ಮಳೆಯ ಸುರಿಸು

ಮಳೆಯ ಸುರಿಸು

ಕೋಪವೇಕೆ
ಮೇಘರಾಜ
ಬಿಸಿಲು ಬೆಂಕಿ
ಕೆಂಡ ಮಳೆ
ಕಾಯುತಿದೆ
ನೆಲ ದಗದಗ

ನಾಡು ಕಟ್ಟಲು
ಕಾಡು ಕಡೆದೆವು
ಪ್ರಾಣಿ ಪಕ್ಷಿ
ಕೊಂದು ಮೆರೆದೆವು
ಕೆರೆ ಹಳ್ಳ ಒತ್ತುವರಿ
ಬಾವಿ ಮುಚ್ಚಿಬಿಟ್ಟೆವು

ಆಣೆಕಟ್ಟು
ಉಸಿರುಕಟ್ಟಿದೆ
ಹೂಳು ತುಂಬಿದೆ
ನದಿಯ ಒಡಲಿಗೆ
ತ್ಯಾಜ್ಯ ಕಸ
ವಿಷದ ಮೋರಿಯಾಗಿದೆ

ತಪ್ಪು ಮನ್ನಿಸು
ಮೋಡ ಬಿಚ್ಚಿ
ಮಳೆಯ ಸುರಿಸು
ಶಿಕ್ಷೆ ಬೇಡ
ಪಶು ಹಕ್ಕಿ ಕುಲಕೆ
ದಯೆ ಪ್ರೀತಿ ಜೀವಕೆ

-ಡಾ ಶಶಿಕಾಂತ ಪಟ್ಟಣ ರಾಮದುರ್ಗ

Don`t copy text!