ಚಿನ್ನದ ನಾಡು ಲಿಂಗಸಗೂರಲ್ಲಿ ಆಧ್ಯಾತ್ಮೀಕ ಪರಂಪರೆಯ ದಸರಾ ಧರ್ಮ ಸಮ್ಮೇಳನ ಇಂದು ಆರಂಭ
e-ಸುದ್ದಿ ಲಿಂಗಸುಗೂರು
ಹಿಮಾಲಯದ ಕೈಲಾಸ ಪರ್ವತದ ವೇದಿಕೆ
ರಾಯಚೂರು ಜಿಲ್ಲೆಯ ಲಿಂಗಸುಗೂರು ಚಿನ್ನದ ನಾಡೆಂದು ಹೆಸರಾಗಿದ್ದು ನಗರದಲ್ಲಿ ಈ ಬಾರಿ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಜಗದ್ಗುರು ಪೀಠದ ವಾಣಿಯಂತೆ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನಿಧ್ಯದಲ್ಲಿ ೩೨ನೇ ದಸರಾ ಧರ್ಮ ಸಮ್ಮೇಳನ ನಡೆಸುವ ಮೂಲಕ ಧರ್ಮ ಜಾಗ್ರತಿ ಸಾರಲು ಪಟ್ಟಣದ ಪ್ರಮುಖ ಬೀದಿಗಳು ಮಧುವಣಗಿತ್ತಿಯಂತೆ ವಿದ್ಯುತ್ ದೀಪಾಲಂಕಾರಗಳಿಂದ ಶೃಂಗಾರಗೊಂಡಿವೆ.
ದಸರಾ ಧರ್ಮ ಸಮ್ಮೇಳನವು ಅ.೧೫ ರಿಂದ ೨೪ ರವರೆಗೆ ನಡೆಯುವ ಪ್ರಯುಕ್ತ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಜಗದ್ಗುರುಗಳು ಗಣ್ಯರಿಗಾಗಿ ೪೦x೮೦ ಭವ್ಯ ವೇದಿಕೆಯಲ್ಲಿ ಭಕ್ತ ಸಮೂಹ ವೀಕ್ಷಣೆಗೆ ೨೦೦x೧೦೦ ಬೃಹತ್ ಟೀನ್ ಪೆಂಡಾಲು ಮತ್ತು ೫ ಸಾವಿರ ಆಸನಗಳ ವ್ಯವಸ್ಥೆ ಹಾಗೂ ೩೦ ವ್ಯಾಪಾರಿ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ. ದ್ವಾರ ಬಾಗಿಲಿಗೆ ೬೦ ಅಡಿಯ ಸುಂದರ ಮಹಾದ್ವಾರ ಗೋಪುರ ನಿರ್ಮಿಸಲಾಗಿದೆ. ಸಮ್ಮೇಳನಕ್ಕೆ ನಾಡಿನ ಶಿವಾಚಾರ್ಯರು, ಸಾಹಿತಿಗಳು, ವಿದ್ವಾಂಸರು, ಸಮಾಜ ಚಿಂತಕರು, ಕವಿ ಕಲಾವಿದರು, ರಾಜಕೀಯ ಧುರೀಣರು ಪಾಲ್ಗೊಳ್ಳಲಿದ್ದಾರೆ.
ವೇದಿಕೆಯಲ್ಲಿ ಕಬ್ಬಿಣ, ಹತ್ತಿ, ತೆಂಗಿನನಾರು, ಬಿಳಿ ಮತ್ತು ನೀಲಿ ಬಣ್ಣ ಬಳಸಿ ಪ್ಲಾಸ್ಟರ್ ಆಪ್ ಪ್ಯಾರಿಸ್‌ನಿಂದ ಹಿಮಾಲಯದ ಕೈಲಾಸ ಪರ್ವತ ನಿರ್ಮಿಸಿ ಮಧ್ಯದಲ್ಲಿ ನಾಲ್ಕು ಅಡಿಯ ಜಗದ್ಗುರು ಶ್ರೀ ರೇಣುಕರ ಸಿಮೆಂಟ್ ಮೂರ್ತಿ ಪ್ರತಿಷ್ಠಾಪಿಸಿವುರುದು ಇದುವರೆಗೆ ನಡೆದ ಸಮ್ಮೇಳನಗಳಲ್ಲಿಯೇ ವಿಶೇಷವೆನಿಸಿದೆ. ಭಕ್ತರು ಪ್ರವೇಶಸಿದ ತಕ್ಷಣ ೧೨ ಅಡಿಯ ಜಗದ್ಗುರು ಶ್ರೀರೇಣುಕಾಚಾರ್ಯರ ಪಿಓಪಿ ಲಿಂಗೋದ್ಭವ ಮೂರ್ತಿಯನ್ನು ಸಂತೆಕೆಲ್ಲೂರಿನ ಕಲಾವಿದ ಅಯ್ಯಣ ಮಾ.ಪಾಟೀಲ್ ನಿರ್ಮಿಸಿ ಹಿಮಾಲಯದ ಕೈಲಾಸ ಪರ್ವತವನ್ನೆ ಧರೆಗಿಳಿಸುವ ಮೂಲಕ ವೇದಿಕೆಗೆ ಮೆರಗು ತಂದಿದ್ದಾನೆ.
ಪಟ್ಟಣವು ಸಮ್ಮೇಳನ ಪ್ರಯುಕ್ತ ಮಧುವಣಗಿತ್ತಿಯಂತೆ ಶೃಂಗಾರಗೊAಡಿದ್ದು, ಬಸ್ ನಿಲ್ದಾಣ ವೃತ್ತ, ಅಂಚೆ ಕಚೇರಿ, ಈಶ್ವರ ದೇವಸ್ಥಾನ, ಕಲಬುರಗಿ ರಸ್ತೆ, ಗಡಿಯಾರ ವೃತ್ತಗಳಲ್ಲಿ ದೀಪಾಲಂಕಾರ ಮತ್ತು ಮುಖ್ಯರಸ್ತೆಯ ಡಿವೈಡರ್ ಮಧ್ಯದ ಪ್ರತಿ ಹೈಮಾಸ್ ವಿದ್ಯುತ್ ಕಂಬಗಳಿಗೆ ಮತ್ತು ರಸ್ತೆ ಅಕ್ಕಪಕ್ಕ ದೀಪಾಲಂಕಾರ, ಜಗದ್ಗುರುಗಳ ಫ್ಲೆಕ್ಸ್ಗಳು ಕಂಗೊಳಿಸುತ್ತಿವೆ. ಸಹಸ್ರಾರು ಭಕ್ತ ಸಮೂಹ ಆಗಮಿಸುವ ನಿರೀಕ್ಷೆ ಇದೆ.
ಅ.೧೫ ರಿಂದ ಭಕ್ತರ ಪ್ರಸಾದ ವ್ಯವಸ್ಥೆಗೆ ಭಕ್ತರ ಪ್ರಸಾದಕ್ಕಾಗಿ ೧೫ ಊಟದ ಕೌಂಟರ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ ಉಪ್ಪಿಟ್ಟು, ಪುಳಿಯೊಗರೆ, ಮಂಡಕ್ಕಿ ವಗ್ಗರಣಿ, ಅವಲಕ್ಕಿ ವಗ್ಗರಣಿ ಉಪಹಾರ ಹಾಗೂ ಮಧ್ಯಾಹ್ನ ಮತ್ತು ರಾತ್ರಿ ಗೋಧಿ ಹುಗ್ಗಿ, ಹೆಸರುಬೇಳೆ ಪಾಯಸ, ಕಡಲೆಬೇಳೆ ಪಾಯಸ, ಸಜ್ಜಕ, ಬೂಂದಿ, ಶಾವಿಗೆ ಪಾಯಸ, ಉದರ ಮಾದಲಿ, ನಾನಾ ಬಗೆಯ ಕಾಯಿಪಲ್ಯೆ, ಅನ್ನ ಸಾಂಬರ್, ಕಡಲೆ ಪುಡಿ, ಉಪ್ಪಿನಕಾಯಿ, ಹಪ್ಪಳ ಸಂಡಿಗೆ ಸೇರಿ ಪ್ರತಿನಿತ್ಯ ನಾನಾ ಬಗೆಯ ಭಕ್ಷ ಭೋಜನ ತಯಾರಿಸಲಾಗುತ್ತಿದೆ.ಕುಡಿವ ನೀರಿಗೆ ೪೦೦ ನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಸಮ್ಮೇಳನದ ಪ್ರಯುಕ್ತ ಎಲ್ಲ ಸಿದ್ಧತೆಗೆ ಪುರಸಭೆ, ಜಿಪಂ, ಪಿಡಬ್ಲೂö್ಯಡಿ, ಸಾರಿಗೆ ಸೇರಿದಂತೆ ನಾನಾ ಇಲಾಖೆಗಳ ಸಹಯೋಗದೊಂದಿಗೆ ಜೆಸಿಬಿ ಯಂತ್ರ ಮತ್ತು ವಾಹನಗಳ ಸಹಾಯದಿಂದ ಕಾಲೇಜು ಮೈದಾನ ಅಣಿಗೊಳಿಸಲಾಗುತ್ತಿದೆ. ಕಾಲೇಜು ಮೈದಾನ ಮತ್ತು ಪ್ರಮುಖ ವೃತ್ತ, ರಸ್ತೆಗಳನ್ನು ಪೌರ ಕಾರ್ಮಿಕರು ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾರೆ. ಸಮ್ಮೇಳನ ಯಶಸ್ವಿಗೆ ಮತ್ತು ಜನ ದಟ್ಟಣೆ ತಡೆದು ಸುಗಮ ಸಂಚಾರಕ್ಕೆ ವಿಶೇಷ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಪ್ರತಿವರ್ಷ ಸಾಂಸ್ಕೃತಿ ವೈಭವ ಸಾರುವ ನಾಡಹಬ್ಬ ದಸರಾ ಮಹೋತ್ಸವವು ಸಾಂಸ್ಕೃತಿಕ ನಗರಿ ಮೈಸೂರು ಅರಮನೆಯಿಂದ ಜಂಬೂಸವಾರಿ ಮೂಲಕ ಸಾಂಸ್ಕೃತಿಕ ಪರಂಪರೆ ಬಿಂಬಿಸಿದರೆ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಪರಂಪರೆ ಪ್ರತಿನಿಧಿಸುವ ಜಗದ್ಗುರು ರಂಭಾಪುರಿ ಮಹಾಪೀಠವು ಶಿಕ್ತಿವಿಶಿಷ್ಟಾದ್ವೆöÊತ ಸಿದ್ಧಾಂತ ಪ್ರತಿಪಾದಿಸುವ ವೀರಶೈವ ಧರ್ಮದಲ್ಲಿ ಶಿವನಂತೆ ಶಕ್ತಿಯನ್ನೂ ಆರಾಧಿಸುವ ದಸರಾ ಮಹೋತ್ಸವದ ಮೂಲಕ ಧರ್ಮ ಸಂದೇಶ ಸಾರುವ ಸಮ್ಮೇಳನವು ಎಂದೇನಿಸಿಕೊಳ್ಳಲಿದೆ.
ಅ.೧೫ ರ ದಸರಾ ಧರ್ಮ ಸಮ್ಮೇಳನದ ಕಾರ್ಯಕ್ರಮಗಳು
ಸುದ್ದಿಮೂಲವಾರ್ತೆ ಲಿಂಗಸುಗೂರು:
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ನಡೆಯಲಿದ್ದು, ಅ.೧೫ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಬೆಳಗ್ಗೆ ಈಶ್ವರ ದೇವಸ್ಥಾನದಲ್ಲಿ ರಂಭಾಪುರಿ ಜಗದ್ಗರುಗಳ ಸಾರ್ವಜನಿಕ ಇಷ್ಟಲಿಂಗ ಮಹಾಪೂಜೆ ಜರುಗಲಿದೆ. ಸಂಜೆ ೭ ಗಂಟೆಗೆ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನಿಧ್ಯದಲ್ಲಿ ಧರ್ಮ ಸಮ್ಮೇಳನ ನಡೆಯಲಿದೆ. ಮಾಜಿ ಸಿಎಂ, ಕೇಂದ್ರೀಯ ಚುನಾವಣಾ ಸಂಸದೀಯ ಸದಸ್ಯ ಬಿ.ಎಸ್.ಯಡಿಯೂರಪ್ಪನವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯರು, ಅಮರೇಶ್ವರ ಗುರುಗಜದಂಡ ಶಿವಾಚಾರ್ಯರು, ಗಣೇಕಲ್ ಬೃಹನ್ಮಠದ ಪಂಚಾಕ್ಷರ ಶಿವಾಚಾರ್ಯರು, ಶಾಸಕ ಹಾಗೂ ಸಮ್ಮೇಳನ ಸೇವಾ ಸಮಿತಿ ಅಧ್ಯಕ್ಷ ಮಾನಪ್ಪ ವಜ್ಜಲ್, ಅರಣ್ಯ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ, ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಡಾ.ಶಿವರಾಜ ಪಾಟೀಲ್, ಹಂಪನಗೌಡ ಬಾದರ್ಲಿ, ಶಹಪೂರ ಬಸಯ್ಯ ತಾತನವರು, ಶರಣಯ್ಯ ಹಿರೇಮಠ, ಉಪನ್ಯಾಸಕಿ ಡಾ.ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ ಭಾಗವಹಿಸಲಿದ್ದಾರೆ.