ಗೆಲುವು
ಯುಗಗಳೆ ಉರುಳಿದರು
ಜಗದ ನಿಯಮ ಬದಲಾಗದು
ಸತ್ಯ ಧರ್ಮ ನ್ಯಾಯಕ್ಕೆ
ಎಂದಿಗೂ ಜಯ ಇರುವುದು
ನ್ಯಾಯದಾ ಗೆಲುವಿಗೆ
ಲಕ್ಷ ಆತ್ಮಗಳ ತರ್ಪಣ
ಬಚ್ಚಿಟ್ಟ ಸತ್ಯಗಳ
ದಿವ್ಯ ಅನಾವರಣ
ಮರುಳದವರಿಗೆ ಸಲ್ಲಿತು
ನಿಜ ಶೃಧ್ಧಾಂಜಲಿ ಇಂದು
ದೇವನೋಲುಮೆಗೆ ಸಾಕ್ಷಿ
ಮತ್ತೆ ಆತನ ಆಗಮನವಿಂದು
ಕಟ್ಟಿ ಕೆಡವಿದ ಗೋಡೆ
ಮತ್ತೆ ಮೇಲೆರದಿರಲಿ
ದೇವನೊಬ್ಬ ನಾಮ ಹಲವು
ಸತ್ಯ ಸಂದೇಶ ಒಂದೆ ಆಗಿರಲಿ
–ಆಶಾ ಯಮಕನಮರಡಿ