ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಡೆದು ಉತ್ತಮ ದಾರಿ ಕಂಡುಕೊಳ್ಳಬೇಕು; ಪ್ರೋ, ಬಿ.ಎಮ್. ವಾಲಿಕಾರ
e-ಸುದ್ದಿ ಇಲಕಲ್ಲ
ಶ್ರೀ ವಿಜಯ ಮಹಾಂತೇಶ ಕಲಾ ಹಾಗೂ ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಗುರು ಪೂರ್ಣಿಮಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ವಿಜಯ ಮಹಾಂತೇಶ ಪದವಿ ಪೂರ್ವ ಮಹಿಳಾ ಕಾಲೇಜಿನ ನಿವೃತ್ತ ಪ್ರಾಚಾರ್ಯರಾಗಿದ್ದ ಶ್ರೀ ಬಿ.ಎಮ್. ವಾಲಿಕಾರ ಇವರು ಆಗಮಿಸಿ ಶಿಕ್ಷಕರು ವಿದ್ಯಾರ್ಥಿಗಳ ಜೀವನದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಗುರುಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ನಡೆದು ಬದುಕುವ ಉತ್ತಮ ದಾರಿಯನ್ನು ಕಂಡುಕೊಳ್ಳಬೇಕೆಂದು ಕರೆ ನೀಡಿದರು. ಪಠ್ಯೇತರ ಚಟುವಟಿಕೆಯ ಸಂಚಾಲಕರಾದ ಪ್ರೊ. ಎಸ್. ಎಸ್. ಪಾಟೀಲ ಇವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಚೇರಮನ್‌ರಾದ ಶ್ರೀ ಬಿ.ಎಮ್. ಕಬ್ಬಿಣದ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಪ್ರೊ.ಬಿ.ಬಿ. ಸುಗ್ಗಮದ, ಒಕ್ಕೂಟದ ಸಂಚಾಲಕರಾದ ಶ್ರೀಮತಿ ಎಸ್.ಆರ್. ಕಲ್ಯಾಣಶೆಟ್ಟಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರಿ ಮಧು ಮಾದರ, ಶಶಿಕಲಾ ಪೂಜಾರ ಉಪಸ್ಥಿತರಿದ್ದರು. ಕುಮಾರಿ ತ್ರಿವೇಣಿ ಸಂಗಮ ವಂದಿಸಿದರು ಕುಮಾರಿ ಅನುರಾಧಾ ಜಂಬಲದಿನ್ನಿ ಕಾರ್ಯಕ್ರಮವನ್ನು ನಿರೂಪಿಸಿದರು
ವರದಿಗಾರರು: ಶರಣಗೌಡ ಕಂದಕೂರ