ಶಿಕ್ಷಣ ತಜ್ಞೆ ಮಕ್ಕಳ ಮಹಾ ತಾಯಿ ಡಾ ವೀಣಾ ಬಿರಾದಾರ
ಧಾರವಾಡ ಜ್ಞಾನದ ಬೆಳಕನ್ನು ಚೆಲ್ಲುವ ಮಹಾಮನೆ . ಸಾಹಿತ್ಯದ ತವರು ಮಲೆನಾಡಿನ ಹೆಬ್ಬಾಗಿಲು. ಇಂತಹ ಒಂದು ಸುಂದರ ಸ್ಥಳದಲ್ಲಿ ಶ್ರಿ ಸಾಯಿ ಪದವಿ ಪೂರ್ವ ವಿಜ್ಞಾನ ವಾಣಿಜ್ಯ ವಿದ್ಯಾಲಯ ಕಿಂಡರ್ ಗಾರ್ಡನ್ ಮಕ್ಕಳ ಶಿಶು ವಿಹಾರ ಹೀಗೆ ಸ್ವತಃ ಪಿಚ್ ಡಿ ಮಾಡಿ ಈಗ ಎಲ್ ಎಲ್ ಎಂ ಮಾಡುತ್ತಿರುವ ಡಾ ವೀಣಾ ಒಬ್ಬ ಅಪರೂಪದ ವ್ಯಕ್ತಿತ್ವ .
ಕ್ರಿಯಾಶೀಲ ಮನಸ್ಸು ಏನಾದರೂ ಮಾಡಬೇಕೆಂಬ ಪ್ರಾಮಾಣಿಕ ಪ್ರಯತ್ನ ಇವರದ್ದು.
ಧಾರವಾಡ ನಗರ ಮಧ್ಯದ ಹುಬ್ಬಳ್ಳಿಗೆ ಹೋಗುವ ದಾರಿಯಲ್ಲಿ ಶ್ರಿ ಸಾಯಿ ಶಿಕ್ಷಣ ಸಂಸ್ಥೆ ತಲೆ ಎತ್ತಿ ನಿಂತಿದೆ.
ಮಕ್ಕಳಿಗೆ ಭವಿಷ್ಯ ನಿರ್ಮಾಣ ಮಾಡುವ ಕಾರ್ಯಗಾರ ವ್ಯಕ್ತಿತ್ವ ವಿಕಸನ ಸ್ಪರ್ಧಾತ್ಮಕ ತರಬೇತಿ ನೀಡುವ ಸುಂದರ ವಾತಾವರಣ ಇಲ್ಲಿದೇ. ಸುಸಜ್ಜಿತ ಕ್ಲಾಸ್ ರೂಮ್ ಪ್ರಯೋಗ ಶಾಲೆ ಉತ್ತಮ ಪ್ರಾಧ್ಯಾಪಕರನ್ನು ನೇಮಕ ಮಾಡಿ ಗುಣ ಮಟ್ಟದ ಶಿಕ್ಷಣ ನೀಡುವ ಶಿಕ್ಷಣ ಪ್ರೇಮಿ.
ಇವರ ಮನೆಯವರು ಕುಟುಂಬದ ಸದಸ್ಯರು ಡಾ ವೀಣಾ ಬಿರಾದಾರ ಅವರಿಗೆ ಬೆನ್ನೆಲೇಬು ಆಗಿ ಬೆಂಬಲಿಸುತ್ತಿದ್ದಾರೆ. ಮನೆಯಲ್ಲಿ ಗೃಹಿಣಿ ಕಾಲೇಜಿನಲ್ಲಿ ಆಡಳಿತ ಅಧಿಕಾರಿ ಮಕ್ಕಳಿಗೆ ಮಹಾ ತಾಯಿ .ಇವರು ಅಪ್ಪಟ ಬಸವಾಭಿಮಾನಿ ಸಾಹಿತಿ
ಬಸವರಾಜ ಕಟ್ಟೀಮನಿ ಅವರ ಮೊಮ್ಮಗಳು.
ಹೀಗೆ ಹಲವು ಮುಖದ ವ್ಯಕ್ತಿತ್ವ ಹೊಂದಿದ ದಿಟ್ಟ ಹಠವಾದಿ ಶಿಕ್ಷಣ ತಜ್ಞೆ ಸಮಾಜ ಸೇವಕಿ ಇವರಿಗೆ ಎಲ್ಲಾ ಯಶವನ್ನು ದೇವರು ನೀಡಲಿ.
ಸುಧಾ ಪಾಟೀಲ ಬೆಳಗಾವಿ