ಹಿರೇ ಓತಗೇರಿ ಗ್ರಾಮಪಂಚಾಯತಿಯ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದ ಕಾಂಗ್ರೆಸ್…

 

ಹಿರೇ ಓತಗೇರಿ ಗ್ರಾಮಪಂಚಾಯತಿಯ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾದ ಕಾಂಗ್ರೆಸ್…

ವರದಿ:ಇಳಕಲ್

ಇಳಕಲ್ ತಾಲೂಕಿನ ಹಿರೇಓತಗೇರಿ ಗ್ರಾಮ ಪಂಚಾಯತಿ ಚುನಾವಣಾ ತೀವ್ರ ಕೂತೂಹಲಬರಿತವಾಗಿತ್ತು.
ಒಟ್ಟು 18 ಸದಸ್ಯರ ಬಲ ಹೊಂದಿರುವ ಹಿರೇ ಓತಗೇರಿ ಗ್ರಾಮ ಪಂಚಾಯತಿಯಲ್ಲಿ ಎರಡು ಕಡೆಯಿಂದ ನಾಮಪತ್ರ ಸಲ್ಲಿಸಿದರು.

ಅಂತಿಮವಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಗಳಾದ ರಾಮಚಂದ್ರಪ್ಪ ದುರಗಪ್ಪ ಮಾದರ ಅದ್ಯಕ್ಷರಾಗುವ ಮೂಲಕ ವಿಜಯ ಪತಾಕೆ ಹಾರಿಸಿದರು.
ಉಪಾದ್ಯಕ್ಷರಾಗಿ ಶಿವಮ್ಮ ಸಿದ್ದಪ್ಪ ಪೂಜಾರಿ ಆಯ್ಕೆಯಾದರು.

ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅದ್ಯಕ್ಷ,ಉಪಾದ್ಯಕ್ಷರಾದ ಕಾರಣ ಅವರ ಬೆಂಬಲಿಗರು ಸಂಭ್ರಮಿಸಿದರು.

ಚುನಾವಣಾಧಿಕಾರಿಯಾಗಿ ಸಂಜೀವ್ ಜುನ್ನೂರ ವ್ಯವಸ್ಥಿತವಾಗಿ ಚುನಾವಣಾ ಪ್ರಕ್ರಿಯೆ ನಡೆಸಿದರು.ಸಿಪಿಐ ಸುರೇಶ ಬೆಂಡೆಗುಂಬಳ,ಪಿಎಸ್ ಐ ಲಕ್ಷ್ಮೀಕಾಂತ ಬಾಣೆಗೋಳ ಬಿಗಿ ಪೋಲಿಸ್ ಬಂದೋಬಸ್ತ ನೀಡಿದ್ದರು.

ವರದಿಗಾರರು: ಶರಣಗೌಡ ಕಂದಕೂರ

Don`t copy text!