ಲ್ಯಾಪ್ರೋಸ್ಕೋಪಿ
ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಾಶಯದ ನ್ಯೂನತೆಯನ್ನು ಸರಿಪಡಿಸಿದ ನಗರದ ಖ್ಯಾತ ವೈದ್ಯ ಶ್ರೀಕಾಂತ ಸಾಕಾ …..
e-ಸುದ್ದಿ ಇಳಕಲ್
14 ವರ್ಷದ ಹುಡುಗಿಯೊಬ್ಬಳು ಗರ್ಭಾಶಯದ ನ್ಯೂನ್ಯತೆಯ ಕಾಯಿಲೆಯಿಂದ ಬಳಲುತಿದ್ದು ಸುಮಾರು 1 ವರ್ಷದಿಂದಲೂ ಹಲವಾರು ಆಸ್ಪತ್ರೆಗಳಿಗೆ ಅಲೆದಾಡಿದರೂ ಪರಿಹಾರ ಸಿಗದೇ ಸಂಬಂದಿಗಳ ಸಲಹೆ ಮೇರೆಗೆ ಸಾಕಾ ಲ್ಯಾಪ್ರೋಸ್ಕೋಪ್ ಆಸ್ಪತ್ರೆಗೆ ಬಂದು ಸಂದರ್ಶನಕ್ಕೊಳಪಟ್ಟಾಗ ತಿಳಿದು ಬಂದಿದ್ದು ಈ ಬೈಕಾರ್ಮ್ಯುಯೇಟ್ ಸಮಸ್ಯೆ ಇದೆ ಎಂದು, ಇದು ಒಂದು ಅಪರೂಪದ ಸಮಸ್ಯೆಯಾಗಿದೆ.ಎಂದು ವೈದ್ಯರಾದ ಶ್ರೀಕಾಂತ ಸಾಕಾ ತಿಳಿಸಿದರು.
ಸಾಕಾ ಲ್ಯಾಪ್ರೋಸ್ಕೋಪಿ ಆಸ್ಪತ್ರೆಯಲ್ಲಿ ಈಗಾಗಲೆ ಎಷ್ಟೋ ಈ ತರಹದ ಸವಾಲಿನ ಅಪರೂಪದ ಕ್ಲಿಷ್ಟಕರವಾದ ಸಮಸ್ಯೆಗಳುಳ್ಳ ಶಸ್ತ್ರಚಿಕಿತ್ಸೆಗಳನ್ನು ಡಾ|| ಶ್ರೀಕಾಂತ ಸಾಕಾ ಅವರು ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಯ ಮುಖಾಂತರ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ.
ಅದೇ ರೀತಿ ಈ ಗರ್ಭಾಶಯದ ನ್ಯೂನತೆಯುಳ್ಳ ರೋಗಿಗೆ ಲ್ಯಾಪ್ರೋಸ್ಕೋಪಿ ಶಸ್ತ್ರಚಿಕಿತ್ಸೆಯ ಮೂಲಕ ಗರ್ಭಾಶಯವನ್ನು ಯಥಾ ಸ್ಥಿತಿಗೆ ಜೋಡಿಸಲಾಗಿದ್ದು ರೋಗಿಯು ಕೂಡ ಆರಾಮವಾಗಿದ್ದಾಳೆ ಎಂದು ತಿಳಿಸಿದ್ದಾರೆ.
ಈ ಶಸ್ತ್ರಚಿಕಿತ್ಸೆಗೆ ನೆರವಾದಂತಹ ಅರವಳಿಕೆ ತಜ್ಞರು ಡಾ|| ಶರಣು ಬೇವೂರ, ಡಾ|| ಆರತಿ ಸಾಕಾ, ಡಾ|| ಮಹಾಂತೇಶ .M, ಹಾಗೂ ಶಸ್ತ್ರಚಿಕಿತ್ಸಾ ಸಹಾಯಕರು ಸೋಮು ಕುಂಬಾರ, ಶಿವು ಕುಂಬಾರ, ಭಾಗಿರಥಿ, ಮತ್ತು ರುದ್ರಮ್ಮ ಹಾಗೂ ಸಿಬ್ಬಂದಿ ವರ್ಗಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿಗಾರರು: ಶರಣಗೌಡ ಕಂದಕೂರ