ಸ್ತ್ರೀ ಜೀವನದ ಸಾರ್ಥಕತೆ. ಮದುವೆ ದಾಂಪತ್ಯವಲ್ಲ – ಡಾ. ಸರ್ವ ಮಂಗಳ ಸಕ್ರಿ
ಧರ್ಮ ಕಟ್ಟುಪಾಡುಗಳ ನಡುವೆ ಅಭಿವ್ಯಕ್ತಿ ಸ್ವಾತಂತ್ರ್ಯತೆಯನ್ನು ಮೆರೆದ ಅಕ್ಕನ ಅಧ್ಯಾತ್ಮಿಕ ಧೈರ್ಯ ಶರಣೆ ಸತ್ಯಕ್ಕಳ ಕಾಯಕ ನಿಷ್ಠೆ ನಾವೆಲ್ಲ ಮಹಿಳೆಯರು ಅರಿತುಕೊಳ್ಳಬೇಕಾಗಿದೆ ಎಂದು ಡಾ. ಸರ್ವ ಮಂಗಳ ಸಕ್ರಿ ನುಡಿದರು.
ಬಸವ ಕೇಂದ್ರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಕೇಂದ್ರ ,ಮತ್ತು ಅಕ್ಕನ ಬಳಗ, ಸಹಯೋಗದಲ್ಲಿ ಹಮ್ಮಿಕೊಂಡ ಮಹಿಳಾ ದಿನಾಚರಣೆಯ ಕಾರ್ಯಕ್ರಮವನ್ನು ಶರಣೆ ಅಕ್ಕಮಹಾದೇವಿ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದರು.
ಮಹಿಳೆಯರು ತಮ್ಮ ಜೀವನ ಸಾರ್ಥಕತೆಯನ್ನು ಮದುವೆ ಮಾಡಿಕೊಂಡು ದಾಂಪತ್ಯ ಜೀವನ ನಡೆಸುದಷ್ಟೇ ಅಲ್ಲ ಅಕ್ಕಮಹಾದೇವಿ ಸತ್ಯಕ್ಕ ಹಾಗೂ ಇನ್ನಿತರ ಸಾಧಕರ ತರಹ ನಾವು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕಾಗಿದೆ, ಆಗ ನಮ್ಮ ಜೀವನ ಪರಿಪೂರ್ಣಗೊಳುತ್ತದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಉಪಸನ್ಯಾಸಕರಾಗಿ ಆಗಮಿಸಿದ ಶರಣಿ ಕಲ್ಯಾಣಿೇಶ್ವರಿ ಮಾತನಾಡುತ್ತಾ ಶರಣೀಯರ ಕಾಯಕ ತತ್ವದ ವಿಸ್ತಾರತೆ ಮನದ ಹತೋಟಿಯ ಮೂಲಕ ಕಾಯಕವನ್ನು ಮಾಡಬೇಕೆಂದರು.
ಮನುಷ್ಯ ಜನ್ಮ ಸಾರ್ಥಕತೆಯು ನಮ್ಮ ನಿತ್ಯ ಬದುಕಿನಲ್ಲಿ ಅಡಗಿದೆ,, ಶ್ರೀಮಂತಿಕೆಯ ವ್ಯಾಮೋಹ ಮಹಿಳೆ ಯರು ಒಳಗಾಗುತ್ತಿದ್ದಾರೆ ಅದರಿಂದ ಹೊರ ಬರಬೇಕಾದರೆ ಇಂಥ ಅಧ್ಯಾತ್ಮ ಚಿಂತನೆಯಲ್ಲಿ ತೊಡಗಬೇಕು ಇಂದು ವಿಶ್ವ ಮಹಿಳಾ ದಿನಾಚರಣೆಯನ್ನು ಮಾಡುವ ಉದ್ದೇಶ ಶರಣ ದೃಢ ಭಕ್ತಿಯತ್ತ ಉನ್ನುಗಬೇಕಾಗಿದೆ ಎಂದು ಹೇಳಿದರು.
ಬಸವ ಕೇಂದ್ರದ ಅಧ್ಯಕ್ಷರಾದ ರಾಚನ ಗೌಡ ಕೋಳೂರು ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಸ್ತ್ರೀ ಸ್ವಾತಂತ್ರ್ಯ ನಿಮಗೆ ಆಗಲೇ ಲಭಿಸಿದೆ ,ಅದನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಕುಟುಂಬ, ಸಮಾಜ, ಹಾಗೂ ಸುತ್ತಮುತ್ತಲಿನ ವಾತಾವರಣವನ್ನು ಉತ್ತಮಗೊಳಿಸುವ ಕಾರ್ಯ ಹಾಗೂ ಜವಾಬ್ದಾರಿ ನಿಮ್ಮ ಮೇಲಿದೆ ಮಕ್ಕಳನ್ನು ಅತ್ಯಾತ್ಮ ಚಿಂತನೆ ಯೊಂದಿಗೆ ಉತ್ತಮನಾಗರಿಕರನ್ನಾಗಿ ಬೆಳೆಸಿ ಸ್ತ್ರೀಶಕ್ತಿಯ ಪದಕ್ಕೆ ಅರ್ಥ ನೀಡಬೇಕೆಂದು ಕರೆ ನೀಡಿದರು. ವೇದಿಕೆ ಮೇಲೆ ಬಸವ ಕೇಂದ್ರ ಅಧ್ಯಕ್ಷರಾದ ರಾಚನ ಗೌಡ ಕೋಳೂರು, ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷರು ಡಾ, ಸರ್ವ ಮಂಗಳ ಸಕ್ರಿ, ಶರಣೆ ಕಲ್ಯಾಣೇಶ್ವರಿ,, ದಾನಮ್ಮ ಸುಭಾಷ್ ಚಂದ್ರ,, ಸರೋಜಮ್ಮ ಮಾಲಿ ಪಾಟೀಲ್ ಹಾಗೂ ಸುಮಂಗಲಮ್ಮ ಹಿರೇಮಠ್ ವೇದಿಕೆ ಮೇಲೆ ಉಪಸ್ಥಿತರಿದ್ದರು,,, ಶರಣೆ ಪಾರ್ವತಿ ಪಾಟೀಲ್ ಸರ್ವರ ನ್ನು ಸ್ವಾಗತಿಸಿದರು, ಶರಣೆ ಸುಮಂಗಲ ಸಕ್ರಿ ಕಾರ್ಯಕ್ರಮ ನಿರೂಪಿಸಿದರು,
ಶರಣೆ ಲಕ್ಷ್ಮಿ ಪಟ್ಟಣಶೆಟ್ಟಿ ಶರಣರು ಸಮರ್ಪಣೆಗೆದರು ಅನೇಕ ಬಸವ ಅಭಿಮಾನಿಗಳು ಅಧ್ಯಾತ್ಮ ಚಿಂತಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದರು,ಈ ಸಂದರ್ಭದಲ್ಲಿ ಅಧ್ಯಾತ್ಮ ಕ್ಷೇತ್ರದಲ್ಲಿ. ಸಾಧನೆಗೈದ ಶರಣೆ, ಕಲ್ಯಾಣಿಶ್ವರಿಯವರಿಗೆ ಗೌರವಿಸಿ ಸನ್ಮಾನಿಸಲಾಯಿತು