ಬಸವ ಹೇಳಿದ ಸತ್ಯ ಜಗಕ್ಕೆ ನಿತ್ಯ
ಹನ್ನೆರಡನೆಯ ಶತಮಾನವು ಭಾರತದ ಇತಿಹಾಸ ಪುಟದಲ್ಲಿನ ಒಂದು ಸುವರ್ಣ ಯುಗ . ಮಹಾತ್ಮಾ ಬುದ್ಧನ ನಂತರ 1700 ವರ್ಷಗಳ ಮೇಲೆ ವರ್ಗ ವರ್ಣ ಲಿಂಗ ಭೇದ ರಹಿತ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ವೈಚಾರಿಕ ಆಂದೋಲನವು ಬಸವಣ್ಣನವರ ನೇತೃತ್ವದಲ್ಲಿನಡೆಯಿತು.
ತಳ ಸಮುದಾಯದದವರ ,ಶೋಷಿತರ ದಮನಿತರ ಅಸ್ಪ್ರಶ್ಯರ ಕಾರ್ಮಿಕರ ಮಹಿಳೆಯರ ಬಡವರ ಪರ ಗಟ್ಟಿ ಧ್ವನಿ ಮೊಳಗ ಹತ್ತಿತು ವರ್ಗ ಜೇಷ್ಠತೆ ವರ್ಣ ಶ್ರೇಷ್ಠತೆ ತೊಡೆದು ಹಾಕಿ ಜನ ಸಾಮಾನ್ಯರ ಅಭಿವ್ಯಕ್ತಿಗೆ ಶಕ್ತಿ ಬಂತು .ವಚನಗಳು ಬಂಡಾಯದ ಕ್ರಾಂತಿ ಕಿಡಿಗಳಾದವು . ಪರಿಣಾಮವಾಗಿ ಮಾದಾರ ಚೆನ್ನಯ್ಯ ಡೋಹಾರ ಕಕ್ಕಯ್ಯ ಹರಳಯ್ಯ ದಾಸಯ್ಯ ಹೀಗೆ ಬಹುತೇಕ ಶೋಷಿತ ಸಮಾಜವು ಇಂತಹ ಅಭೂತಪೂರ್ವ ಆಂದೋಲನದಲ್ಲಿ ಪಾಲ್ಗೊಂಡಿತು.
ಶರಣರ ಆಶಯಗಳಿಗೆ ಸಂಪೂರ್ಣ ಭಿನ್ನವಾಗಿ ಅದೇ ಸಿದ್ದಾಂತವನ್ನು ಬೋಧಿಸುವ ಮಠೀಯ ವ್ಯವಸ್ಥೆಗಳು ವಾಣಿಜ್ಯ ಮಳಿಗೆಗಳಾಗಿವೆ. ಶಿಕ್ಷಣ ಆರೋಗ್ಯದ ವ್ಯಾಪಾರ ಕೇಂದ್ರಗಳು. ಬಹುತೇಕ ಮಠಗಳು ವೈದಿಕತೆಯ ನೆರಳಲ್ಲಿ ಬದುಕುತ್ತಿವೆ.
ಶ್ರೇಣೀಕೃತ ಸಮಾಜ ಮತ್ತೆ ತೀವ್ರವಾಗಿ ಬೆಳೆದು ನಿಂತಿದೆ .ಇದು ಕೇವಲ ಆಚಾರಕೆ ಭಾಷಣಕ್ಕೆ ಲೇಖನಕ್ಕೆ ಮೀಸಲಾದ ಸಿದ್ಧಾಂತವೆನಿಸಿದೆ. ಶರಣರ ಆಶಯಗಳು ತುಂಬಾ ಪ್ರಗತಿಪರ ಮಾನವ ಕೇಂದ್ರಿತ ಸಕಲ ಜೀವ ಜಾಲಗಳಿಗೆ ಒಳಿತನ್ನು ಬಯಸುವ ಜಗತ್ತಿನ ಸರ್ವ ಶ್ರೇಷ್ಠ ವೈಚಾರಿಕ ಸಾರ್ವಕಾಲಿಕ ಸಿದ್ಧಾಂತವೆನಿಸಿದೆ. ಗುರು ವ್ಯಕ್ತಿಯಲ್ಲ ಲಿಂಗ ವಸ್ತು ಅಲ್ಲ ಮತ್ತು ಜಂಗಮ ಜಾತಿ ವ್ಯವಸ್ಥೆಯಲ್ಲ . ಇಂತಹ ವೈಚಾರಿಕ ಸತ್ಯದ ನಿಲುವುಗಳನ್ನು ಜಗತ್ತಿಗೆ ಪರಿಚಯಿಸುವ ಇನ್ನೊಂದು ಕ್ರಾಂತಿ ಈಗ ಅಗತ್ಯವೆನಿಸುತ್ತಿದೆ.
ಬಸವಣ್ಣನವರ ಸಂಪೂರ್ಣ ಕ್ರಾಂತಿಯ ಆಶಯಗಳನ್ನು ಶರಣರ ಬದುಕಿನ ಧೋರಣೆಗಳನ್ನು ಇಂದು ಮತ್ತೆ ಮತ್ತೆ ಅನುಷ್ಟಾನಕ್ಕೆ ತರಲು ಮುಂದಾಗ ಬೇಕಿದೆ.
ಕರ್ನಾಟಕ ಘನ ಸರಕಾರ
ಬಸವಣ್ಣನವರನ್ನು ಸಾಂಸ್ಕೃತಿಕ ರಾಯಭಾರಿ ನಾಯಕ ಎಂದು ಅಧಿಕೃತ ಘೋಷಣೆ ಮಾಡಿ ಅವರ ತತ್ವಕ್ಕೆ ಗೌರವ ನೀಡಿದ್ದು ನಾಡಿನ ಹೆಮ್ಮೆಯ ಸಂಗತಿ.
ಶ್ರಿ ಸಿದ್ಧರಾಮಯ್ಯ ಸನ್ಮಾನ್ಯ ಮುಖ್ಯ ಮಂತ್ರಿ ಮತ್ತು ಅವರ ಸಚಿವ ಸಂಪುಟದ ಸದಸ್ಯರಿಗೆ ಹಾರ್ದಿಕ ಅಭಿನಂದನೆಗಳು.
ಬಸವಣ್ಣ ಜಗವು ಕೇಂದ್ರ ಶ್ರೇಷ್ಠ ಸಮಾಜವಾದಿ.
ಬಸವ ಹೇಳಿದ ಪರಮ ಸತ್ಯ
ಸಮಾಜದಲ್ಲಿ ಶ್ರೇಣೀಕೃತ ಜಾತಿ ಮತ ಪಂಥ ಇಲ್ಲದಿರುವುದು.
ನೀನು ನಿನ್ನನ್ನು ಪ್ರೀತಿಸು ನಿನ್ನ ನೆರೆಯವರನ್ನು ಪ್ರಿತಿಸು ಪ್ರೀತಿಗೆ ಭಕ್ತಿ ಎಂಬ ಪಾರಿಭಾಷಿಕ ಪದಗಳ ಕೊಟ್ಟನು ಬಸವಣ್ಣ.
ಶುಷ್ಕ ಆಚರಣೆ ತೊರೆದು ಅಂತರಂಗದ ಶೋಧನೆಗೆ ಮುಂದಾಗಿ ಭಕ್ತ ತಾನೇ ದೇವರಾಗುವ ಪರಿಯನ್ನು ಕಂಡು ಕೊಂಡನು. ಸತ್ಯ ಸಮತೆ ಶಾಂತಿ ಪ್ರೀತಿ ಅವನ ನಿಜ ಮಂತ್ರಗಳು.
ಅರಿವು ಗುರು ಆಚಾರವೇ ಲಿಂಗ ಅನುಭಾವವೇ ಜಂಗಮ ಶರಣ ಚಳುವಳಿ ಇನ್ನಷ್ಟು ಪ್ರಖರಗೊಳ್ಳಬೇಕಿದ್ದರೆ
ಕರ್ನಾಟಕ ರಾಜ್ಯ ಸರಕಾರ
ವಚನ ವಿಶ್ವ ವಿದ್ಯಾಲಯ ಸ್ಥಾಪಿಸಲು ನಿರ್ಧರಿಸಲೀ. ಕೂಡಲ ಸಂಗಮ ಬಸವಣ್ಣನವರ ಐಕ್ಯ ಮಂಟಪ ಜಗತ್ತಿನ ಸರ್ವ ಜನಾಂಗದ ಭಾವೈಕ್ಯತೆಯ ಸಂಗಮವಾಗಲಿ.
ಅದನ್ನು ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಡಿಸಬೇಕು.
ಡಾ ಶಶಿಕಾಂತ ಪಟ್ಟಣ ರಾಮದುರ್ಗ