ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ ಒಂದು ಕಿರು ನೋಟ
ಡಾ ಡಿ ಆರ್ ನಾಗರಾಜ ಅವರು ಕರ್ನಾಟಕವು ಕಂಡ ಶ್ರೇಷ್ಠ ವಿದ್ವಾಂಸ ಚಿಂತಕ ಸಮಾಜವಾದಿ ಲೇಖಕರಲ್ಲಿ ಅಗ್ರ ಗಣ್ಯ .
ಅತ್ಯಂತ ಸಣ್ಣ ವಯಸ್ಸಿನಲ್ಲಿ ಅವರು ನಿಧನರಾದರು. ಇದು ಕನ್ನಡಿಗರ ದೌರ್ಭಾಗ್ಯ ಎಂದೇ ಹೇಳಬಹುದು.
ಆರ್.ನಾಗರಾಜ್ ಹಿಂದಿನ ಶತಮಾನದ ಕೊನೆಯ ಎರಡು ದಶಕಗಳನ್ನು ಬೆರಗುಗೊಳಿಸಿದ ಸಂಸ್ಕೃತಿ ಚಿಂತಕ. ತರತರದ ಬಣ್ಣಗಳ ಎಳೆಗಳನ್ನು ಹಿಡಿದು ಊಹಿಸಿ ಚಿತ್ತಾರ ಬರೆಯುವ ಕಸುಬುದಾರ. ಹುಟ್ಟಿನಲ್ಲಿ ನೇಕಾರನಂತೆ ತಮ್ಮ ಚಿಂತನೆಗಳನ್ನು ಬರಹದಲ್ಲಿ ಹಿಡಿದಿಡುವ ಸಾಮರ್ಥ್ಯ ಹೊಂದಿದವರು.
ಅವರ ಒಂದು ಶ್ರೇಷ್ಠ ಕೃತಿ
ಅಲ್ಲಮ ಪ್ರಭು ಮತ್ತು ಶೈವ ಪ್ರತಿಭೆ ಇದನ್ನು ಸ್ವಲ್ಪ ಮಟ್ಟಿಗೆ ತಿಳಿದುಕೊಳ್ಳಲು ಪ್ರಯತ್ನಿಸೋಣ.
. ಡಿ ಆರ್. ನಾಗರಾಜ್ ಅವರ ಮರಣೋತ್ತರ ಪ್ರಕಟಣೆಯಾಗಿ 1998ರಲ್ಲಿ ಪ್ರಕಟವಾದ ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಅಪರೂಪದ ಗ್ರಂಥವಾಗಿದೆ. ಒಂಭತ್ತು ಅಧ್ಯಾಯಗಳಲ್ಲಿ ವ್ಯಾಪಿಸಿರುವ ಚಿಂತನೆ ಪ್ರಧಾನವಾಗಿ ಎರಡು ಮುಖವಾಗಿವೆ.
ಮೊದಲ ಅಧ್ಯಾಯ
ಶೈವದರ್ಶನಗಳ ಚಾರಿತ್ರಿಕ ಸಮೀಕ್ಷೆಯನ್ನೊಳಗೊಂಡಿದೆ.
ಎರಡನೆಯ ಅಧ್ಯಾಯ
ಇಲ್ಲಿ ಬರುವ ಅಲ್ಲಮ ಲೋಕಕ್ಕೆ ಮತ್ತೆ ಅಲ್ಲಿ ಚರ್ಚಿತವಾಗುವ ಶೈವ ಸಾಹಿತ್ಯ ಮೀಮಾಂಸೆಗಳಿಗೆ ವೇದಿಕೆಯಾಗುತ್ತದೆ.
ಮೂರನೆಯ ಅಧ್ಯಾಯ
ಅಲ್ಲಮನದೇ ಎನ್ನುವಂತ ಕಾವ್ಯ ಮೀಮಾಂಸೆಯ ಕುರಿತು ಚರ್ಚಿಸುತ್ತದೆ.
ನಾಲ್ಕನೆಯ ಅಧ್ಯಾಯ
ಇಲ್ಲಿ ಅಲ್ಲಮನ ಕಾಯ ಸಿದ್ಧಾಂತವಿದೆ.
ಐದನೆಯ ಅಧ್ಯಾಯ
ಅಲ್ಲಮನ ಜೀವನದ ಕಥಾನಕಗಳನ್ನು ಕುರಿತು ನಿರೂಪಣೆ ಮಾಡಿದರೆ,
ಆರನೆಯ ಅಧ್ಯಾಯ
ಅಲ್ಲಮನ ವಚನಗಳ ಪ್ರಾಯೋಗಿಕ ವಿಮರ್ಶೆಯಲ್ಲಿ ಮಗ್ನವಾಗುತ್ತದೆ. ಏಳನೆಯ ಅಧ್ಯಾಯ ಅಲ್ಲಮನ ಪ್ರತಿಭೆಯ ವಿವಿಧ ಆಯಮಗಳನ್ನು ಆಧುನಿಕ ಪೂರ್ವಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ಚರ್ಚಿಸುತ್ತದೆ.
ಡಿ ಆರ್. ನಾಗರಾಜ್ ಅವರ ಮರಣೋತ್ತರ ಪ್ರಕಟಣೆಯಾಗಿ 1998ರಲ್ಲಿ ಪ್ರಕಟವಾದ ‘ಅಲ್ಲಮಪ್ರಭು ಮತ್ತು ಶೈವಪ್ರತಿಭೆ’ ಅಪರೂಪದ ಗ್ರಂಥವಾಗಿದೆ. ಒಂಭತ್ತು ಅಧ್ಯಾಯಗಳಲ್ಲಿ ವ್ಯಾಪಿಸಿರುವ ಚಿಂತನೆ ಪ್ರಧಾನವಾಗಿ ಎರಡು ಮುಖವಾಗಿವೆ. ಮೊದಲ ಅಧ್ಯಾಯ ಶೈವದರ್ಶನಗಳ ಚಾರಿತ್ರಿಕ ಸಮೀಕ್ಷೆಯನ್ನೊಳಗೊಂಡಿದೆ. ಎರಡನೆಯ ಅಧ್ಯಾಯದಲ್ಲಿ ಬರುವ ಅಲ್ಲಮ ಲೋಕಕ್ಕೆ ಮತ್ತೆ ಅಲ್ಲಿ ಚರ್ಚಿತವಾಗುವ ಶೈವ ಸಾಹಿತ್ಯ ಮೀಮಾಂಸೆಗಳಿಗೆ ವೇದಿಕೆಯಾಗುತ್ತದೆ. ಮೂರನೆಯ ಅಧ್ಯಾಯ ಅಲ್ಲಮನದೇ ಎನ್ನುವಂತ ಕಾವ್ಯ ಮೀಮಾಂಸೆಯ ಕುರಿತು ಚರ್ಚಿಸುತ್ತದೆ. ನಾಲ್ಕನೆಯ ಅಧ್ಯಾಯದಲ್ಲಿ ಅಲ್ಲಮನ ಕಾಯ ಸಿದ್ಧಾಂತವಿದೆ. ಐದನೆಯ ಅಧ್ಯಾಯ ಅಲ್ಲಮನ ಜೀವನದ ಕಥಾನಕಗಳನ್ನು ಕುರಿತು ನಿರೂಪಣೆ ಮಾಡಿದರೆ,
ಆರನೆಯ ಅಧ್ಯಾಯ
ಅಲ್ಲಮನ ವಚನಗಳ ಪ್ರಾಯೋಗಿಕ ವಿಮರ್ಶೆಯಲ್ಲಿ ಮಗ್ನವಾಗುತ್ತದೆ.
ಏಳನೆಯ ಅಧ್ಯಾಯ
ಅಲ್ಲಮನ ಪ್ರತಿಭೆಯ ವಿವಿಧ ಆಯಮಗಳನ್ನು ಆಧುನಿಕ ಪೂರ್ವಕನ್ನಡ ಸಾಹಿತ್ಯದ ಹಿನ್ನೆಲೆಯಲ್ಲಿ ಚರ್ಚಿಸುತ್ತದೆ.
ಹೀಗೆ ಅಲ್ಲಮ ಒಬ್ಬ ಶ್ರೇಷ್ಠ ಕವಿ ತತ್ವಜ್ಞಾನಿ ದಾರ್ಶನಿಕ ಶರಣರಲ್ಲಿ ವಿಶಿಷ್ಟ ವ್ಯಕ್ತಿತ್ವ ಹೊಂದಿದ ಶರಣ ಎನ್ನುತ್ತಾ ಆತನ ಪ್ರಗತಿಪರ ಧೋರಣೆಗಳನ್ನು ಅನಾವರಣಗೊಳಿಸಿದ್ದಾರೆ.
ನಾನು ಡಿ ಆರ ನಾಗರಾಜ ಅವರ ಕೃತಿಯನ್ನು ಓದಿದ ಮೇಲೆ ಅವರಿಗಿರುವ ಅಲ್ಲಮನ ದೈತ್ಯ ಪ್ರತಿಭೆ ನಾಡಿನ ಜನತೆಗೆ ಪರಿಚಯ ಮಾಡಿಕೊಡುವ ಮೂಲಕ ಅಲ್ಲಮನ ವ್ಯಕ್ತಿತ್ವ ವೈಚಾರಿಕ ಮನೋಭಾವ ಹೊರ ಹಾಕಿದ್ದಾರೆ.
ಆದರೆ ಅಲ್ಲಮನು ಶೈವ ಪಂಥದವರು ಆರಂಭದಲ್ಲಿ
ಆದರೆ ಕೊನೆಗೆ ಅವನು ನಿರವಲಯ ನಿರಾಭಾರಿ ಜಂಗಮ ತತ್ವ ಸಿದ್ಧಾಂತಗಳನ್ನು ಅನುಸರಿಸಿ ಬಯಲು ಶೂನ್ಯ ಎಂಬ ನಿಸರ್ಗದತ್ತವಾದ ಚಿಂತನಾ ಕ್ರಮಕ್ಕೆ ಮುಂದಾಗಿರುವನು.
ಹೀಗಾಗಿ ಅಲ್ಲಮರನ್ನು ಶೈವ ಪ್ರತಿಭೆ ಎನ್ನುವುದಕ್ಕಿಂತ ಮಹಾ ಮಾನವನ ಪ್ರತಿಭೆ ಎಂದಿದ್ದರೆ ಇನ್ನೂ ಹೆಚ್ಚು ಪರಿಣಾಮಕಾರಿ ಎನಿಸುತ್ತದೆ.
ಮೇಲಾಗಿ ಉದಾತ್ತಿಕಾರಣದ ವೈಚಾರಿಕ ನಿಲುವು ಅಲ್ಲಮನ ವಚನಗಳಲ್ಲಿ ಕಂಡು ಬರುವ ಕಾರಣ ಬಸವಣ್ಣ ಅಲ್ಲಮ ಅಕ್ಕ ಬಹುತೇಕ ಶರಣರು ಯಾವುದೇ
ಶೈವ ವೈಷ್ಣವ ಸಂಪ್ರದಾಯದ ಕಟ್ಟು ಪಾಡಿಗೆ ಸಿಲುಕಿದವರಲ್ಲ.
ಇದು ನನ್ನ ವ್ಯಕ್ತಿಗತ ಅಭಿಪ್ರಾಯ.
-ಡಾ ಶಶಿಕಾಂತ ಪಟ್ಟಣ ರಾಮದುರ್ಗ