ಸಂಕ್ರಾಂತಿ ವಿಶೇಷ.

ಸಂಕ್ರಾಂತಿ ವಿಶೇಷ.

ನಮ್ಮ ದೇಶದ ಸಂಪ್ರದಾಯಿಕ ಆಚರಣೆಗಳು ವಿಶಿಷ್ಟ.. ಅರೋಗ್ಯವನ್ನೂ ಗಮನದಲ್ಲಿಟ್ಟು ದೈವದ ಆರಾಧನೆ ಮಾಡಿಯೇ ಹಬ್ಬ ಆಚರಿಸುವುದು ನಮ್ಮ ದೇಶದ ಪದ್ಧತಿ.

ನಮ್ಮ ಜೀವನದಲ್ಲಿ ಬರುವ ಅನೇಕ ಸಂತೋಷದ ಸಂದರ್ಭಗಳನ್ನು ವೈಭವದಿಂದ ಆಚರಣೆ ಮಾಡುವುದೇ ಹಬ್ಬ ಎನಿಸುತ್ತದೆ.

ಸಂಕ್ರಾಂತಿ ಹಬ್ಬ ಎಂದರೆ ಸುಗ್ಗಿ ಹಬ್ಬ. ಬೇಸಿಗೆಯಲ್ಲಿ ಮಣ್ಣನ್ನು , ಸೂರ್ಯನ ಬಿಸಿಲಿಗೆ ಒಡ್ಡಿ, ಹದಗೊಳಿಸಿ, ಮಳೆಗಾಲ ಬಂದಾಗ ಬೀಜಗಳನ್ನು ಉತ್ತಿ, ಬೆಳೆದು ನಿಂತಾಗ ಅದನ್ನು ಕೊಯ್ಲು ಮಾಡುವ ಮುನ್ನ ಸ್ವಲ್ಪ ಭಾಗವನ್ನು ಮನೆಗೆ ತಂದು, ದೇವರಿಗೆ ಸಮರ್ಪಿಸಿ, ಮುತ್ತೈದೆಗೆ ಬಾಗಿಣ ಕೊಟ್ಟು, ಆಮೇಲೆ ಮನೆಯಲ್ಲಿ ಉಪಯೋಗ ಮಾಡುವುದು ನಮ್ಮ ರೀತಿ. ಇದನ್ನೇ ಸಂಕ್ರಾಂತಿ ಹಬ್ಬವೆಂದು ಕರೆಯುತ್ತೇವೆ.

ಚಳಿಗಾಲ ಕಳೆದು, ಸ್ವಲ್ಪ ಸ್ವಲ್ಪವಾಗಿ ಬಿಸಿಲು ಏರುತ್ತಾ ಹೋಗುವ ಕಾಲವಿದು. ಚಳಿಗೆ ಚರ್ಮ ಶುಷ್ಕವಾಗದಿರಲಿ ಎಂದು ಬೆಣ್ಣೆ, ಎಳ್ಳುಗಳನ್ನು ಬಳಸಿ ಅಡುಗೆ ಮಾಡುತ್ತಾರೆ. ಸೆಜ್ಜೆರೊಟ್ಟಿ ಹೆಸರುಬೇಳೆ ಮುಂತಾದ ಮೈ ಬೆಚ್ಚಗಿಡುವಂಥ ಪದಾರ್ಥಗಳನ್ನು ಅಡುಗೆಗೆ ಬಳಸುವುದು ನಮ್ಮ ದೇಶದಲ್ಲಿ ಪದ್ಧತಿ ಇದೆ.

ಸೀತನಿ, ಸುಲಗಾಯಿ, ಕಬ್ಬು, ಮುಂತಾದವುಗಳನ್ನು ಮನೆಗೆ ತಂದು
ಭೋಗಿ ದಿನದಂದು ಇನ್ನೂ ಅಡುಗೆಗೆ ಬೇಕಾಗುವ ಕೆಲವು ಪದಾರ್ಥಗಳನ್ನು ಮೊರದಲ್ಲಿಟ್ಟು ಮುತ್ತೈದೆಗೆ ಬಾಗಿಣ ಕೊಟ್ಟು..ಹುಗ್ಗಿ, ಗೊಜ್ಜು, ಸೆಜ್ಜೆ ರೊಟ್ಟಿ, ಬದನೆ, ಗಜ್ಜರಿ ಮುಂತಾದ ಪದಾರ್ಥ ಬಳಸಿ ಅಡುಗೆ ಮಾಡಿ, ಮರುದಿನ ಸಂಕ್ರಾಂತಿ ಯಂದು ಹಬ್ಬದ ವಿಶೇಷ ಅಡುಗೆ ಮಾಡಿ,ಎಳ್ಳು ಬೆಲ್ಲವನ್ನು ಮಿಶ್ರಣ ಮಾಡಿ ವಿನಿಮಯ ಮಾಡಿಕೊಂಡು, ಹಬ್ಬ ಆಚರಣೆ ಮಾಡುತ್ತೇವೆ,, ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸಿ ಜೀವನ ಎದುರಿಸಬೇಕು ಎಂಬುದೇ ಸಂಕ್ರಾಂತಿಯ ಸಂದೇಶ.

✍️ರೇಖಾ. ಮುತಾಲಿಕ್.
ಬಾಗಲಕೋಟ

Don`t copy text!