೆದುಕೊಂಡು ವಿಕಾರಗೊಳ್ಳುತ್ತದೆ.

ಕರೆದಡೆ ಓ ಎನ್ನದು ಸ್ಥಾವರ ಪೂಜೆ
ಲಿಂಗವನ್ನು ದೇವರೆಂದು ನಂಬಿ ಮಂತ್ರ ಪಠಣ ಪ್ರಾರ್ಥನೆ ಮಾಡುತ್ತ ಕಾಲ ಕಳೆದರೆ ಅದನ್ನು ಕೇಳದ ಲಿಂಗ ಕಿವುಡು.
ಇಷ್ಟ ಲಿಂಗವನ್ನು ದೇವರೆಂದು ನಂಬಿ ಕರೆದೊಡೆ ಓ ಎನ್ನದ ಸ್ಥಾವರ.
ಒಂದು ಅರ್ಥದಲ್ಲಿ 8ಸ್ತ ಲಿಂಗವನ್ನು ಬಸವಣ್ಣ ಸ್ಥಾವರ ಎಂದಿದ್ದಾರೆ

ಜಂಗಮದ ಉದಾಸೀನ ಕೂಡಲಸಂಗಯ್ಯನೊಲ್ಲ ನೋಡಾ

ಜಂಗಮ ಚಲನ ಶೀಲತೆ
ಜಂಗಮ ಜೀವ ಜಾಲ.
ಜಂಗಮ ಜ್ಞಾನ ಕ್ರಿಯೆಗಳ ಸಮನ್ವಯ .
ಜಂಗಮ ಸಮಾಜ ಎಂಬ ಅರ್ಥದಲ್ಲಿ ಮರದ ಬಾಯಿ ಬೇರೆಂದು ಬುಡಕ್ಕೆ ನೀರೆರೆದರು ಮೇಲೆ ಪಲ್ಲವಿಸಿತ್ತು ನೋಡಾ .
ಎಂದಿದ್ದಾರೆ. ಲಿಂಗ ಪೂಜೆಯಲ್ಲಿ ತಲ್ಲೀನರಾಗಿ ಜಂಗಮ ವ್ಯವಸ್ಥೆಯನ್ನು ಉದಾಸೀನ ಮಾಡುವ ನಿರ್ಲಕ್ಷ ಮಾಡುವ ಭಕ್ತನನ್ನು ಕೂಡಲ ಸಂಗಮ ದೇವ ಒಪ್ಪುವುದಿಲ್ಲ .
ಇಲ್ಲಿ ಕೂಡಲ ಸಂಗಮ ದೇವ ಸಹಿತ ಸಮಾಜ.
ನಾಗರಿಕ ಜವಾಬ್ದಾರಿ ಹೊಂದಿದವನು ಎಂದರ್ಥ.
ಅಂತೆಯೇ ಬಸವಣ್ಣ ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದಿದ್ದಾರೆ.
ಸಮಯೋಚಿತ ಲಿಂಗ ಪೂಜೆ ಸಾಂದರ್ಭಿಕ ಜಂಗಮ ಸೇವೆ ಎಂತಲೂ
ಲಿಂಗ ಸಾಧಕರು ಭೂ ಭಾರಿಗಳಾದರು ಎಂದು ಚೆನ್ನ ಬಸವಣ್ಣ ಹೇಳಿದ್ದಾರೆ.
ಒಟ್ಟಾರೆ ಲಿಂಗ ಬಾಹ್ಯ ಆಚರಣೆಯ ವಸ್ತು ಅಲ್ಲ
ಅದು ಅಂತರಂಗದ ಅರಿವಿನ ಜ್ಯೋತಿ ಎಂಬುದು ಮೇಲಿನ ವಚನ ಅರ್ಥ

ಡಾ ಶಶಿಕಾಂತ ಪಟ್ಟಣ ರಾಮದುರ್ಗ

One thought on “ನೆನೆದು ಲಿಂಗ ಕರಿ ಗೆಟ್ಟಿತ್ತು

Comments are closed.

Don`t copy text!