ಆವ ವಿದ್ಯೆಯ ಕಲಿತಡೇನು

ಆವ ವಿದ್ಯೆಯ ಕಲಿತಡೇನು

ಆವ ವಿದ್ಯೆಯ ಕಲಿತಡೇನು
ಸಾವ ವಿದ್ಯೆ ಬೆನ್ನಬಿಡದು
ಅಶನವ ತೊರೆದಡೇನು,
ವ್ಯಸನವ ಮರೆದಡೇನು
ಉಸುರ ಹಿಡಿದಡೇನು,
ಬಸುರ ಕಟ್ಟಿದಡೇನು
ಚೆನ್ನಮಲ್ಲಿಕಾರ್ಜುನದೇವಯ್ಯಾ
ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು?
                  -ಅಕ್ಕ ಮಹಾದೇವಿ

ಅಕ್ಕ ಮಹಾದೇವಿ ಕನ್ನಡದ ಮೊದಲ ಕವಯಿತ್ರಿ. ಅವಳ ವೈರಾಗ್ಯ ಜ್ಞಾನ ಮಾನವೀಯ ಮೌಲ್ಯಗಳು ಅವಳ ವಚನದಲ್ಲಿ ದಾಖಲಾಗಿವೆ. ತನ್ನಿಚ್ಚೆಯಂತೆ ಬದುಕಿ ಬಾಳಿ ಒಬ್ಬ ಮಹಿಳೆ ಯಾರ ಆಶ್ರಯವಿಲ್ಲದೆ ಬದುಕಬಲ್ಲಳು ಎಂದು ತೋರಿದ ದಿಟ್ಟ ಸಾದ್ವಿ .ಅವಳ ವಚನದಲ್ಲಿ ನಿಷ್ಟುರತೆ ಅಧ್ಯಾತ್ಮ ಚಿಂತನೆ ಅಪ್ರತಿಮವಾದದ್ದು.

ಆವ ವಿದ್ಯೆಯ ಕಲಿತಡೇನು
ಸಾವ ವಿದ್ಯೆ ಬೆನ್ನಬಿಡದು
ಮನುಷ್ಯನು 64 ವಿದ್ಯೆಗಳನ್ನುಕಲಿಯುತ್ತಾನೆ . ಆದರೆ ಆತನು ಯಾವುದೇ ವಿದ್ಯೆ ಕಲಿತರೂ ಸಾವು ಎಂಬ ವಿದ್ಯೆ ಆತನನ್ನು ಬೆನ್ನು ಬಿಡದು ಸಾವು ಸಹಜ. ಯಾವುದೇ ವಿದ್ಯೆ ಪಾರಂಗತನಾಗಿದ್ದರೂ ಸಹಿತ ಆತನು ಸಾವು ಎಂಬ ವಿದ್ಯೆಯನ್ನು ಗೆಲ್ಲಲಾರ.

ಅಶನವ ತೊರೆದಡೇನು, ವ್ಯಸನವ ಮರೆದಡೇನು
ಕೆಲವು ಜೈನ ಮುನಿಗಳು ಊಟವನ್ನು ಬಿಡುತ್ತಾರೆ ,ಇಲ್ಲಿ ಆಸನ -ಎಂದರೆ ಆಸನ. ನಾಮಪದ. ತಿನ್ನುವ ಕ್ರಿಯೆ (ಆಹಾರವಾಗಿ). ಆಹಾರವಾಗಿ ತಿನ್ನುವುದು ದೈನಂದಿನ ಊಟವನ್ನು ಬಿಟ್ಟು ಬದುಕಬಲ್ಲೆ ಆಹಾರವನ್ನು ತೊರೆದು ಯೋಗಮಾರ್ಗದಿ ದೀರ್ಘಾಯುಷಿಯಾಗಿ ಬದುಕುತ್ತೇನೆ ಎನ್ನುವುದು ಭ್ರಮೆ ಎನ್ನುತ್ತಾಳೆ ಅಕ್ಕ ಮಹಾದೇವಿ. ಅದೇ ರೀತಿ ವ್ಯಸನವನ್ನು ಬಿಟ್ಟರೇನು ದುಶ್ಚಟಗಳಿಗೆ ಬಲಿಯಾಗುತ್ತೇನೆ ಎನ್ನುವ ಭಯದಿಂದ ವ್ಯಸನ ಮುಕ್ತನಾಗುತ್ತೇನೆ ಎನ್ನುವುದು ಕೂಡ ಒಂದು ಮಾನಸಿಕ ನೆಮ್ಮದಿಯೇ ಹೊರತು ಅದರಿಂದ ಆಯುಷ್ಯ ವೃದ್ಧಿಯಾಗುತ್ತದೆ ಆದರೆ ಸಾವು ತಪ್ಪಿದ್ದಲ್ಲ.

ಉಸುರ ಹಿಡಿದಡೇನು, ಬಸುರ ಕಟ್ಟಿದಡೇನು
ಕೆಲವರು ಉಸಿರು ಗಟ್ಟಿ ಹಿಡಿದು ಯೋಗ ಪ್ರಾಣಾಯಾಮ ಮುಂತಾದ ಅನೇಕ ಪ್ರಯೋಗಗಳನ್ನು ಮಾಡುತ್ತಾರೆ ಆದರೂ ಸಹಿತ ಅವರಿಗೆ ಸಾವು ತಪ್ಪಿದ್ದಲ್ಲ .ಇನ್ನು ಬ್ರಹ್ಮಚಾರಿ ಯೋಗಿಗಳು ತಾವು ಸಂತಾನೋತ್ಪತ್ತಿಯಲ್ಲಿ ಭಾಗಿಯಾಗದೆ ಬಸುರ ಕಟ್ಟಿ ಹಾಕುವ ಕಾರ್ಯ ಮಾಡುತ್ತಾರೆ ಮಕ್ಕಳು ಹೆತ್ತರೆ ತಮ್ಮ ಆಯುಷ್ಯವು ಕಡಿಮೆಯಾಗುತ್ತದೆ ಎನ್ನುವ ತಪ್ಪು ಕಲ್ಪನೆಗೆ ಒಳಗಾದವರು ಮೃತ್ಯುಂಜಯವಾಗಬಲ್ಲರೇ ಇದು ಅಕ್ಕನ ನೇರ ಪ್ರಶ್ನೆ

ಚೆನ್ನಮಲ್ಲಿಕಾರ್ಜುನದೇವಯ್ಯಾ, ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು?
ಅಕ್ಕ ಮಹಾದೇವಿಯವರ ವಚನಗಳಲ್ಲಿ ಬಳಸಿದ ಪ್ರಾಸ ಸಾಂದರ್ಭಿಕ ಉದಾಹರಣೆ ಮತ್ತು ವಿವರಿಸಿದ ರೀತಿ ಅತ್ಯದ್ಭುತವಾಗಿದೆ ಮೇಲಿನ ಎಲ್ಲಾ ವಿವರಣೆಗಳನ್ನು ನೋಡಿದ ಮೇಲೆ ಅಕ್ಕ ನೆಲವು ತಳವಾರನಾದಡೆ ಅಂದ್ರೆ ಭೂಮಿಯನ್ನು ಕಾಯುವ ರಕ್ಷಕ ಎಂದರ್ಥ ಹಾಗಿದ್ದಾಗ ರೋಗಗಳು ಎಂಬ ಕಳ್ಳರು ಎತ್ತ ಹೋದರು ಎಂಬ ಮಾರ್ಮಿಕ ಪ್ರಶ್ನೆ ಇದಾಗಿದೆ,ಅಪ್ಪ ಬಸವಣ್ಣನವರು ಹೇಳಿದ ಹಾಗೆ ಭಕ್ತಿ ಎಂಬ ಪೃಥ್ವಿಯ ಮೇಲೆ ಗುರುವೆಂಬ ಬೀಜ ಉಂಕರಿಸಿ ಲಿಂಗವೆಂಬ ಎಲೆಯಾಯಿತ್ತು,ವಿಚಾರವೆಂಬ ಹೂವಾಯಿತ್ತು ಆಚಾರವೆಂಬ ಕಾಯಾಯಿತ್ತು ,ನಿಷ್ಪತ್ತಿ ಎಂಬ ಹಣ್ಣಾಯಿತು, ನಿಷ್ಪತ್ತಿ ಎಂಬ ಹಣ್ಣು ಕಳಚಿ ಬೀಳುವಲ್ಲಿ ಕೂಡಲ ಸಂಗಮದೇವ ತನಗೆ ಬೇಕೆಂದು ಎತ್ತಿ ಕೊಂಡ .ನಿಷ್ಪತ್ತಿ ಎಂಬ ಹಣ್ಣಿಗೆ ಕೊನೆ ಇದೆ ಅದು ಸಾವಲ್ಲ ತಾನೊಳಗೆ ಅನೇಕ ಬೀಜಗಳನ್ನು ಬಿಟ್ಟು ಹೋಗುತ್ತದೆ ಆ ಎಲ್ಲಅರಿವು ವಿಚಾರ ಬೀಜಗಳು ಮತ್ತೆ ಭೂಮಿಯಲ್ಲಿ ಬಿದ್ದಾಗ ಉತ್ಕೃಷ್ಟವಾದ ಹಣ್ಣುಗಳು ಫಲಗಳು ಸಿಗುತ್ತವೆ ಪೃಥ್ವಿ ನೆಲವೆ ತಳವಾರ ಅಂದ್ರೆ ಕಾಯವನ್ನು ರಕ್ಷಿಸುವ ಎಂದರ್ಥ ಎಂತಹ ಸುಂದರ ಅಮೋಘ ಪ್ರತಿಮೆ ಅಕ್ಕ ಮಹಾದೇವಿ ಬಳಸಿದ್ದಾರೆ

ಡಾ ಶಶಿಕಾಂತ ಪಟ್ಟಣ ರಾಮದುರ್ಗ-9552002338

Don`t copy text!