ಬಸವಾವಭಿಮಾನಿಗಳ ಸಮ್ಮೇಳನದಲ್ಲಿ ಅನುಭವ ಸಿರಿ ಲೋಕಾರ್ಪಣೆ
ದಿನಾಂಕ 28 ಭಾನುವಾರ ಬೆಳಿಗ್ಗೆ ಹತ್ತು ಗಂಟೆಗೆ ವಿಜಾಪುರದ ಹೆಸ್ಕಾಂ ಸಾಂಸ್ಕೃತಿಕ ಭವನದಲ್ಲಿ
ಡಾ ಫ ಗು ಹಳಕಟ್ಟಿ ವೇದಿಕೆಯಲ್ಲಿ ಹಿರಿಯ ಶಿಕ್ಷಣ ತಜ್ಞೆ ಗುಲ್ಬರ್ಗ ವಿಶ್ವ ವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕಿ ಡಾ ಸರಸ್ವತಿ ಪಾಟೀಲ ಇವರ ಅಭಿನಂದನಾ ಸಮಾರಂಭ ನಡೆಯಲಿದ್ದು ಅನುಭವ ಸಿರಿ ಕೃತಿ ಲೋಕಾರ್ಪಣೆಗೊಳ್ಳಲಿದೆ.
ಈ ಕಾರ್ಯಕ್ರಮವು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ವಚನ ಅಧ್ಯಯನ ವೇದಿಕೆ ಮತ್ತು ಅಕ್ಕನ ಅರಿವಿನ ಬಸವಾಭಿಮಾನಿಗಳ ಸಹಯೋಗದಲ್ಲಿ ನಡೆಯಲಿದೆ.
ಉದ್ಘಾಟಕರಾಗಿ ಡಾ ಎಂ ಬಿ ಪಾಟೀಲ ಸಚಿವರು ಕರ್ನಾಟಕ ಸರಕಾರ ಇವರು ಆಗಮಿಸಲಿದ್ದು ಅಧ್ಯಕ್ಷತೆಯನ್ನು ಶ್ರಿ ಮಹಾದೇವ ಹೊರಟ್ಟಿ ಅವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೊಡಗು ವಿಶ್ವ ವಿದ್ಯಾಲಯದ ಉಪಕುಲಪತಿ
ಡಾ ಅಶೋಕ ಆಲೂರ ಇವರು ಭಾಗವಹಿಸುತ್ತಾರೆ.
ಇವುಗಳಲ್ಲದೆ ಎರಡು ಗೋಷ್ಠಿ ನಡೆಯಲಿದ್ದು ಡಾ ಸೋಮಶೇಖರ ವಾಲಿ ಡಾ ಎಂ ಎಂ ಪಡಶೆಟ್ಟಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾನ್ಹ 3 ಘಂಟೆಗೆ ಡಾ ಸರಸ್ವತಿ ಪಾಟೀಲ ಇವರ ಅಭಿನಂದನಾ ಗ್ರಂಥ ಬಿಡುಗಡೆ ಆಗಲಿದ್ದು ಗೌರವ ಸನ್ಮಾನ ನಡೆಯಲಿದೆ ಡಾ ಲಿಂಗಪ್ಪ ಕಲಬುರ್ಗಿ ನ್ಯೂಜಿಲೆಂಡ್ ಇವರು ಅಧ್ಯಕ್ಷತೆ ವಹಿಸಲಿದ್ದಾರೆ
ಅನುಭವ ಸಿರಿ ಕೃತಿ ಕುರಿತಾಗಿ
ಖ್ಯಾತ ಕಥೆಗಾರ ಡಾ ಚೆನ್ನಪ್ಪ ಕಟ್ಟಿ ಇವರು ಮಾತನಾಡಲಿದ್ದಾರೆ.
ಇದೇ ಸಂದರ್ಭದಲ್ಲಿ
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇವರ ಐದು ಕೃತಿ ಬಿಡುಗಡೆ ಆಗಲಿದ್ದು ಪ್ರೊ ಬಿ ಆರ ಪೊಲೀಸ ಪಾಟೀಲ ಖ್ಯಾತ ನಾಟಕಕಾರರು ಅಧ್ಯಕ್ಷತೆ ವಹಿಸಿಲಿದ್ದಾರೆ.
ಐದು ಕೃತಿ ಕುರಿತಾಗಿ
ನಾಡಿನ ಅನೇಕ ಸಾಹಿತಿಗಳು ಬಸವಾಭಿಮಾನಿಗಳು ಆಗಮಿಸಲಿದ್ದಾರೆ.
ಡಾ ವೀಣಾ ಹೂಗಾರ ಡಾ ಶಾರದಾಮಣಿ ಹುನಶಾಳ ಶ್ರಿ ಅಣ್ಣಾರಾಯ ಬಿರಾದಾರ
ಡಾ ಎಂ ಎಸ್ ಮದಭಾವಿ
ವಿ ಸಿ ನಾಗಠಾಣ ಜಯಶ್ರೀ ಮತ್ತು ಚೆನ್ನಬಸವಣ್ಣ ಮಹಾಜನಶೆಟ್ಟಿ ಡಾ ದಾನಮ್ಮ ಝಳಕಿ ಪ್ರೊ ಶಾರದಮ್ಮ ಪಾಟೀಲ ಸುಧಾ ಪಾಟೀಲ ಗೌರಮ್ಮ ನಾಶಿ ನಿರ್ಮಲ ಬಟ್ಟಲ ಪ್ರೊ ದೀಪಾ ಜಿಗ ಬಡ್ಡಿ ಸುಧಾ ಕೌಜಗೆರಿ
ರಾಯಚೂರು ಧಾರವಾಡ ಗದಗ ಬೆಳಗಾವಿ ಹುಬ್ಬಳ್ಳಿ ಬಾದಾಮಿ ಬಾಗಲಕೋಟೆ ಪುಣೆ ಬಸವನ ಬಾಗೇವಾಡಿ ಸಿಂದಗಿ ಬಿಜಾಪುರ ಜಿಲ್ಲೆಯ ಎಲ್ಲಾ ಬಸವಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ .
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇವರ ಪ್ರಕಟಣೆಗಳನ್ನು ಡಾ ಎಂ ಎಂ ಕಲಬುರ್ಗಿ ಗ್ರಂಥ ಮಳಿಗೆಯಲ್ಲಿ ಇಡಲಾಗುವುದು
ಹೆಚ್ಚಿನ ಸಂಖ್ಯೆಯಲ್ಲಿ ಬಸವ ಭಕ್ತರು ಈ ಕಾರ್ಯಕ್ರಮಕ್ಕೆ ಬರಬೇಕೆಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಅಧ್ಯಕ್ಷ ಡಾ ಶಶಿಕಾಂತ ಪಟ್ಟಣ ಹಾಗೂ ಡಾ ಆನಂದ ಪಾಟೀಲ (ಇಂಗಳೇಶ್ವರ. ಹೆಗಡಿಹಾಳ) ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.