ಸಮಸಮಾಜ ಸ್ಥಾಪನಕ್ಕೆ ಕೃಷಿ

ಸಮಸಮಾಜ ಸ್ಥಾಪನಕ್ಕೆ ಕೃಷಿ

e-ಸುದ್ದಿ ರಾಯಚೂರು

ಕರ್ನಾಟಕದಲ್ಲಿ ಸಮ ಸಮಜ ಸ್ಥಾಪನಕ್ಕಾಗಿ ಮಹಿಳಾ ವಚನಕಾರ್ತಿಯರು ಅನನ್ಯವಾಗಿ ಸೇವೆ ಸಲ್ಲಿಸಿದರೆಂದು ಡಾ. ಶಶಿಕಾಂತ್ ಪಟ್ಟಣ ಅವರು ಹೇಳಿದ್ದರು.

ಆಯ್ದಕ್ಕಿ ಲಕ್ಕಮ್ಮ, ಮುಕ್ತಾಯಕ್ಕ, ಸತ್ಯಕ್ಕ, ಗಂಗಾಂಬಿಕ, ನೀಲಾಂಬಿಕ, ಅಕ್ಕಮ್ಮ, ಇಂತಹಾ ಅನೇಕ ಶರಣಿಯರು ಅಂದಿನ ಕಾಲದ ಜನರಲ್ಲಿ ಚೇತನ್ಯವ ಕಲಿಸಿ ಅವರ ಮನದಲ್ಲಿ ಬಸವಣ್ಣನವರ ವಚನ ವಚನಗಳನ್ನು ಬೆರಿಸುವಂತೆ ಮಾಡಿದ್ದಾರೆಂದು ಪ್ರಶಂಸೆ ಮಾಡಿದ್ದರು.

ಇವರೆಲ್ಲರೂ ಬೇರೆ ಬೇರೆ ಸಾಮಾಜಿಕ ವರ್ಗದವರೆಂದು ಅವರೆಲ್ಲರೂ ಕೂಡಿ ಬಸವಣ್ಣನವರ ಕಾರ್ಯಕ್ಕೆ ಕೈ ಜೋಡಿಸಿದರೆಂದರು. ಸ್ಥಾನಿಕ ಬಸವ ಕೇಂದ್ರದಲ್ಲಿ ಬುಧವಾರ ಶಿವಶರಣ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆಯಲ್ಲಿ ಪಾಲ್ಗೊಂಡ ಶಶಿಕಾಂತ್ ಪಟ್ಟಣ ಅವರು ಮಾತನಾಡಿ, ಗುರು ಬಸವಣ್ಣನವರು ತಮ್ಮ ವಚನಗಳಲ್ಲಿ ಮಹಿಳೆಯರ ಉನ್ನತಿಗಾಗಿ ಚಿಂತನ ಮಂಥನ ಮಾಡಿ ಮಾಡಿದ್ದಾರೆಂದು ತಿಳಿಸಿದರು.
12ನೇ ಶತಮಾನದಲ್ಲಿ ಶಿವಶರಣರು ರಚಿಸಿದ ವಚನಗಳು ಇಂದಿನ ಪೀಳಿಗೆಗೆ ಉಪಯುಕ್ತವಾಗಿದೆ ಎಂದು ಹೇಳಿದರು. ಬಸವ ಕೇಂದ್ರದ ಅಧ್ಯಕ್ಷರಾದ ರಾಚನಗೌಡ ಕೋಳೂರು ಅವರು ಮಾತನಾಡತಾ ಮನುಷ್ಯ ಜೀವನ ಸಾರ್ಥಗೊಳಿಸಬೇಕಾದರೆ ಬಸವಣ್ಣನವರ ಹೇಳಿದ ವಚನಗಳನ್ನು ನಡವಡಿಕೆಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಬಸವ ತತ್ವವನ್ನು ಇಂದಿನ ಯುವಕರು ಓದಿ ಇತರಿಗೆ ಹೇಳಬೇಕು ಎಂದು ಆಶಿಸಿದರು. ವೀರಶೈವ ಲಿಂಗಾಯತ ಸಮಾಜ ಅಧ್ಯಕ್ಷರು ಶರಣ ಭೂಪಾಲ ನಾಡಗೌಡ, ಬಸವರಾಜ, ಜಯಶ್ರೀ ಮಹಾಜನ್ ಶೆಟ್ಟಿ ಮಹಾದೇವಪ್ಪ ಯೆನಗೂರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Don`t copy text!