ಬೆಳಕನಿತ್ತವಳೆ…

ಬೆಳಕನಿತ್ತವಳೆ…

ಯತ್ರನಾರ್ಯಸ್ತು ಪೂಜ್ಯತೆ ಪುಣ್ಯ ಪಡೆದವಳೆ ಕುಲತಾರಿಣಿಯೇ
ಧರೆಯ ಅಭಿದಾನ ಧರಿಸಿ ಕ್ಷಮಯಾಧರಿತ್ರಿ ಕುಲನಾರಿಯೇ

ನವಮಾಸಗಳ ಬಸಿರ ಹೊತ್ತು ಸಂತ ತ್ಯಾಗಿಯೋಗಿ ಮಹಾತ್ಮರನು ಜಗಕೆ
ನೀಡಿದವಳೆ ನಿಜಮಹಿಮಳೆ ಮಾನ್ಯಳೆ ಕುಲೋದ್ಧಾರಕ ಮಂಗಳೆ

ಮನೆಮನ ಬೆಳಗಿ ಬೆಳಕನಿತ್ತವಳೆ
ಮಕ್ಕಳ ಬದುಕ ಬೇರಿಗೆ ಬೆವರಹರಿಸಿ ಬೆನ್ನೆಲುಬಾದವಳೆ
ಸೃಷ್ಟಿಗೆ ಭೂಷಣಪ್ರಾಯ ಮಗಳೆ

ಧರೆಯ ಸಿರಿಯ ಹಸಿರಿಗೆ ಮಂಗಳೆ
ಕರುನಾಡ ಕನ್ನಡಿಗರ ಕಣ್ಮಣಿ ಕನ್ನಡತಿಯಾಗಿ ಮೆರೆವ ಕುಲತಿಲಕಳೆ
ಕವಿಕಲ್ಪನೆಯ ಕಾವ್ಯಕನ್ನಿಕೆಯವಳೆ

ಇಳೆಗೆ ಕಳೆ ನೀಡಿ ಕಂಗೊಳಿಸುವವಳೆ
ಪ್ರತಿಮನೆಯ ಆರಾಧ್ಯಧೈವ ಧನ್ಯಳೆ
ಪುರುಷನ ಹೆಗಲೇನಿಯಾಗಿ ನಡೆವಳೆ ಕುಲವಧು ಕುಂಕುಮಶೋಭಿತ ಸಿಂಧೂರಳೆ  ತೊಟ್ಟಿಲ          ತೂಗುತ ಜಗತ್ತನ್ನೇ ತೂಗುವವಳೇ

ಮೌನವೇ ಆಭರಣ ಮಂದಸ್ಮಿತಳೆ
ಮಾತಿನಲಿ ಸೋತು ಗೆಲ್ಲುವವಳೆ
ಮತಿಯಲಿ ಶ್ರೀಮತಿ ಎನಿಸಿದವಳೆ
ತವರುಕೀರುತಿಗೆ ಮೆರಗು ತಂದವಳೆ

ಅವಕಾಶ ಸಿಕ್ಕರೆ ಆಕಾಶಕ್ಕೆರುವಳೇ
ಪ್ರತಿಕ್ಷೇತ್ರದಲಿ ಹೆಜ್ಜೆ ಗುರುತಿನವಳೆ
ಹೆಣ್ಣಿನ ವಿವಿಧ ಅವತಾರಗಳಲಿ ಈ
ಜಗವನ್ನು ಪೊರೆವವಳೆ ಧಣಿವರಿಯದವಳೆ ಧನ್ಯಾತ್ಮಳೆ
ಧರಣಿಯಲಿ ನಿನ್ನದೆ ಯಶೋಗಾಥೆ
ಮಣ್ಣ‌ ಕಣಕಣದಲಿ ಭೂಮಾತೆ
ನಿನಗೇ ಬೇಕೆ ಒಂದೇ ದಿನದ ಈ ಮಹಿಳಾ ದಿನಾಚರಣೆ?

ಜಯಶ್ರೀ ಭ.ಭಂಡಾರಿ.
ಬಾದಾಮಿ.

Don`t copy text!