ತಾಲೂಕಿನಲ್ಲಿಯೇ ಜಿದ್ದಾಜಿದ್ದಿ ಕ್ಷೇತ್ರವಾಗಿದ್ದ ಹಿರೇ ಸಿಂಗನಗುತ್ತಿ ಗ್ರಾಮ ಪಂಚಾಯಿತಿ ಎಸ್ ಆರ್ ಎನ್ ತೆಕ್ಕೆಗೆ
e-ಸುದ್ದಿ ವರದಿ: ಇಳಕಲ್
ಇಳಕಲ್ ತಾಲೂಕಿನಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಹಿರೇ ಸಿಂಗನಗುತ್ತಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗಳು ನಿನ್ನೆ ಸುಸೂತ್ರವಾಗಿ ನಡೆದವು. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಅಧ್ಯಕ್ಷ ಉಪಾಧ್ಯಕ್ಷರು ಆಗುತ್ತಾರೆ ಎಂಬ ಎಲ್ಲಾ ಲೆಕ್ಕಾಚಾರಗಳು ನಡೆದಿದ್ದವು.
ಆದರೆ ಕೈ ಜಾರಿ ಎಸ್ ಆರ್ ಎನ್ ಬೆಂಬಲಿತ ಅಭ್ಯರ್ಥಿಗಳು ಅಧ್ಯಕ್ಷ ಉಪಾಧ್ಯಕ್ಷರಾಗದರು.
ಒಟ್ಟು 19 ಸದಸ್ಯ ಬಲ ಹೊಂದಿರುವ ಹಿರೇ ಸಿಂಗನಗುತ್ತಿ ಗ್ರಾಮ ಪಂಚಾಯಿತಿಯು ಎಂಟು ಮತಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ, ಒಂದು ಮತ ತಿರಸ್ಕೃತ, 10 ಮತಗಳನ್ನು ಪಡೆದ ಎಸ್ ಆರ್ ಎನ್ ಬೆಂಬಲಿತ ಅಭ್ಯರ್ಥಿಗಳಾದ ಶರಣಮ್ಮ ಮೂಲಿಮನಿ ಅದ್ಯಕ್ಷರಾಗಿ ,ದೇವಪ್ಪ ಉಪಾಧ್ಯಕ್ಷರಾಗಿ ವಿಜಯಮಾಲೆಯನ್ನ ತಮ್ಮದಾಗಿಸಿಕೊಂಡರು.
ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದ ಹಿರೇ ಸಿಂಗನಗುತ್ತಿ ಗ್ರಾಮ ಪಂಚಾಯಿತಿಯಲ್ಲಿ ಮುಖಂಡರಾದ ಮುತ್ತಣ್ಣ ಮೂಲಿಮನಿ, ಮಹಾಂತೇಶ್ ಮೂಲಿಮನಿಯವರ ನೇತೃತ್ವದಲ್ಲಿ ಎಸ್ ಆರ್ ಎನ್ ಬೆಂಬಲಿತ ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣಿ ಹಿಡಿದರು.
ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಿದರು.
ವರದಿಗಾರರು: ಶರಣಗೌಡ ಕಂದಕೂರ