ವಿಶ್ವ ಸ್ನೇಹ ದಿನ 

ವಿಶ್ವ ಸ್ನೇಹ ದಿನ 

ಜುಲೈ 30 ನಮ್ಮ ಭಾರತದಲ್ಲಿ ಸ್ನೇಹದಿನ. ಆಗಸ್ಟ್‌ ತಿಂಗಳಿನ ಮೊದಲ ಆದಿತ್ಯವಾರ ಅಂದರೆ ಆಗಸ್ಟ್‌ 6

ಎಲ್ಲ ಬಂಧುಗಳಿಗೂ ವಿಶ್ವ ಸ್ನೇಹದಿನದ ಹಾರ್ದಿಕ ಶುಭಾಶಯಗಳು

ಸ್ನೇಹ ಗೆಳೆತನ ಈ ಪದಗಳನ್ನು ಕೇಳಿದರೆ ಏನೋ ಒಂದು ರೀತಿಯ ರೋಮಾಂಚನ. ಎಲ್ಲರಿಗೂ ಜೀವನದಲ್ಲಿ ಕನಿಷ್ಠ ಪಕ್ಷ ಒಬ್ಬರಾದರೂ ಸ್ನೇಹಿತರು ಇದ್ದೇ ಇರುತ್ತಾರೆ. ಕೆಲವರು ಹೀಗೆನ್ನ ಬಹುದು ಇದೇನು? ಸ್ನೇಹಿತರ ದಿನಾಚರಣೆ ಇದು ಪಾಶ್ಚಾತ್ಯ ಸಂಸ್ಕೃತಿಯ ಆಚರಣೆ ಎಂದು, ಒಂದು ಸಂಭ್ರಮಾಚರಣೆಗೆ ಯಾವ ದಿನ ಆದರನೇನು? ಈಗಿನ ಅವಿರತ ಶ್ರಮ ಜೀವನದ ದಿನಗಳಲ್ಲಿ ಒಂದೊಂದು ವಿಚಾರಕ್ಕೆ ಒಂದೊಂದು ದಿನಗಳನ್ನು ಆರಿಸಿಕೊಂಡು ಆದರ ಅಚರಣೆ ಮಾಡುತ್ತಾ ಜೊತೆಯಾಗಿರುವ ವಿಚಾರ ಇದು ಆಧುನಿಕ ವಿಚಾರ ಅಷ್ಟೆ ಹಿಂದೆಲ್ಲ ಸ್ನೇಹಕ್ಕೆ, ಪ್ರೀತಿ ವಿಶ್ವಾಸಕ್ಕೆ, ಅಣ್ಣ ತಂಗಿಯರಿಗೆ, ಅಪ್ಪ-ಅಮ್ಮಂದಿರಿಗೆ ಅಂತೆಲ್ಲ ದಿನಗಳು ಇದ್ದಿಲ್ಲ. ಆಗ ಸದಾ ಕಾಲ ಒಟ್ಟಿಗೆ ಇದ್ದು ಎಲ್ಲ ಸಂಭ್ರಮವನ್ನು ಆಚರಿಸಿ ಹಬ್ಬ ಹುಣ್ಣಿಮೆಗಳನ್ನು ಆಚರಿಸಲಾಗುತ್ತಿತ್ತು.

ಆದರೆ ಈಗ ಸಮಯದ ಅಭಾವದ ಕಾರಣ, ಬಿಡುವಿಲ್ಲದ ದುಡಿಮೆಯ ಕಾರಣದಿಂದ ಒಂದು ದಿನಗಳನ್ನು ನೆನಪಾಗಿಟ್ಟುಕೊಂಡು ಆಚರಣೆ ಮಾಡುವ ಪದ್ಧತಿ ಬೆಳೆದಿದೆ.

ಈ ಸ್ನೇಹದಿನವನ್ನು ಆಚರಿಸಲು ಆರಂಭಿಸಿದವರೂ ಯಾರೇ ಇರಲಿ ನಮ್ಮ ದೃಷ್ಟಿಗೆ ಕೃಷ್ಣ ಸುಧಾಮ, ಕೃಷ್ಣ ಅರ್ಜುನರದ್ದೂ ಪವಿತ್ರವಾದ ಸ್ನೇಹ ಮತ್ತು ಭಕ್ತಿ. ಮನುಜರಲ್ಲಿ ಭಕ್ತಿ ಮಾಡಲು ಸಾಧ್ಯವಿಲ್ಲದೇ ಇದ್ದರೂ ಸ್ನೇಹಕ್ಕೆ ಆದರ್ಶ ಭಗವಂತನೇ. ಇಂದು ವಿಶ್ವದಾದ್ಯಂತ ಈ ಸ್ನೇಹ ದಿನವನ್ನು ಆಚರಿಸುತ್ತಾರೆ. ನಾವು ಶ್ರೀ ಕೃಷ್ಣ ಪರಮಾತ್ಮ ಮತ್ತು ಸುಧಾಮ ಅಥವಾ ಕೃಷ್ಣ ಅರ್ಜುನರ ಕತೆಗಳಿಂದ ಕಲಿಯುವುದು ಬಹಳಷ್ಟಿದೆ. ಯಾವುದೇ ಫಲಾಪೇಕ್ಷೆ ಇಲ್ಲದೇ ಸ್ನೇಹವನ್ನು ನಿರ್ವಹಿಸುವುದನ್ನು ಕೃಷ್ಣನಿಂದ, ಸ್ನೇಹಿತರ ಸಂಬಂಧಿಕರ ಮನೆಗೆ ಹೋಗುವಾಗ ಬರೀ ಕೈಲಿ ಹೋಗಬಾರದೆಂದು ಸುಧಾಮನಿಂದ, ಬಂದ ಉಡುಗೊರೆಗಿಂತ ದುಪ್ಪಟ್ಟು ಕೊಡಬೇಕೆಂದು ಕೃಷ್ಣನಿಂದ, ಭಗವಂತನೇ ಸ್ನೇಹಿತನಾಗಿದ್ದಲ್ಲಿ ಯಾವುದೇ ಕಷ್ಟಗಳು ಬರುವುದಿಲ್ಲ ಬಂದರೂ ಸುಲಲಿತವಾಗಿ ಕರಗಿ ಹೋಗುತ್ತದೆ ಎಂಬುದನ್ನು ಕಾಣುತ್ತೇವೆ. ಲೌಕಿಕವಾಗಿ ಹೋದಲ್ಲಿ ಒಬ್ಬ ಉತ್ತಮ ಸ್ನೇಹಿತ/ಸ್ನೇಹಿತೆ ಪ್ರಪಂಚದಲ್ಲಿ ಎಲ್ಲ ಸಂಬಂಧಗಳಿಗಿಂತ ಹೆಚ್ಚಿನ ಪ್ರಮಾಣದ ನಿಸ್ವಾರ್ಥ ಸಂಬಂಧವಾಗಿದೆ ಎಂದು ಅರಿತು ಕೊಳ್ಳಬಹುದು.

ಸ್ನೇಹದಿಂದ ಇರೋಣ. ಎಲ್ಲರೊಂದಿಗೂ ಸ್ನೇಹ ಸಂಪಾದಿಸೋಣ. ಆನಂದವನ್ನು ಪಡೆಯೋಣ

ಮಾಧುರಿ

Don`t copy text!