ಅಭಿನಂದನಾ ಸಮಾರಂಭ ಮತ್ತು ಅನುಭವ ಸಿರಿ ಗ್ರಂಥ ಲೋಕಾರ್ಪಣೆ

ಅಭಿನಂದನಾ ಸಮಾರಂಭ ಮತ್ತು ಅನುಭವ ಸಿರಿ ಗ್ರಂಥ ಲೋಕಾರ್ಪಣೆ

e-ಸುದ್ದಿ ವಿಜಯಪುರ 

ದಿನಾಂಕ 28 -1- 2024 ರಂದು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ, ಅಕ್ಕನ ಅರಿವು ವಚನ ಅಧ್ಯಯನ ವೇದಿಕೆ ಇವುಗಳ ಸಹಯೋಗದಲ್ಲಿ ಡಾಕ್ಟರ್ ಸರಸ್ವತಿ ಪಾಟೀಲ್ ವಿಶ್ರಾಂತ ಪ್ರಾಧ್ಯಾಪಕರು ಗುಲ್ಬರ್ಗ ವಿಶ್ವವಿದ್ಯಾಲಯ ಇವರ ಅಭಿನಂದನಾ ಸಮಾರಂಭ ಮತ್ತು ಅನುಭವ ಸಿರಿ ಗ್ರಂಥ ಲೋಕಾರ್ಪಣೆ ಜರುಗಿತು.
ಕಾರ್ಯಕ್ರಮಕ್ಕೆ ಷಟಸ್ಥಲ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.
ಫ.ಗು. ಹಳಕಟ್ಟಿ ವೇದಿಕೆಯಲ್ಲಿ ನಡೆದ ಉದ್ಘಾಟನಾ ಸಮಾರಂಭವನ್ನು ಸನ್ಮಾನ್ಯ ಶ್ರೀ ಡಾಕ್ಟರ್ ಎಂ ಬಿ ಪಾಟೀಲ್ ಸಚಿವರು ನೆರವೇರಿಸಿ ಅನುಭವ ಸಿರಿ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು.

 

ಉದ್ಘಾಟನಾ ನುಡಿಗಳಲ್ಲಿ…. ಇಂಥ ಕಾರ್ಯಕ್ರಮಗಳು ಸಮಾಜದಲ್ಲಿ ಮಾದರಿಯಾಗುವಂತಹ ಕಾರ್ಯಕ್ರಮಗಳು.ಹಿರಿಯರ ಸಾಧನೆಯನ್ನ ಗುರುತಿಸಿ ಅವರನ್ನು ಗೌರವಿಸುವ ಮೂಲಕ ಮುಂದಿನ ಪೀಳಿಗೆಗೆ ಒಳ್ಳೆಯ ಸಂದೇಶವನ್ನು ಕೊಟ್ಟಂತಾಗುತ್ತದೆ. ಅನುಭವ ಸಿರಿ ಗ್ರಂಥವನ್ನು ಲೋಕಾರ್ಪಣೆಗೊಳಿಸಿ ಡಾ. ಸರಸ್ವತಿ ಪಾಟೀಲ್ ಅವರಿಗೆ ಈ ಗ್ರಂಥವನ್ನು ಸಮರ್ಪಿಸುವುದರ ಮೂಲಕ ಅವರಿಗೆ ಗೌರವ ಸನ್ಮಾನವನ್ನು ಕೈಗೊಳ್ಳಲಾಯಿತು.

ಅನುಭವ ಸಿರಿ ಗ್ರಂಥ ಸಂಶೋಧನಾರ್ಥೀಗಳಿಗೂ ಪೂರಕ ಅಧ್ಯಯನ ಗ್ರಂಥವಾಗಬಹುದು. ವಚನ ಸಾಹಿತ್ಯದ ಮಹತ್ವವನ್ನು ಇಂದಿನ ಯುವ ಜನಾಂಗಕ್ಕೆ ಬಿತ್ತರಿಸುವ ಕಾರ್ಯ ಇಂಥ ಕಾರ್ಯಕ್ರಮಗಳ ಮೂಲಕ ಆಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾಕ್ಟರ್ ಅಶೋಕ್ ಆಲೂರ್ ಅವರು ವಚನ ಸಾಹಿತ್ಯದ ಆಳವಾದ ಜ್ಞಾನ ಮೊಗೆದಷ್ಟು ಬಗೆಗೆ ಸಿಗುವಂತಹದ್ದು. ಜಗತ್ತಿನ ಶ್ರೇಷ್ಠ ದಾರ್ಶನಿಕ ಸಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಕುರಿತು ಮಾತನಾಡಿದರು. ವಚನಗಳು ಇಂದಿನ ಯುವ ಜನಾಂಗಕ್ಕೆ ಪಚನವಾಗಬೇಕಾದರೆ ಅವುಗಳ ಕುರಿತಾಗಿ ಮನನ ಮಾಡಿಸಬೇಕು ವಚನಗಳ ಮಹತ್ವವನ್ನ ತಿಳಿಸಿ ಹೇಳಬೇಕು ಅಂದಾಗ ಮಾತ್ರ ಅವರಿಗೆ ವಚನ ಸಾಹಿತ್ಯದ ಮಹತ್ವದ ಅರಿವಾಗುತ್ತದೆ. ಜಾಗತಿಕ ತಾತ್ವಿಕ ನೆಲೆಯಲ್ಲಿ ಬಸವಣ್ಣನನ್ನು ನೋಡುವುದಾದರೆ ನಾವು ಮೊದಲು ಮಹಾ ಮಾನವತಾವಾದಿ ಬಸವಣ್ಣನನ್ನು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾಕ್ಟರ್ ಶಶಿಕಾಂತ್ ಪಟ್ಟಣ ಅಧ್ಯಕ್ಷರು ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಪುಣೆ ಇವರು ತಮ್ಮ ಅಧ್ಯಕ್ಷೀಯ ನುಡಿಗಳನ್ನು ಮಾತನಾಡಿದರು. ರಾಜ್ಯದ ಪ್ರತಿಯೊಂದು ವಿಶ್ವವಿದ್ಯಾಲಯದಲ್ಲಿ ಬಸವ ಅಧ್ಯಯನ ಕೇಂದ್ರವನ್ನು ಸ್ಥಾಪಿಸ ಬೇಕೆಂಬ ತಮ್ಮ ಕಳಕಳಿಯನ್ನು ಹೇಳಿಕೊಂಡರು. ಅಲ್ಲದೆ ಎಂ ಎಂ ಕಲಬುರ್ಗಿಯವರ ಅಧ್ಯಯನ ಪೀಠವನ್ನು ಕೂಡ ಸ್ಥಾಪಿಸಬೇಕೆಂದು ಸಚಿವರಲ್ಲಿ ಮನವಿ ಮಾಡಿಕೊಂಡರು.
ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾಕ್ಟರ್ ಸರಸ್ವತಿ ಪಾಟೀಲ್ ಇವರ ಅಭಿನಂದನ ಸಮಾರಂಭದ ನಿಮಿತ್ಯವಾಗಿ
ವಚನ ಅಧ್ಯಯನ ವೇದಿಕೆ ಹಮ್ಮಿಕೊಂಡ ಈ ಕಾರ್ಯಕ್ರಮದ ಸದುದ್ದೇಶ ವಚನ ಸಾಹಿತ್ಯವನ್ನು ಹೆಚ್ಚು ಹೆಚ್ಚು ಪ್ರಚಾರ ಮಾಡಬೇಕು. ಜನರಿಗೆ ವಚನ ಸಾಹಿತ್ಯವನ್ನು ತಲುಪಿಸಬೇಕು ಎಂಬ ಕಳಕಳಿಯಿಂದ ಇಂಥ ಕಾರ್ಯಕ್ರಮಗಳು ಆಗಾಗ ಜರುಗುತ್ತಿರುತ್ತವೆ.

ಉದ್ಘಾಟನಾ ಕಾರ್ಯಕ್ರಮದ ನಂತರ ಎರಡು ಗೋಷ್ಠಿಗಳು ಜರುಗಿದವು. ಗೋಷ್ಠಿಗಳಲ್ಲಿ ವಿಜಯಪುರ ಜಿಲ್ಲೆಯ ವಚನಕಾರ್ತಿಯರ ಕುರಿತಾಗಿ ಡಾ. ವೀಣಾ ಹೂಗಾರ್ ಜಯಶ್ರೀ ವಾಲಿ,ನಿಂಗಮ್ಮ ಪತಂಗೆ,ಪ್ರೇಮಕ್ಕ ಅಣ್ಣಿಗೇರಿ ಡಾ. ಮೀನಾಕ್ಷಿ ಪಾಟೀಲ, ಜಯಶ್ರೀ ಮಹಾಜನ ಶೆಟ್ಟಿ ಶಾರದಾಮಣಿ ಹುನಶಾಳ ಇವರು ಉಪನ್ಯಾಸವನ್ನು ನೀಡಿದರು. ಅನುಭವ ಸಿರಿ ಗ್ರಂಥದ ಕುರಿತು ಡಾಕ್ಟರ್ ಚನ್ನಪ್ಪ ಕಟ್ಟಿ, ಕತೆಗಾರರು ಇವರು ಮಾತನಾಡಿದರು. ಇದೇ ವೇಳೆ ವಚನ ಅಧ್ಯಯನ ವೇದಿಕೆಯ ಒಟ್ಟು ಐದು ಕೃತಿಗಳನ್ನು ಲೋಕಾರ್ಪಣೆಗೊಳಿಸಲಾಯಿತು.
ಪ್ರೊಫೆಸರ್ ಬಿ.ಆರ್ ಪೊಲೀಸ್ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಡಾ. ಸುಧಾ ಕೌಜಗೇರಿ ಕೃತಿಗಳ ಕುರಿತು ಮಾತನಾಡಿದರು. ಒಟ್ಟು ಕಾರ್ಯಕ್ರಮವನ್ನು ಡಾಕ್ಟರ್ ನಿರ್ಮಲಾ ಭಟ್ಟಲ್ ,ಪ್ರಿಯಂವದಾ ಹುಲಗಬಾಳಿ, ಜಯಶ್ರೀ ಮಹಾಜನ್ ಶೆಟ್ಟಿ, ಡಾ. ಬಸಮ್ಮ ಗಂಗನಹಳ್ಳಿ
ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಿವಪ್ಪ ಗವಸಾನಿ ಡಾ. ಸೋಮಶೇಖರ್ ವಾಲಿ, ಅಣ್ಣಾರಾಯಿ ಬಿರಾದಾರ್, ಡಾ. ಮಹಾಂತೇಶ್ ಬಿರಾದಾರ್, ಅಶೋಕ್ ಸಿಂದಗಿ ,ಕರ್ನಲ್ ಅನಿಲ್ ಸಿಂದಗಿ ,ಸುಧಾ ಪಾಟೀಲ್ ಚನ್ನಬಸವಣ್ಣ ಮಹಾಜನ್ ಶೆಟ್ಟಿ ಹಾಗೂ ಡಾ. ಸರಸ್ವತಿ ಪಾಟೀಲ್ ಅವರ ಪರಿವಾರದವರು ಉಪಸ್ಥಿತರಿದ್ದರು.

Don`t copy text!